25 ಜನರನ್ನು ಒಂದೇ ಏಟಿಗೆ ಬಲಿ ಪಡೆದ ಯುದ್ಧ: ಹೇಗೆ ಗೊತ್ತಾ?

ಯುದ್ಧ ನಿಲ್ಲುತ್ತೆ.. ನಿಲ್ಲುತ್ತೆ.. ನಿಲ್ಲುತ್ತೆ.. ಅಂತಾ ಕಾದು ಕಾದು ಸಾಕಾಗಿ ಹೋಗುತ್ತಿದೆ. ಈ ಯುದ್ಧ ನಿಲ್ಲೋದು ಬಿಡಿ, ಈಗ ಬರ್ತ್ ಡೇ ರೀತಿ 2 ವರ್ಷ ಕಂಪ್ಲೀಟ್ ಮಾಡುತ್ತಿದೆ. ಇದು ಸಾಲದು ಅನ್ನೋ ಥರ, ಒಂದೇ ದಿನ ಸುಮಾರು 25ಕ್ಕೂ ಹೆಚ್ಚು ಪ್ರಜೆಗಳನ್ನ ಬಲಿ ಪಡೆದು ತಾನೆಷ್ಟು ಕ್ರೂರಿ ಅಂತಾ ಪ್ರೂವ್ ಮಾಡಿದೆ. ಹಾಗಾದರೆ ಹೀಗೆ ಅಟ್ಟಹಾಸ ಮೆರೆಯುತ್ತಿರುವ ಯುದ್ಧ ಯಾವುದು ಗೊತ್ತೆ? ಬನ್ನಿ ಸಂಪೂರ್ಣ ಮಾಹಿತಿ ತಿಳಿಯೋಣ.

ಅಂದಹಾಗೆ ರಷ್ಯಾ & ಉಕ್ರೇನ್ ಯುದ್ಧ ರಣಭೀಕರ ಸ್ವರೂಪ ಪಡೆಯುತ್ತಿದೆ. ಹೀಗಿದ್ದಾಗಲೇ ಇಬ್ಬರೂ ಒಬ್ಬರ ಮೇಲೆ ಮತ್ತೊಬ್ಬರು ಹಲ್ಲು ಮಸೆಯುತ್ತಾ ದಾಳಿ ಮಾಡುತ್ತಿದ್ದಾರೆ. ಹೀಗೆ ಶುರುವಾಗಿರುವ ಕದನ ಮತ್ತೊಂದು ಕೆಟ್ಟ ಹಂತಕ್ಕೆ ಬಂದು ನಿಂತಿದೆ. ಅದರಲ್ಲೂ ರಷ್ಯಾದ ಸೇನೆ ಉಗ್ರ ದಾಳಿ ನಡೆಸುವಾಗ ಉಕ್ರೇನ್‌ನಲ್ಲಿ ರಷ್ಯಾ ಆಕ್ರಮಿತ ಪ್ರದೇಶಗಳು ನರಕವಾಗಿವೆ. ಇದೇ ರೀತಿ ಈಗ, ಒಂದೇ ಪ್ರದೇಶದಲ್ಲಿ ಸುಮಾರು 25 ಜನರ ಪ್ರಾಣಪಕ್ಷಿ ಹಾರಿ ಹೋಗಿದೆ. ಹಾಗಾದರೆ ಅಸಲಿಗೆ ನಡೆದಿದ್ದಾರೂ ಏನು? ಮುಂದೆ ಓದಿ.

Russia Alleged That Ukraine Military Attack Killed 25 People In Donetsk

ಪ್ರತಿಕ್ರಿಯೆ ನೀಡದ ಉಕ್ರೇನ್ ಸೇನೆ?

ಹೌದು ರಷ್ಯಾ ಅಕ್ರಮಿತ ಉಕ್ರೇನ್‌ನ, ಡೊನೆಟ್ಸ್ಕ್ ನಗರ ಹೊರವಲಯದ ಮಾರುಕಟ್ಟೆಯ ಸಮೀಪ ನಡೆದಿರುವ ಶೆಲ್‌ ದಾಳಿಗೆ 27 ಜನ ಬಲಿಯಾಗಿದ್ದಾರೆ ಎನ್ನಲಾಗಿದೆ. ಹಾಗೇ ಈ ದಾಳಿಯನ್ನು ಈಗ ಉಕ್ರೇನ್ ಸೇನೆ ನಡೆಸಿದೆ ಎಂಬ ಆರೋಪ ಕೂಡ ಕೇಳಿಬಂದಿದೆ. ಹೀಗೆ ಉಕ್ರೇನ್‌ ಸೇನೆ ನಡೆಸಿದ ಭೀಕರ ಶೆಲ್‌ ದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿ 20 ಜನ ಗಾಯಗೊಂಡಿದ್ದಾರೆ ಎಂದು ಈಗ ರಷ್ಯಾ ಅಧಿಕಾರಿಗಳು ಆರೋಪ ಮಾಡಿದ್ದಾರೆ. ಆದರೆ ಪರಿಸ್ಥಿತಿ ಕೈಮೀರಿಸಿದ್ದರೂ ಈ ಬಗ್ಗೆ ಉಕ್ರೇನ್‌ನ ಕಡೆಯಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎನ್ನಲಾಗಿದೆ.

ಗ್ಯಾಸ್ ಟ್ಯಾಂಕ್ ಬ್ಲಾಸ್ಟ್ ಆಯ್ತಾ?

ಹೀಗೆ ಯುದ್ಧದ ಪರಿಣಾಮ ಎಲ್ಲವೂ ಅಯೋಮಯ ಆಗುತ್ತಿದ್ದು, ಪರಿಸ್ಥಿತಿ ಹಿಡಿತಕ್ಕೆ ಸಿಗುತ್ತಿಲ್ಲ. ಹೀಗಿದ್ದಾಗಲೇ ಉಕ್ರೇನ್‌ ಪಡೆಗಳು ಡ್ರೋನ್‌ ದಾಳಿ ನಡೆಸಿದ ಪರಿಣಾಮವಾಗಿ ರಷ್ಯಾದ ಅಸ್ಟ್‌-ಲೂಗಾ ಬಂದರಿನ ನೈಸರ್ಗಿಕ ಅನಿಲ ಟ್ಯಾಂಕ್‌ ಸ್ಫೋಟಗೊಂಡಿದೆ ಎಂದು, ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಲಾಗಿದ್ದು ಹಾಗೇ ಓರ್ಯೋಲ್‌ & ಟುಲಾ ಪ್ರದೇಶದಲ್ಲೂ ಅಲ್ಲೋಲ ಕಲ್ಲೋಲ ನಡೆದಿದೆ. ಉಕ್ರೇನ್‌ನ ಎರಡು ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ರಷ್ಯಾದ ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಇದು ಸಾಲದು ಎಂಬಂತೆ ಉಕ್ರೇನ್‌ನಲ್ಲಿ ಇರುವ ಹಾರ್ಕಿವ್ ಪ್ರದೇಶದ ಕ್ರೋಖ್‌ಮಲ್ನೆ ಗ್ರಾಮ ವಶಕ್ಕೆ ಪಡೆದಿರುವುದಾಗಿ ರಷ್ಯಾ ಹೇಳಿದೆ.

Russia Alleged That Ukraine Military Attack Killed 25 People In Donetsk

ರಷ್ಯಾ ಅಧ್ಯಕ್ಷ ಪುಟಿನ್ 2022ರ ಫೆಬ್ರವರಿ ತಿಂಗಳ ಕೊನೇ ವಾರದಲ್ಲಿ ಉಕ್ರೇನ್ ಸೇನೆ ವಿರುದ್ಧ ಯುದ್ಧ ಘೋಷಣೆ ಮಾಡಿದರು. ಸೇನಾಧಿಕಾರಿಗಳ ಜೊತೆ ಮಹತ್ವದ ಮಾತುಕತೆ ನಡೆಸಿ, ಕೆಲವೇ ಕ್ಷಣದಲ್ಲಿ ಯುದ್ಧ ಘೋಷಣೆ ಮಾಡಿದ್ರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್. ಈ ಮೂಲಕ ಶತ್ರುವಿನ ಕೊನೇ ಕ್ಷಣಕ್ಕೆ ಪಣತೊಟ್ಟರು ಪುಟಿನ್. ಆದ್ರೆ ಈ ಯುದ್ಧ 2 ವರ್ಷ ಪೂರೈಸುವ ಹಂತಕ್ಕೆ ಬಂದ್ರೂ ನಿಂತು ತಣ್ಣಗಾಗುವ ಲಕ್ಷಣಗಳೇ ಕಾಣುತ್ತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+