ಅಸಾಧಾರಣ ಒರೆಶ್ನಿಕ್: ಪಾಶ್ಚಾತ್ಯ ರಾಷ್ಟ್ರಗಳನ್ನು ಹಿಮ್ಮೆಟ್ಟಿಸೀತೇ ರಷ್ಯಾದ ಹೈಪರ್‌ಸಾನಿಕ್ ಕ್ಷಿಪಣಿ?

ರಷ್ಯಾ ಅಧ್ಯಕ್ಷರಾದ ವ್ಲಾಡಿಮಿರ್ ಪುಟಿನ್ ಅವರು ಗುರುವಾರ 'ಒರೆಶ್ನಿಕ್' ಎಂಬ ಮಧ್ಯಮ ವ್ಯಾಪ್ತಿಯ ಹೈಪರ್‌ಸಾನಿಕ್ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪರಿಚಯಿಸಿದರು. ಉಕ್ರೇನ್ ಎಟಿಎಸಿಎಂಎಸ್ ಮತ್ತು ಸ್ಟಾರ್ಮ್ ಶ್ಯಾಡೋ ಸೇರಿದಂತೆ ನ್ಯಾಟೋ ನೀಡಿದ ದೀರ್ಘ ವ್ಯಾಪ್ತಿಯ ಕ್ಷಿಪಣಿಗಳನ್ನು ರಷ್ಯಾ ಮೇಲೆ ಪ್ರಯೋಗಿಸಿತ್ತು. ಇದಕ್ಕೆ ಪ್ರತಿಯಾಗಿ, ರಷ್ಯಾ ಒರೆಶ್ನಿಕ್ ಕ್ಷಿಪಣಿಯನ್ನು ನವೆಂಬರ್ 21ರ ರಾತ್ರಿ ಉಕ್ರೇನ್ ಮೇಲೆ ಪ್ರಯೋಗಿಸಿತು. ನ್ಯಾಟೋ ನೀಡಿದ ಕ್ಷಿಪಣಿಗಳನ್ನು ಉಕ್ರೇನ್ ರಷ್ಯಾದ ಬ್ರಿಯಾನ್ಸ್ಕ್ ಮತ್ತು ಕುರ್ಸ್ಕ್ ಪ್ರದೇಶಗಳ ಮೇಲೆ ದಾಳಿ ನಡೆಸಲು ಬಳಸಿತ್ತು ಎನ್ನಲಾಗಿದೆ.

ರಷ್ಯಾದ ಹೈಯರ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಸೆಂಟರ್ ಫಾರ್ ಯುರೋಪಿಯನ್ ಆ್ಯಂಡ್ ಇಂಟರ್ನ್ಯಾಷನಲ್ ಸ್ಟಡೀಸ್ ಉಪ ನಿರ್ದೇಶಕರಾದ ಡಿಮಿತ್ರಿ ಸುಸ್ಲೋವ್ ಅವರು ಈ ಕ್ಷಿಪಣಿಯ ಮೂಲಕ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪಾಶ್ಚಾತ್ಯ ಜಗತ್ತಿಗೆ ಗಂಭೀರ ಎಚ್ಚರಿಕೆ ನೀಡಿದ್ದು, ಪ್ರಸ್ತುತ ಯುದ್ಧಕ್ಕೆ ತುಪ್ಪ ಸುರಿಯುತ್ತಿರುವ ಅವುಗಳ ಕ್ರಮಗಳ ಕುರಿತು ಮರು ಆಲೋಚಿಸುವಂತೆ ಮಾಡಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಸುಸ್ಲೋವ್ ಅವರು ರಷ್ಯಾದ ಪರಮಾಣು ನೀತಿಯ ಸುಧಾರಣೆಗಳ ಕುರಿತು ಸಲಹೆ ನೀಡುವ ಪ್ರಕ್ರಿಯೆಯಲ್ಲೂ ಭಾಗಿಯಾಗಿದ್ದರು.

Russia Introduces Orzhonikidze Hypersonic Missile Amid NATO Tensions

ನವೆಂಬರ್ 21ರ ರಾತ್ರಿ, ಉಕ್ರೇನ್ ನ್ಯಾಟೋ ಒದಗಿಸಿದ ಎಟಿಎಸಿಎಂಎಸ್ ಮತ್ತು ಸ್ಟಾರ್ಮ್ ಶ್ಯಾಡೋ ಎಂಬ ದೀರ್ಘ ವ್ಯಾಪ್ತಿಯ ಕ್ಷಿಪಣಿಗಳನ್ನು ಪ್ರಯೋಗಿಸಿದ್ದಕ್ಕೆ ಪ್ರತೀಕಾರದ ಕ್ರಮವಾಗಿ ರಷ್ಯಾ ಒರೆಶ್ನಿಕ್ ಎಂಬ ಮಧ್ಯಮ ವ್ಯಾಪ್ತಿಯ ಹೈಪರ್‌ಸಾನಿಕ್ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಉಕ್ರೇನ್ ಮೇಲೆ ಉಡಾಯಿಸಿತು. ಈ ಕ್ಷಿಪಣಿ ನೆಪ್ರೋಪೆಟ್ರೋವ್ಸ್ಕ್ ಪ್ರದೇಶದಲ್ಲಿರುವ ಉಕ್ರೇನಿನ ಆಯುಧ ಕಾರ್ಖಾನೆಯ ಮೇಲೆ ಯಶಸ್ವಿಯಾಗಿ ದಾಳಿ ನಡೆಸಿತ್ತು. ಪುಟಿನ್ ಅವರ ಕ್ರಮ ಒಂದು ಸ್ಪಷ್ಟವಾದ ಸಂದೇಶವನ್ನು ರವಾನಿಸಿದೆ ಎಂದು ಸುಸ್ಲೋವ್ ವಿವರಿಸಿದ್ದಾರೆ. ಒಂದು ವೇಳೆ ನ್ಯಾಟೋ ಸದಸ್ಯ ರಾಷ್ಟ್ರಗಳು ರಷ್ಯಾದ ವಿರುದ್ಧ ಉಕ್ರೇನ್‌ಗೆ ಎಟಿಎಸಿಎಂಎಸ್ ಮತ್ತು ಸ್ಟಾರ್ಮ್ ಶ್ಯಾಡೋ ರೀತಿಯ ಕ್ಷಿಪಣಿಗಳನ್ನು ಒದಗಿಸುವುದು ಮತ್ತು ಉಡಾಯಿಸುವುದನ್ನು ಮುಂದುವರಿಸಿದರೆ, ರಷ್ಯಾ ತನ್ನ ಮಧ್ಯಮ ವ್ಯಾಪ್ತಿಯ ಕ್ಷಿಪಣಿಗಳನ್ನು ಬಳಸಿಕೊಂಡು ಆ ಪಾಶ್ಚಾತ್ಯ ದೇಶಗಳ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಬಹುದು ಎಂಬ ಎಚ್ಚರಿಕೆಯನ್ನು ಪುಟಿನ್ ರವಾನಿಸಿದ್ದಾರೆ.

ಸುಸ್ಲೋವ್ ಅವರು ಅವಶ್ಯಕತೆ ಎದುರಾದರೆ ರಷ್ಯಾ ಈ ಯುದ್ಧವನ್ನು ಇನ್ನಷ್ಟು ತೀವ್ರಗೊಳಿಸಲು ಸನ್ನದ್ಧವಾಗಿದೆ ಎಂದಿದ್ದಾರೆ. "ರಷ್ಯಾದ ಕ್ರಮಗಳಿಗೆ ಪ್ರತಿಯಾಗಿ, ಪಾಶ್ಚಾತ್ಯ ರಾಷ್ಟ್ರಗಳು ಯುದ್ಧವನ್ನು ಇನ್ನಷ್ಟು ತೀವ್ರಗೊಳಿಸುವ ರೀತಿಯಲ್ಲಿ ಏನಾದರೂ ಪ್ರತಿಕ್ರಿಯೆ ನೀಡಿದರೆ, ಆಗ ರಷ್ಯಾ ಇನ್ನಷ್ಟು ತೀಕ್ಷ್ಣವಾಗಿ, ತೀವ್ರವಾಗಿ ಪ್ರತಿಕ್ರಿಯಿಸಲಿದೆ" ಎಂದು ಅವರು ವಿವರಿಸಿದ್ದಾರೆ. ರಷ್ಯಾದ ಪರಮಾಣು ನೀತಿಯಲ್ಲಿನ ಇತ್ತೀಚಿನ ಬದಲಾವಣೆಗಳು, ನಿರ್ದಿಷ್ಟ ಸನ್ನಿವೇಶಗಳಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಲು ರಷ್ಯಾಗೆ ಅನುಮತಿ ಕಲ್ಪಿಸಿದೆ.

ಏರ್ ಡಿಫೆನ್ಸ್ ಫೋರ್ಸಸ್‌ನ ಮಿಲಿಟರಿ ತಜ್ಞ ಮತ್ತು ಇತಿಹಾಸಕಾರರಾದ ಯೂರಿ ನುಟೊವ್ ಅವರು ರಷ್ಯಾದ ನೂತನ ಹೈಪರ್‌ಸಾನಿಕ್ ಕ್ಷಿಪಣಿಯನ್ನು ಐತಿಹಾಸಿಕ ತಂತ್ರಜ್ಞಾನ ಎಂದು ಬಣ್ಣಿಸಿದ್ದಾರೆ. ಈ ಕ್ಷಿಪಣಿ 10 ಮ್ಯಾಕ್‌ಗಳ ವೇಗವನ್ನು (ಅಂದಾಜು ಪ್ರತಿ ಗಂಟೆಗೆ 12,350 ಕಿಲೋಮೀಟರ್ ಅಥವಾ ಪ್ರತಿ ಸೆಕೆಂಡಿಗೆ 2.5-3 ಕಿಲೋಮೀಟರ್) ತಲುಪಬಲ್ಲದು. ನುಟೊವ್ ಅವರ ಪ್ರಕಾರ, ಜಗತ್ತಿನ ಯಾವುದೇ ರಾಷ್ಟ್ರದ ಬಳಿ ಈಗ ಇಂತಹ ತಂತ್ರಜ್ಞಾನ ಲಭ್ಯವಿಲ್ಲ. ಅವರ ಪ್ರಕಾರ, ಈಗಿನ ಸಂದರ್ಭದಲ್ಲಿ ಅಮೆರಿಕಾ ಅಥವಾ ಇನ್ನಾವುದೇ ದೇಶದ ಬಳಿ ರಷ್ಯಾದ ನೂತನ ಹೈಪರ್‌ಸಾನಿಕ್ ಕ್ಷಿಪಣಿಯನ್ನು ತಡೆಯುವ ಸಾಮರ್ಥ್ಯ ಹೊಂದಿರುವ ವಾಯು ರಕ್ಷಣಾ ವ್ಯವಸ್ಥೆ ಇಲ್ಲ. ನುಟೋವ್ ಅವರ ಪ್ರಕಾರ, ರಷ್ಯಾದ ನೂತನ ಕ್ಷಿಪಣಿ ಕೇವಲ ಯುಜ್ಮಾಶ್ (ಉಕ್ರೇನಿನಲ್ಲಿರುವ ಪ್ರಮುಖ ಕ್ಷಿಪಣಿ ಉತ್ಪಾದನಾ ಕೇಂದ್ರ) ಮೇಲೆ ಮಾತ್ರವಲ್ಲದೆ, ಲಂಡನ್ ಮತ್ತು ಪ್ಯಾರಿಸ್‌ನಂತಹ ನಗರಗಳ ಮೇಲೂ ದಾಳಿ ನಡೆಸಲು ಶಕ್ತವಾಗಿದೆ. ಒಂದು ವೇಳೆ ಫ್ರಾನ್ಸ್ ಮತ್ತು ಬ್ರಿಟನ್‌ಗಳು ರಷ್ಯಾದೊಡನೆ ತಮ್ಮ ಬಿಕ್ಕಟ್ಟನ್ನು ಹೆಚ್ಚಿಸುವುದು ಮತ್ತು ಉಕ್ರೇನಿಗೆ ನೇರ ಬೆಂಬಲ ನೀಡುವುದನ್ನು ಹೀಗೆಯೇ ಮುಂದುವರಿಸಿದರೆ, ರಷ್ಯಾದ ದಾಳಿಯನ್ನು ಎದುರಿಸಬೇಕಾದ ಸಂದರ್ಭ ಬಂದೀತು ಎಂದು ನುಟೋವ್ ಹೇಳಿದ್ದಾರೆ.

ಒರ್ಶೆನಿಕ್: ಅನಿಶ್ಚಿತ ಸಾಮರ್ಥ್ಯ ಹೊಂದಿರುವ ರಷ್ಯಾದ ಹೈಪರ್‌ಸಾನಿಕ್ ಐಆರ್‌ಬಿಎಂ

9ಎಂ729 'ಒರ್ಶೆನಿಕ್' ಕ್ಷಿಪಣಿಗೆ ರಷ್ಯನ್ ಭಾಷೆಯಲ್ಲಿ ಹ್ಯಾಜೆಲ್ ಮರದ ಹೆಸರನ್ನು (ಒರ್ಶೆನಿಕ್) ಇಡಲಾಗಿದೆ. ಈ ಕ್ಷಿಪಣಿ ಒಂದು ಹೈಪರ್‌ಸಾನಿಕ್ ಇಂಟರ್‌ಮೀಡಿಯಟ್ ರೇಂಜ್ ಬ್ಯಾಲಿಸ್ಟಿಕ್ ಮಿಸೈಲ್ (ಐಆರ್‌ಬಿಎಂ) ಆಗಿದೆ. ಇದನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ನವೆಂಬರ್ 21, 2024ರ ತನ್ನ ಭಾಷಣದಲ್ಲಿ ಮೊದಲ ಬಾರಿಗೆ ಪರಿಚಯಿಸಿದ್ದರು. ಈ ಕ್ಷಿಪಣಿಯನ್ನು ನವೆಂಬರ್ 21ರಂದು 'ನಾನ್ ನ್ಯೂಕ್ಲಿಯರ್ ಹೈಪರ್‌ಸಾನಿಕ್ ಕಾನ್ಫಿಗರೇಶನ್'ನಲ್ಲಿ (ಅಣ್ವಸ್ತ್ರ ಸಿಡಿತಲೆ ಇಲ್ಲದ ಹೈಪರ್‌ಸಾನಿಕ್ ಆಗಿ) ಪ್ರಯೋಗಿಸಲಾಗಿತ್ತು. ಆದರೆ, ಒರ್ಶೆನಿಕ್ ಸಾಂಪ್ರದಾಯಿಕ ರಿ ಎಂಟ್ರಿ ವೆಹಿಕಲ್‌ಗಳನ್ನು ಬಳಸುತ್ತದೋ, ಅಥವಾ ಪಥ ಬದಲಿಸಬಲ್ಲ ರಿ ಎಂಟ್ರಿ ವೆಹಿಕಲ್‌ಗಳನ್ನು ಬಳಸುತ್ತದೋ, ಅಥವಾ ಆಧುನಿಕ ಹೈಪರ್‌ಸಾನಿಕ್ ಬೂಸ್ಟ್ ಗ್ಲೈಡ್ ವೆಹಿಕಲ್‌ಗಳನ್ನು ಬಳಸುತ್ತದೋ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+