ರಷ್ಯಾ & ಉಕ್ರೇನ್ ಯುದ್ಧಕ್ಕೆ 3 ವರ್ಷ, ಯುದ್ಧ ನಿಲ್ಲುವುದೇ ಅನುಮಾನ!
ರಷ್ಯಾ & ಉಕ್ರೇನ್ ನಡುವಿನ ಯುದ್ಧ ನಿಲ್ಲಿಸಬೇಕು ಎಂಬ ಪ್ರಯತ್ನಗಳು ಹಾಳಾಗಿ ಹೋಗಿ, ಜನರು ವಿಲವಿಲ ಒದ್ದಾಡುತ್ತಿದ್ದಾರೆ. ಇದೇ ವೇಳೆ, ರಷ್ಯಾ & ಉಕ್ರೇನ್ ಯುದ್ಧಕ್ಕೆ 3 ವರ್ಷ ತುಂಬಿದೆ. ಹಾಗೇ 4ನೇ ವರ್ಷಕ್ಕೆ ಎಂಟ್ರಿ ಕೊಟ್ಟಿರುವ ರಷ್ಯಾ & ಉಕ್ರೇನ್ ಯುದ್ಧ ಇನ್ನಷ್ಟು ಭಯ ಸೃಷ್ಟಿ ಮಾಡುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾವು ಅಧಿಕಾರಕ್ಕೆ ಬಂದ 24 ಗಂಟೆಯ ಒಳಗೆ ಯುದ್ಧ ನಿಲ್ಲಿಸುವ ಚಾಲೆಂಜ್ ಮಾಡಿದ್ದರು.
ಡೊನಾಲ್ಡ್ ಟ್ರಂಪ್ ಅಮೆರಿಕದ ಅಧಿಕಾರ ವಹಿಸಿಕೊಂಡು 1 ತಿಂಗಳು ಕಳೆದರೂ ಯುದ್ಧಕ್ಕೆ ಬ್ರೇಕ್ ಬಿದ್ದಿಲ್ಲ. ಬದಲಾಗಿ ರಷ್ಯಾ ಇದೀಗ ಇನ್ನಷ್ಟು ಜೋರಾಗಿ ದಾಳಿ ಆರಂಭ ಮಾಡಿದೆ. ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿ ಇವತ್ತಿಗೆ ಸರಿಯಾಗಿ 3 ವರ್ಷ ಮುಗಿದಿದ್ದು, ಯುದ್ಧ 4ನೇ ವರ್ಷಕ್ಕೆ ಕಾಲಿಟ್ಟಿದೆ. ಇಂತಹ ಸಂದರ್ಭದಲ್ಲಿ ರಷ್ಯಾ ಸೇನೆ ಮತ್ತಷ್ಟು ಉಗ್ರವಾಗಿ ಡ್ರೋನ್ ದಾಳಿ ಆರಂಭ ಮಾಡಿದೆ ಎಂದು ಉಕ್ರೇನ್ ಆರೋಪ ಮಾಡಿದೆ. ಉಕ್ರೇನ್ ರಾಜಧಾನಿ ಕೀವ್ ಈ ದಾಳಿಯಲ್ಲಿ ನಲುಗಿ ಹೋಗಿದ್ದು, ಕೀವ್ ಸಿಟಿಯ ಹಲವು ಪ್ರದೇಶಗಳು ರಷ್ಯಾ ಡ್ರೋನ್ ದಾಳಿಯಲ್ಲಿ ನಲುಗಿ ಹೋಗಿವೆ.

ಉಕ್ರೇನ್ ಅಧ್ಯಕ್ಷನ ಆರೋಪ ಏನು?
ರಷ್ಯಾ ತಮ್ಮ ವಿರುದ್ಧ ದಾಳಿ ನಡೆಸುತ್ತಿರುವ ರೀತಿ ನೋಡಿ ನಲುಗಿ ಹೋಗಿದ್ದಾರೆ ಉಕ್ರೇನ್ ಜನ. ಅದರಲ್ಲೂ ರಷ್ಯಾ ತನ್ನ ಬಳಿ ಇರುವ ಭಯಾನಕ ಅಸ್ತ್ರಗಳನ್ನು ಬಳಸಿ ದಾಳಿಯನ್ನು ನಡೆಸುತ್ತಿದ್ದು, ಪ್ರತಿಯೊಂದು ದಿನವೂ ಉಕ್ರೇನ್ ಜನರಿಗೆ ನರಕ ದರ್ಶನ ಆಗುತ್ತಿದೆ. ರಷ್ಯಾ ಸೇನೆಯು ಈಗಾಗಲೇ ಉಕ್ರೇನ್ ದೇಶದ ಪೂರ್ವ ಭಾಗದಲ್ಲಿ ಬಹುತೇಕ ಪ್ರದೇಶಗಳನ್ನು ವಶಕ್ಕೆ ಪಡೆದಿದ್ದು, ಉಕ್ರೇನ್ ಸೇನೆ ಇದೀಗ ತನ್ನ ರಾಜಧಾನಿ ಉಳಿಸಿಕೊಳ್ಳಲು ಹೋರಾಡುತ್ತಿದೆ. ಈ ಸಮಯದಲ್ಲೇ ರಷ್ಯಾ ಸೇನೆ ತನ್ನ ಬಳಿ ಇರುವ ಡ್ರೋನ್ ಬಳಸಿ ದಾಳಿ ಮಾಡುತ್ತಿದೆ.
ಉಕ್ರೇನ್ ವಿರುದ್ಧ ರಷ್ಯಾ ವಿಜಯ ಘೋಷಣೆ?
ಯುರೋಪ್ ನೆಮ್ಮದಿಯನ್ನು ಕೆಡಿಸಿರುವ ರಷ್ಯಾ & ಉಕ್ರೇನ್ ಯುದ್ಧ ಇನ್ನಷ್ಟು ಹೆಚ್ಚಾಗುತ್ತಿದೆ. ಆಧುನಿಕ ಕಾಲದಲ್ಲಿ ರಷ್ಯಾ ನಡೆಸಿದ ಘೋರ ಯುದ್ಧ ಅದು ಉಕ್ರೇನ್ ವಿರುದ್ಧದ ಕಾಳಗ. ಯಾಕಂದ್ರೆ ರಷ್ಯಾ & ಉಕ್ರೇನ್ ಯುದ್ಧ ಇಡೀ ಜಗತ್ತೇ ನಲುಗಿ ಹೋಗುವಂತೆ ಮಾಡಿಬಿಟ್ಟಿದೆ. ಇಬ್ಬರ ನಡುವಿನ ಈ ಜಗಳ ಒಂದು ಕ್ಷಣ ಇಡೀ ಪ್ರಪಂಚದ ಎದೆ ನಡುಗುವಂತೆ ಮಾಡಿದೆ.
ಇಷ್ಟೆಲ್ಲದರ ನಡುವೆ ರಷ್ಯಾ & ಉಕ್ರೇನ್ ಯುದ್ಧದಲ್ಲಿ ಪರಮಾಣು ಬಾಂಬ್ ಬಳಕೆ ಮಾಡಿ, ಮತ್ತೊಂದು ಮಹಾಯುದ್ಧಕ್ಕೂ ಆಹ್ವಾನ ನೀಡಲಾಗುತ್ತಿದೆಯಾ? ಎಂಬ ಪ್ರಶ್ನೆ ಮೂಡಿತ್ತು. ಆದರೆ, ಈಗ ರಷ್ಯಾ ಇಟ್ಟಿರುವ ಬಾಂಬ್‌ಗೆ ಉಕ್ರೇನ್ ಬುಡ ಅಲುಗಾಡಿ ಹೋಗಿದೆ. ಹಾಗೂ ಇದೇ ಸಮಯದಲ್ಲೇ ರಷ್ಯಾ ಸೇನೆ ಉಕ್ರೇನ್ ವಿರುದ್ಧ ವಿಜಯ ಘೋಷಣೆ ಮಾಡುವ ಸಿದ್ಧತೆ ನಡೆಸಿದೆ ಎಂಬ ಮಾತು ಕೂಡ ಕೇಳಿಬಂದಿದೆ.












Click it and Unblock the Notifications