ರಷ್ಯಾ ಹಾರಿಸಿದ 57 ಡ್ರೋನ್‌ಗಳಿಗೆ ಒಂದು ಗತಿ ಕಾಣಿಸಿದ ಉಕ್ರೇನ್!

ರಷ್ಯಾ & ಉಕ್ರೇನ್ ಯುದ್ಧ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಇದು ಬಿಡಿ ಯುದ್ಧದಲ್ಲಿ ದಿನದಿಂದ ದಿನಕ್ಕೆ ಮತ್ತಷ್ಟು ಭಯಾನಕ ಅಸ್ತ್ರಗಳನ್ನು, ಎರಡೂ ದೇಶಗಳು ಬಳಕೆ ಮಾಡುತ್ತಿವೆ. ಇದೇ ಕಾರಣಕ್ಕೆ ಭಯ ಹೆಚ್ಚಾಗಿದ್ದು, ಈಗ ದಿಢೀರ್ ರಷ್ಯಾ ಹಾರಿಸಿದ 57 ಡ್ರೋನ್‌ಗಳಿಗೆ ಒಂದು ಗತಿ ಕಾಣಿಸಿದ ಉಕ್ರೇನ್. ಅದ್ರಲ್ಲೂ ಇತ್ತೀಚೆಗೆ ಅಮೆರಿಕದಿಂದ ಭಯಾನಕ ಅಸ್ತ್ರ ಪಡೆದ, ಉಕ್ರೇನ್ ಸೇನೆ ಈಗ ತನ್ನ ಶತ್ರು ರಷ್ಯಾ ವಿರುದ್ಧ ಮತ್ತಷ್ಟು ರಕ್ಷಣಾತ್ಮಕ ಆಟವನ್ನು ಶುರು ಮಾಡಿದೆ.

ಜಗತ್ತಿನ ನೆಮ್ಮದಿಯನ್ನೇ ಹಾಳು ಮಾಡಿರುವ ಉಕ್ರೇನ್ & ರಷ್ಯಾ ಯುದ್ಧ ಯಾವುದೇ ಕಾರಣಕ್ಕೆ ಸೈಲೆಂಟ್ ಆಗುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ. ಮತ್ತೊಂದು ಕಡೆ ಸಾಮಾನ್ಯ ಜನ ಹಾಗೂ ಅಮಾಯಕರು ಇಬ್ಬರ ಒಣ ಪ್ರತಿಷ್ಠೆಗೆ ಬಲಿಯಾಗುತ್ತಿದ್ದಾರೆ ಎಂಬ ಗಂಭೀರ ಆರೋಪ ಇದೆ. ಹೀಗೆ, ಪರಿಸ್ಥಿತಿ ಕೈಮೀರಿ ಹೋದ ಸಮಯದಲ್ಲೇ, ಉಕ್ರೇನ್ ಮೇಲೆ ದಾಳಿಗೆ ಯತ್ನಿಸಿದ್ದ ರಷ್ಯಾದ 57 ಡ್ರೋನ್‌ಗಳಿಗೆ ಒಂದು ಗತಿ ಕಾಣಿಸಿದೆ ಉಕ್ರೇನ್ ಮಿಲಿಟರಿ. ಹಾಗಾದರೆ ಹೇಗಿದೆ ರಷ್ಯಾ & ಉಕ್ರೇನ್ ಯುದ್ಧದ ಸ್ಥಿತಿ? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

Russia And Ukraine Continues Drone Fight In The War

57ರಲ್ಲಿ 53 ಡ್ರೋನ್ ಖತಂ!

ದಿಢೀರ್ ರಷ್ಯಾ ಸೇನೆ ತನ್ನ ಶತ್ರು ಉಕ್ರೇನ್ ವಿರುದ್ಧ ಸುಮಾರು 57 ಡ್ರೋನ್‌ ಹಾರಿಸಿದ್ದು, ಈ 57 ಡ್ರೋನ್ ಪೈಕಿ ಒಟ್ಟು 53 ಡ್ರೋನ್‌ಗಳನ್ನು ಹೊಡೆದು ಉರುಳಿಸಲಾಗಿದೆ. ಈ ಕುರಿತು ಉಕ್ರೇನ್ ವಾಯುಪಡೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದೆಲ್ಲಕ್ಕಿಂತ ಭಯಾನಕ ಆರೋಪ ಏನು ಅಂದ್ರೆ, ಉತ್ತರ ಕೊರಿಯಾದಲ್ಲಿ ನಿರ್ಮಿಸಿರುವ 4 ಕ್ಷಿಪಣಿಗಳನ್ನು ಕೂಡ ರಷ್ಯಾ ಸೇನೆ ಬಳಸಿಕೊಂಡು ದಾಳಿ ಮಾಡಿದೆ ಎಂಬ ಗಂಭೀರ ಆರೋಪ ಮಾಡಿದೆ ಉಕ್ರೇನ್ ಸೇನೆ. ಹೀಗೆ ರಷ್ಯಾ & ಉಕ್ರೇನ್ ನಡುವೆ ತಿಕ್ಕಾಟ ಮತ್ತಷ್ಟು ಹೆಚ್ಚಾಗುತ್ತಿದೆ.

ಭಾರತೀಯರನ್ನು ನೇಮಕ ಮಾಡಲ್ಲ

ರಷ್ಯಾ & ಉಕ್ರೇನ್ ನಡುವೆ ಭೀಕರ ರಣಕಾಳಗ ನಡೆಯುತ್ತಿದ್ದು, ಭಾರಿ ಆತಂಕ ಮನೆಮಾಡಿದೆ. ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧದಲ್ಲಿ ಭಾರತೀಯ ಪ್ರಜೆಗಳು ಮೃತಪಟ್ಟಿದ್ದು ದುರದೃಷ್ಟಕರ ಎಂದಿದೆ ರಷ್ಯಾ ರಾಯಭಾರ ಕಚೇರಿ. ಅಲ್ಲದೆ ಭಾರತ ಮೂಲದ ಪ್ರಜೆಗಳನ್ನು ಮುಂದೆ ರಷ್ಯಾ ಸೇನೆಗೆ ನೇಮಕ ಮಾಡಿಕೊಳ್ಳುವುದಿಲ್ಲ ಎಂಬುದಾಗಿ ಕೂಡ ತಿಳಿಸಲಾಗಿದೆ. ಆ ಮೂಲಕ ಇದೇ ಏಪ್ರಿಲ್‌ ತಿಂಗಳಿಂದಲೇ ರಷ್ಯಾ ಸಶಸ್ತ್ರ ಪಡೆಗಳಿಗೆ ಭಾರತೀಯರ ನೇಮಕಾತಿ ನಿಲ್ಲಿಸಿದ್ದೇವೆ ಎಂಬ ವಿಚಾರವನ್ನು ಕೂಡ, ರಷ್ಯಾ ರಾಯಭಾರ ಕಚೇರಿ ಇದೀಗ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+