Russia & Ukraine: ಉಕ್ರೇನ್ ದೇಶದ ಮತ್ತಷ್ಟು ಹಳ್ಳಿಗಳು ರಷ್ಯಾ ಮಿಲಿಟರಿ ವಶಕ್ಕೆ!
ರಷ್ಯಾ ಮಿಲಿಟರಿ ಯಾವುದೇ ಅಡೆ & ತಡೆ ಇಲ್ಲದೆ ಉಕ್ರೇನ್ ಮೇಲೆ ಸವಾರಿ ಮುಂದುವರಿಸಿ, ಒಂದೊಂದೇ ಹಳ್ಳಿಗಳನ್ನ ತನ್ನ ವಶಕ್ಕೆ ಪಡೆಯುತ್ತಿದೆ. ರಷ್ಯಾ ಸೈನಿಕರು ಇದೀಗ ಪಕ್ಕಾ ಪ್ಲಾನ್ ಮಾಡಿ ಉಕ್ರೇನ್ ಒಳಗೆ ನುಗ್ಗುತ್ತಿದ್ದಾರೆ, ಅದರಲ್ಲೂ ಪೂರ್ವ ಉಕ್ರೇನ್ ಭಾಗದಲ್ಲಿ ಈಗ ಭಾರಿ ಘೋರ ಕಾಳಗ ಶುರುವಾಗಿ ಪರಿಸ್ಥಿತಿ ಇನ್ನಷ್ಟು ಕಠಿಣವಾಗಿದೆ. ಪುಟಿನ್ ಯೋಧರ ಈ ಹೋರಾಟ ಕಂಡು ಸ್ವತಃ ಉಕ್ರೇನ್ ಸೇನೆ ನಲುಗುವಂತೆ ಆಗಿದೆ.
ರಷ್ಯಾ ವಿರುದ್ಧ ಯುದ್ಧದಲ್ಲಿ ನರಳಿರುವ ಉಕ್ರೇನ್ ಸ್ಥಿತಿ ಹೇಗಾಗಿದೆ ಅಂದ್ರೆ ಜೀವ ಉಳಿಸಿಕೊಂಡ್ರೆ ಸಾಕು ಎಂಬಂತಾಗಿದೆ. ಅದ್ರಲ್ಲೂ ರಷ್ಯಾ ಸೇನೆ ಉಗ್ರಾಣದಲ್ಲಿ ಬೆಚ್ಚಗೆ ಮಲಗಿರುವ ನ್ಯೂಕ್ಲಿಯರ್ ಬಾಂಬ್ ಹೊರ ಬರುತ್ತವೆ ಎಂಬ ಸುದ್ದಿ ಉಕ್ರೇನ್ ಅಧ್ಯಕ್ಷರ ಕೈಕಾಲು ನಡುಗುವಂತೆ ಮಾಡಿದೆ. ಈ ಸಮಯದಲ್ಲೇ ರಷ್ಯಾ ಸೇನೆ ನಿಧಾನವಾಗಿ ತನ್ನ ಶತ್ರು ನೆಲದ ಮೇಲೆ ಸಂಪೂರ್ಣ ಹಿಡಿತ ಸಾಧಿಸಲು ಮುಂದಾಗುತ್ತಿದೆ. ಇದರ ಭಾಗವಾಗಿ ಇದೀಗ ಪೂರ್ವ ಉಕ್ರೇನ್‌ನ ಮತ್ತಷ್ಟು ಹಳ್ಳಿಗಳು ಇದೀಗ ರಷ್ಯಾ ವಶವಾಗಿವೆ.

ಉಕ್ರೇನ್ ರಾಜಧಾನಿ ಕೀವ್ ರಷ್ಯಾ ವಶಕ್ಕೆ?
ಉಕ್ರೇನ್ ತನ್ನ ಬಹುತೇಕ ಆಯಕಟ್ಟಿನ ಜಾಗಗಳನ್ನು ಕಳೆದುಕೊಂಡು ಇದೀಗ ಪರದಾಡ್ತಿದೆ. ರಷ್ಯಾ ವಿರುದ್ಧದ ಹೋರಾಟಕ್ಕೆ, ಉಕ್ರೇನ್ ಸೇನೆ ಬಳಿ ಶಸ್ತ್ರಾಸ್ತ್ರಗಳು ಇಲ್ಲವಾಗುತ್ತಿವೆ. ಈಗಾಗಲೇ ಅಮೆರಿಕ ಸೇರಿ ಪಾಶ್ಚಿಮಾತ್ಯ ದೇಶಗಳು ಸಾಕಷ್ಟು ಹೆಲ್ಪ್ ಮಾಡಿವೆ. ಆದ್ರೆ ಇದೆಲ್ಲಾ ಖಾಲಿ ಖಾಲಿ ಆಗುತ್ತಿದೆ. ಹೀಗಾಗಿ ಪರಿಸ್ಥಿತಿ ಕೂಡ ಕೈಮೀರಿ ಹೋಗುತ್ತಿದೆ.
ಉಕ್ರೇನ್ ಹೀಗೆ ಮುಂದುವರಿದರೆ ಇನ್ನೇನು ಕೆಲ ದಿನಗಳಲ್ಲಿ ಉಕ್ರೇನ್‌ನ ರಾಜಧಾನಿ ಕೂಡ ರಷ್ಯಾ ಸೇನೆಯ ವಶಕ್ಕೆ ಸಿಲುಕುವ ಭಯ ಉಕ್ರೇನ್ ನಾಯಕರಲ್ಲಿ ಆವರಿಸಿದೆ. ಇಂತಹ ಸಮಯದಲ್ಲೇ, ಮತ್ತಷ್ಟು ಹಳ್ಳಿಗಳನ್ನು ರಷ್ಯಾದ ಸೈನಿಕರು ತಮ್ಮ ವಶಕ್ಕೆ ಪಡೆದು ಅಬ್ಬರಿಸಿದ್ದಾರೆ. ಅಲ್ಲದೆ ಉಕ್ರೇನ್ ಪೂರ್ವ ಭಾಗದಲ್ಲಿ ರಕ್ತದ ನದಿಯೇ ಹರಿಯುತ್ತಿದೆ.
3 ವರ್ಷ ಪೂರೈಸಲಿದೆ ಯುದ್ಧ!
ಒಟ್ನಲ್ಲಿ ರಷ್ಯಾ & ಉಕ್ರೇನ್ ಮಧ್ಯೆ ಯುದ್ಧ ಆರಂಭವಾಗಿ ಇನ್ನೇನು 3 ವರ್ಷ ಮುಗಿಯಲಿದೆ. 1000 ದಿನಗಳನ್ನು ಪೂರೈಸಿರುವ ಯುದ್ಧ ಈಗಾಗಲೇ ಲಕ್ಷಾಂತರ ಜನರ ಜೀವ ಬಲಿ ಪಡೆದಿದೆ. ಇಷ್ಟೆಲ್ಲ ಸಮಸ್ಯೆ ಮಧ್ಯೆ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದಿದ್ದಾರೆ. ಹೀಗಾಗಿ, ಉಕ್ರೇನ್ ದೇಶಕ್ಕೆ ಮುಂದಿನ ದಿನಗಳಲ್ಲಿ ಅನುದಾನ ಅಥವಾ ಯುದ್ಧಕ್ಕೆ ಸಹಾಯ ಸಿಗುವುದೇ ಅನುಮಾನ ಆಗಿದೆ. ಇದು ಒಂದು ಕಡೆಯಾಗಿದ್ದರೆ, ಮತ್ತೊಂದು ಕಡೆ ಉಕ್ರೇನ್ ಪ್ರಜೆಗಳೆಲ್ಲ ತುತ್ತು ಅನ್ನಕ್ಕೂ ನರಳಾಡುತ್ತಿದ್ದಾರೆ.












Click it and Unblock the Notifications