ಅಮೆರಿಕಕ್ಕೆ ಮುಟ್ಟಿ ನೋಡಿಕೊಳ್ಳುವಂಥ ಪೆಟ್ಟು ಕೊಟ್ಟಿತೆ ರಷ್ಯಾ!

By: ಕಿಶೋರ್ ನಾರಾಯಣ್
Subscribe to Oneindia Kannada

ರಷ್ಯಾದ ಮೂವತ್ತೈದು ರಾಯಭಾರಿಗಳನ್ನು ಅಮೆರಿಕ ಉಚ್ಚಾಟಿಸಿದ್ದು ತುಂಬ ಚರ್ಚೆಗೆ ಕಾರಣವಾದ ಸುದ್ದಿ. ಇಂಥ ಸನ್ನಿವೇಶದಲ್ಲಿ ರಷ್ಯಾ ಕೂಡ ಮಾಸ್ಕೋದಲ್ಲಿನ ಅಮೆರಿಕಾ ರಾಯಭಾರಿಗಳನ್ನು ಉಚ್ಚಾಟಿಸುತ್ತದೆ ಎಂಬ ನಿರೀಕ್ಷೆ ಎಲ್ಲೆಡೆ ಇತ್ತು. ಆದರೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಂಥ ಯಾವ ಕ್ರಮವನ್ನೂ ತೆಗೆದುಕೊಳ್ಳುವುದಿಲ್ಲ ಎಂದು ಘೋಷಿಸಿದರು.

ಜಗತ್ತಿನ ಎರಡು ಬಲಿಷ್ಠ ರಾಷ್ಟ್ರಗಳು ಹೀಗೆ ನಡೆದುಕೊಳ್ಳುವುದರ ಹಿಂದೆ ಇರುವ ಕಾರಣ ಏನು? ಅಮೆರಿಕ ಇತ್ತೀಚೆಗಷ್ಟೇ ಚುನಾವಣೆ ಮೂಲಕ ಹೊಸ ಅಧ್ಯಕ್ಷನ ಆಯ್ಕೆ ಮಾಡಿಕೊಂಡಿದೆ. ಈ ಹಿಂದೆ ಎಂದೂ ಕಂಡಿರದಂಥ ವೈಷಮ್ಯದೊಂದಿಗೆ ಈ ಬಾರಿ ಚುನಾವಣೆ ರಂಗೇರಿತ್ತು. ಚುನಾವಣೆ ಪ್ರಚಾರದ ವೇಳೆ ಎರಡು ಪ್ರಧಾನ ಪಕ್ಷಗಳ ಅಧ್ಯಕ್ಷೀಯ ಅಭ್ಯರ್ಥಿಗಳು ಪರಸ್ಪರ ನ್ಯೂನತೆಗಳನ್ನು ವಿಪರೀತ ಎತ್ತಾಡಿದ್ದರು.[ಸೀಕ್ರೇಟ್ ಸರ್ವರ್ ನಿಂದ ರಷ್ಯಾದೊಂದಿಗೆ ಟ್ರಂಪ್ ಸಂಪರ್ಕ]

ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಬದ್ಧವೈರಿ ರಷ್ಯಾವನ್ನು ಬೆಂಬಲಿಸುತ್ತಾರೆ ಎಂದು ಡೆಮಾಕ್ರಾಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಆರೋಪಿಸಿದ್ದರು. ಇನ್ನು ಡೆಮಾಕ್ರಾಟ್ ಪಕ್ಷದ ರಾಷ್ಟ್ರೀಯ ಸಮಿತಿಯ ಈ ಮೇಲ್ ಖಾತೆಗೆ ಕನ್ನ ಹಾಕಲಾಗಿದೆ. ಟ್ರಂಪ್ ಗೆಲುವಿಗಾಗಿಯೇ ರಷ್ಯಾ ಹೀಗೆ ಮಾಡಿಸಿತ್ತೆಂದು ಇದೀಗ ಕೇಳಿಬರುತ್ತಿರುವ ಆರೋಪ.

ಟ್ರಂಪ್ ಗೆ ರಷ್ಯಾ ಒಲವು

ಟ್ರಂಪ್ ಗೆ ರಷ್ಯಾ ಒಲವು

ಡೊನಾಲ್ಡ್ ಟ್ರಂಪ್ ಮುಂಚಿನಿಂದಲೂ ಪುಟಿನ್ ಅಭಿಮಾನಿ. ಚುನಾವಣೆ ಪ್ರಚಾರದ ವೇಳೆಯೇ, "ನಾನು ಗೆದ್ದರೆ ರಷ್ಯಾ ಜತೆಗೆ ಉತ್ತಮ ಸಂಬಂಧ ಹೊಂದುವುದಕ್ಕೆ ಬಯಸ್ತೀನಿ" ಎಂದು ಹೇಳಿಕೊಂಡಿದ್ದರು. ಈಗ ಏನಾಗಿದೆ ಅಂದರೆ, ತನಿಖೆಯೊಂದರ ವರದಿ ಪ್ರಕಾರ ಬರಾಕ್ ಒಬಾಮ, ರಷ್ಯಾ ರಾಯಭಾರಿಗಳನ್ನು ಉಚ್ಚಾಟಿಸಿ, ಆ ದೇಶದ ಮೇಲೆ ನಿರ್ಬಂಧವನ್ನೂ ಹೇರಿದ್ದಾರೆ.

ಮೂಗು ತೂರಿಸಿದೆ

ಮೂಗು ತೂರಿಸಿದೆ

ಅಮೆರಿಕದ ಈ ಕ್ರಮವನ್ನು ತಮಾಷೆಗೆ ಹೇಳುವುದಾರೆ ಕಾಜಿ ನ್ಯಾಯ ಅಂತಲೇ ಹೇಳಬೇಕು. ಏಕೆಂದರೆ ಈ ವರೆಗೆ ಹಲವು ದೇಶಗಳ ಚುನಾವಣೆ ಪ್ರಕ್ರಿಯೆಯಲ್ಲಿ ಅಮೆರಿಕ ಮೂಗು ತೂರಿಸಿದೆ. ತನಗೆ ಅನುಕೂಲ ಆಗುವಂಥ ಅಭ್ಯರ್ಥಿ ಚುನಾವಣೆಗೆ ನಿಲ್ಲುವಂತೆ, ಗೆಲ್ಲವಂತೆ ಸಹ ಮಾಡಿದೆ. ಆ ನಂತರ ಆ ದೇಶವನ್ನು ತನಗೆ ಬೇಕಾದಂತೆ ನಡೆಸಿಕೊಂಡಿದೆ.

ಎಂಬತ್ತೊಂದು ಬಾರಿ

ಎಂಬತ್ತೊಂದು ಬಾರಿ

ವರದಿಯೊಂದರ ಪ್ರಕಾರ 1946ರಿಂದ 2000ದ ಮಧ್ಯೆ ಎಂಬತ್ತೊಂದು ಬಾರಿ ಇಂಥ ಕೆಲಸ ಮಾಡಿದೆಯಂತೆ ಅಮೆರಿಕ. ಹಾಗಂತ ಅಮೆರಿಕ ಮಾತ್ರ ಹೀಗೆ ಮಾಡುತ್ತದೆ ಅಂದರೆ ಅದು ಪೂರ್ತಿ ಸತ್ಯ ಅಲ್ಲ. ಏಕೆಂದರೆ ಜಗತ್ತಿನ ಅನೇಕ ರಾಷ್ಟ್ರಗಳು ರಣತಂತ್ರದ ಭಾಗವಾಗಿ, ತಂತಮ್ಮ ದೇಶದ ಅನುಕೂಲ ಹಾಗೂ ಭವಿಷ್ಯದ ದೃಷ್ಟಿಯಿಂದ ಹೀಗೆ ಮಾಡುತ್ತವೆ.ಇಸ್ರೇಲ್ ಅದಕ್ಕೆ ಅತ್ಯುತ್ತಮ ಉದಾಹರಣೆ.

ಶ್ರೀಲಂಕಾ ಆರೋಪಿಸಿತ್ತು

ಶ್ರೀಲಂಕಾ ಆರೋಪಿಸಿತ್ತು

ಉದಾಹರಣೆಗೆ ಹೇಳೋದಾದರೆ ಶ್ರೀಲಂಕಾದಲ್ಲಿ 2015ರಲ್ಲಿ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ಭಾರತದ ಹಸ್ತಕ್ಷೇಪವಿತ್ತೆಂದೂ, ಭಾರತದ ಗೂಢಚಾರಿ ಸಂಸ್ಥೆ 'ರಾ' ಅಧಿಕಾರಿಯನ್ನು ಶ್ರೀಲಂಕಾ ಉಚ್ಚಾಟಿಸಿತು ಎಂದು ವರದಿಯಾಗಿತ್ತು. ಆದರೆ ಜಗತ್ತಿನ ಬಲಿಷ್ಠ ರಾಷ್ಟ್ರ ಎನಿಸಿಕೊಂಡ ಅಮೆರಿಕಕ್ಕೆ ಇಂಥ ಅನುಭವ ಬಹುಶಃ ಇದೇ ಮೊದಲು.

ಅಮೆರಿಕಕ್ಕೆ ಚುಚ್ಚಿತು ಸೂಜಿ

ಅಮೆರಿಕಕ್ಕೆ ಚುಚ್ಚಿತು ಸೂಜಿ

ಅಮೆರಿಕವು ಹಿಂದಿನಷ್ಟು ಬಲಿಷ್ಠವಾಗಿ ಉಳಿದಿಲ್ಲ. ಇಂತಹ ಪ್ರಚೋದನೆ ಅಮೆರಿಕವನ್ನು ಕೆಂಡಾಮಂಡಲವಾಗಿಸಿದೆ. ಇತರರನ್ನು ಚುಚ್ಚಲು ಬಳಸುತ್ತಿದ್ದ ಸೂಜಿಯಿಂದ ಈಗ ಅದೇ ದೇಶಕ್ಕೇ ಚುಚ್ಚಲಾಗಿದೆ. ಈ ನೋವು ಬೇಗ ಮಾಯವಾಗಬಹುದೇನೋ! ಆದರೆ ಇಂಥ ಅವಮಾನದಿಂದ ಹೊರಬರುವುದಕ್ಕೆ ಅಮೆರಿಕಕ್ಕೆ ಬಹಳ ಸಮಯ ಹಿಡಿಯಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The US President has recently announced that it will expel 35 Russian diplomats in response to Russia’s interference in the US elections which saw emails of DNC being hacked, thereby assisting the opposition candidate Donald Trump to win.
Please Wait while comments are loading...