ಡ್ರೋನ್ ದಾಳಿಯಲ್ಲೇ ಸರ್ವನಾಶ ಆಗುತ್ತಿರುವ ಉಕ್ರೇನ್ & ರಷ್ಯಾ?
ರಷ್ಯಾ & ಉಕ್ರೇನ್ ನಡುವೆ ಯುದ್ಧ ಶುರುವಾಗಿ ಇನ್ನೇನು 3 ವರ್ಷ ಮುಗಿಯುತ್ತಿದ್ದರೂ ಈ ಇಬ್ಬರ ನಡುವಿನ ಬಡಿದಾಟಕ್ಕೆ ಮಾತ್ರ ಬ್ರೇಕ್ ಬೀಳುತ್ತಿಲ್ಲ. ಅದರಲ್ಲೂ ರಷ್ಯಾ & ಉಕ್ರೇನ್ ಡ್ರೋನ್‌ಗಳ ಮೂಲಕ ಭರ್ಜರಿ ಬಡಿದಾಟ ಆರಂಭ ಮಾಡಿದ್ದು, ಕಳೆದ 3 ವರ್ಷಗಳಿಂದಲೂ ಇದೇ ರೀತಿ ಕಚ್ಚಾಡುತ್ತಿವೆ. ಈಗ ಕೂಡ ಅಷ್ಟೇ ದಿಢೀರ್ ಉಕ್ರೇನ್ ಸೇನೆಯು ಭಾರಿ ಸಂಖ್ಯೆಯಲ್ಲಿ ಡ್ರೋನ್‌ಗಳನ್ನ ಬಳಸಿ ನೇರವಾಗಿ ರಷ್ಯಾ ಮೇಲೆ ಎರಗಿದೆ ಎಂಬ ಆರೋಪ ಮಾಡಲಾಗಿದೆ.
ರಷ್ಯಾ ಸೇನೆ ಸಾಕಷ್ಟು ಬಲಿಷ್ಠವಾಗಿದ್ದು, ಉಕ್ರೇನ್‌ಗೆ ಪ್ರತಿದಿನವೂ ಒಂದೊಂದು ಆಘಾತದ ಸರಮಾಲೆ ನೀಡುತ್ತಿದೆ. ಹೀಗೆ ರಷ್ಯಾ ಸೇನೆ ಕೊಡುತ್ತಿರುವ ಏಟಿಗೆ ಉಕ್ರೇನ್ ಕೂಡ ಕಂಗಾಲಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಏನು ಮಾಡಬೇಕು? ಎಂಬ ಚಿಂತೆಯಲ್ಲೇ ಇದೀಗ ಉಕ್ರೇನ್ ನಿವಾಸಿಗಳು ಪರದಾಡುತ್ತಿದ್ದಾರೆ. ಮತ್ತೊಂದು ಕಡೆ ಉಕ್ರೇನ್ ಕೂಡ ತನ್ನ ಸೇಡು ತೀರಿಸಿಕೊಳ್ಳಲು ಪದೇ ಪದೇ ಡ್ರೋನ್ ಮೂಲಕ ದಾಳಿ ನಡೆಸುತ್ತಿದ್ದು, ಈಗಲೂ ಅದೇ ರೀತಿ ನೇರವಾಗಿ ರಷ್ಯಾ ರಾಜಧಾನಿಗೆ ಡ್ರೋನ್‌ಗಳನ್ನ ನುಗ್ಗಿಸಿದೆ.

30ಕ್ಕೂ ಹೆಚ್ಚು ಡ್ರೋನ್ ದಾಳಿ?
ಅಷ್ಟಕ್ಕೂ ರಷ್ಯಾ ರಾಜಧಾನಿ ಮಾಸ್ಕೊ ಮೇಲೆ ಉಕ್ರೇನ್ 30ಕ್ಕೂ ಹೆಚ್ಚು ಡ್ರೋನ್ ಬಳಸಿ ಭಾರಿ ದೊಡ್ಡ ಪ್ರಮಾಣದ ದಾಳಿ ನಡೆಸಿದೆ ಎಂದು ಆರೋಪ ಮಾಡಲಾಗಿದೆ. ರಷ್ಯಾ ಸೇನೆ ಬಳಿ, ಅತ್ಯಾಧುನಿಕ ಉಪಕರಣಗಳು ಇದ್ದರೂ ಉಕ್ರೇನ್ ಹಾರಿಸುತ್ತಿರುವ ಡ್ರೋನ್‌ಗಳು ನೇರ ರಷ್ಯಾ ನೆಲಕ್ಕೆ ಬಂದು ಬೀಳುತ್ತಿವೆ. ಅದರಲ್ಲೂ ರಷ್ಯಾ ರಾಜಧಾನಿ ಜನರು ಇದೀಗ ಉಕ್ರೇನ್ ಸೇನೆ ಕೊಡುತ್ತಿರುವ ಹಾವಳಿಗೆ ಬೆಚ್ಚಿ ಬಿದ್ದಿದ್ದಾರೆ. ಹೀಗೆ ಉಕ್ರೇನ್ ಮಿಲಿಟರಿ ಹಾರಿಸಿದ್ದ ಬಹುತೇಕ ಎಲ್ಲಾ ಡ್ರೋನ್‌ಗಳನ್ನ ತಕ್ಷಣವೇ ಹೊಡೆದು ಬಿಸಾಕಿದೆ ರಷ್ಯಾ ಸೇನೆ.
ಡ್ರೋನ್‌ಗಳ ಯುದ್ಧ ನಡೆಯುವಾಗ...
ಒಂದ್ಕಡೆ ಉಕ್ರೇನ್ ಸೇನೆ ರಷ್ಯಾ ಮೇಲೆ ಡ್ರೋನ್ ದಾಳಿ ನಡೆಸಿದೆ ಎಂಬ ಆರೋಪ ಮಾಡ್ತಾ ಇರುವಾಗಲೇ, ಇನ್ನೊಂದು ಕಡೆ ರಷ್ಯಾ ಕೂಡ ನಮ್ಮ ಮೇಲೆ ಡ್ರೋನ್ ದಾಳಿ ನಡೆಸುತ್ತಿದೆ ಎಂಬ ಆರೋಪ ಮಾಡಿದೆ ಉಕ್ರೇನ್. ಅಷ್ಟಕ್ಕೂ ರಷ್ಯಾ ಸೇನೆ ಬರೋಬ್ಬರಿ 145ಕ್ಕೂ ಹೆಚ್ಚು ಡ್ರೋನ್‌ಗಳನ್ನ ಉಕ್ರೇನ್ ವಿರುದ್ಧ ಹಾರಿಸಿ ದಾಳಿ ಮಾಡಿದೆ ಎಂದು ಆರೋಪ ಮಾಡಲಾಗಿದೆ. ಹೀಗೆ ಇಬ್ಬರ ನಡುವೆ ಡ್ರೋನ್‌ಗಳ ಯುದ್ಧ ನಡೆಯುವಾಗ, ಸಾಮಾನ್ಯ ಜನರು ಮಾತ್ರ ಈ ಬೆಳವಣಿಗೆ ನೋಡಿ ಬೆಚ್ಚಿದ್ದಾರೆ. ಎಲ್ಲಿಗೆ ಹೋಗಿ ಬದುಕುವುದು ಅಂತಾ ಪರದಾಡುತ್ತಿದ್ದಾರೆ.
ಯುದ್ಧ ನಿಲ್ಲಿಸುತ್ತಾರಾ ಡೊನಾಲ್ಡ್ ಟ್ರಂಪ್?
ಅಮೆರಿಕದ ಹೊಸ ಅಧ್ಯಕ್ಷರಾಗಿ ಇದೀಗ ಡೊನಾಲ್ಡ್ ಟ್ರಂಪ್ ಆಯ್ಕೆಯಾದ ಹಿನ್ನೆಲೆ ಯುದ್ಧ ನಿಲ್ಲುತ್ತಾ? ಎಂಬ ಪ್ರಶ್ನೆ ಇದೀಗ ಮೂಡಿದೆ. ಯಾಕಂದ್ರೆ ಡೊನಾಲ್ಡ್ ಟ್ರಂಪ್ ಈ ಹಿಂದೆಯೇ ಚುನಾವಣೆ ಪ್ರಚಾರದ ಸಮಯದಲ್ಲಿ ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸುವ ಭರವಸೆಯನ್ನ ನೀಡಿದ್ದರು. ಅಲ್ಲದೆ ಯುದ್ಧದ ಪರಿಣಾಮ ಅಮೆರಿಕಗೆ ಆಗುತ್ತಿರುವ ಸಮಸ್ಯೆ & ಆರ್ಥಿಕವಾದ ಹೊರೆ ತಪ್ಪಿಸಲು ಪ್ಲಾನ್ ಮಾಡಿದ್ದಾರೆ ಡೊನಾಲ್ಡ್ ಟ್ರಂಪ್ ಎನ್ನಲಾಗಿದೆ. ಹೀಗಾಗಿ ಮುಂದಿನ ಅಂದ್ರೆ 2025ರ ಜನವರಿ ತಿಂಗಳ ನಂತರ ಈ ಬಗ್ಗೆ ಒಂದು ಸ್ಪಷ್ಟ ಚಿತ್ರಣ ಸಿಗಲಿದೆ.












Click it and Unblock the Notifications