ರಷ್ಯಾಗೆ ಶಾಕ್ ನೀಡಿದ ಉಕ್ರೇನ್ ಮಾಡಿದ್ದೇನು ಗೊತ್ತಾ?
ರಷ್ಯಾದ ರಾಜಧಾನಿ ಮಾಸ್ಕೋ ಮೇಲೆ ಉಕ್ರೇನ್ 1 ವರ್ಷಗಳಿಂದ ನಿರಂತರ ದಾಳಿ ನಡೆಸುತ್ತಿದ್ದು ಇದರ ಪರಿಣಾಮ, ರಷ್ಯಾ ಕೂಡ ತನ್ನ ಶತ್ರು ನೆಲದ ಮೇಲೆ ಮನಸ್ಸಿಗೆ ಬಂದಂತೆ ದಾಳಿನ ನಡೆಸುತ್ತಿದೆ. ಹೀಗೆ ರಷ್ಯಾ & ಉಕ್ರೇನ್ ನಡುವೆ ಯುದ್ಧ ಭೀಕರವಾದ ಸಮಯದಲ್ಲೇ ಈಗ ಉಕ್ರೇನ್ ಸೇನೆ ರಷ್ಯಾಗೆ ಭಯಾನಕ ಶಾಕ್ ಕೊಟ್ಟಿದೆ! ಹಾಗಾದರೆ ಏನದು ಆಘಾತ? ಇದೀಗ ಉಕ್ರೇನ್ ಕೊಟ್ಟಿರುವ ಶಾಕ್ ಎಂತಹದ್ದು? ಮುಂದೆ ಓದಿ.
ಹೌದು ರಷ್ಯಾ ಕ್ರಾಸ್‌ನೋಡಾರ್ ಪ್ರಾಂತ್ಯದಲ್ಲಿರುವ ಇಲ್‌ಸ್ಕಿ ತೈಲ ಸಂಸ್ಕರಣಾ ಘಟಕದ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದೆ ಎಂಬ ಆರೋಪ ಕೇಳಿಬಂದಿದೆ. ಉಕ್ರೇನ್ ಭದ್ರತಾ ಸಂಸ್ಥೆ ಎಸ್‌ಬಿಯು ನಡೆಸಿದ ಕಾರ್ಯಾಚರಣೆಯಿಂದ, ತೈಲ ಸಂಸ್ಕರಣಾ ಘಟಕಗಳು ಇರುವ ಸ್ಥಳದಲ್ಲಿ ಕಾಡ್ಗಿಚ್ಚಿನ ರೀತಿ ಬೆಂಕಿ ಹೊತ್ತಿಕೊಂಡಿತ್ತು. ಇನ್ನ ಹೀಗೆ ತೈಲ ಸಂಸ್ಕರಣಾ ಘಟಕದ ಮೇಲೆ ದಾಳಿ ನಡೆಸಿದ ನಂತರ ಪರಿಣಾಮ ಭೀಕರವಾಗಿತ್ತು. ಆಗ ಬೆಂಕಿ ನಂದಿಸಲು ರಷ್ಯಾ ಸೇನೆ, ಸಾಕಷ್ಟು ಹರಸಾಹಸ ಮಾಡಿದೆ. ಕೊನೆಗೂ ಹಲವು ಗಂಟೆಗಳ ಶ್ರಮದ ಪರಿಣಾಮ ಬೆಂಕಿಗೆ ಬ್ರೇಕ್ ಹಾಕಲಾಗಿದೆಯಂತೆ.

ರಷ್ಯಾ ಜನರಲ್ಲಿ ಶುರುವಾಗಿದೆ ನಡುಕ
ಅಂದಹಾಗೆ ರಷ್ಯಾ ರಾಜಧಾನಿ & ಜಗತ್ತಿನ ಅತಿ ದುಬಾರಿ ನಗರಗಳ ಪೈಕಿ ಒಂದು ಎನ್ನಲಾಗಿರುವ ಮಾಸ್ಕೋ ಮೇಲೆ, ಉಕ್ರೇನ್ ಪದೇ ಪದೇ ಡ್ರೋನ್ ಹಾರಿಸಿ ಕಿತಾಪತಿ ಮಾಡುತ್ತಿದೆ. ಹೀಗಾಗಿ ರಷ್ಯಾ ಕೂಡ ರಿವೇಂಜ್ ತೆಗೆದುಕೊಳ್ಳುತ್ತಿದೆ. ಇಷ್ಟೆಲ್ಲದರ ನಡುವೆ ಇದೀಗ ಉಕ್ರೇನ್ ಘೋರ ದಾಳಿ ನಡೆಸಿ ರಷ್ಯಾದ ತೈಲ ಘಟಕಗಳನ್ನೇ ಟಾರ್ಗೆಟ್ ಮಾಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹೀಗಾಗಿ ರಷ್ಯಾ ಮತ್ತೊಮ್ಮೆ ಉಕ್ರೇನ್ ವಿರುದ್ಧ ಭೀಕರ ದಾಳಿ ನಡೆಸಬಹುದು ಎಂಬ ನಿರೀಕ್ಷೆ ಕೂಡ ದಟ್ಟವಾಗಿದೆ. ಈ ಮೂಲಕ ಪರಿಸ್ಥಿತಿ ಕ್ಷಣಕ್ಷಣಕ್ಕೂ ಕೈಮೀರುತ್ತಿದೆ.
ರಷ್ಯಾ ಅಧ್ಯಕ್ಷರೇ ಮೊದಲ ಟಾರ್ಗೆಟ್
ಕಳೆದ ವರ್ಷ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಮನೆ ಮೇಲು ಉಕ್ರೇನ್ ಸೇನೆ ಡ್ರೋನ್ ದಾಳಿ ನಡೆಸಿದ್ದ ಆರೋಪ ಕೇಳಿಬಂದಿತ್ತು. ಅದ್ರಲ್ಲಿ, ಪುಟಿನ್ ಅವರ ಅಧಿಕೃತ ಸರ್ಕಾರಿ ನಿವಾಸ ಕ್ರೆಮ್ಲಿನ್ ಮೇಲೆ ಭೀಕರವಾಗಿ ದಾಳಿ ನಡೆದಿತ್ತು. ದಾಳಿಯಲ್ಲಿ ಕೂದಲೆಳೆ ಅಂತರದಲ್ಲಿ ರಷ್ಯಾದ ಅಧ್ಯಕ್ಷ ಪುಟಿನ್ ಬಚಾವ್ ಆದರು. ಈ ಘಟನೆ ನಡೆದ ಬಳಿಕ ರಷ್ಯಾದ ರಕ್ಷಣಾ ಇಲಾಖೆ & ರಷ್ಯಾ ಸೇನೆ ಪುಟಿನ್ ಅವರ ಸರ್ಕಾರಿ ನಿವಾಸಕ್ಕೆ ಭಾರಿ ಭದ್ರತೆ ಒದಗಿಸಿದೆ. ಹೀಗಿದ್ದಾಗ ಉಕ್ರೇನ್ ಸೇನೆ ರಷ್ಯಾದ ಬೇರೆ ಬೇರೆ ಭಾಗದ ಮೇಲೂ ಡ್ರೋನ್ ದಾಳಿ ನಡೆಸುತ್ತಿರುವ ಆರೋಪ ಕೇಳಿಬಂದಿದೆ.

ಎಲೆಕ್ಷನ್ ಸಮಯದಲ್ಲೇ ಡೆಡ್ಲಿ ಅಟ್ಯಾಕ್
ರಷ್ಯಾದಲ್ಲಿ ಚುನಾವಣೆ ನಡೆಯುತ್ತಿರುವ ಸಮಯದಲ್ಲೇ ಉಕ್ರೇನ್ ಸೇನೆ ದಾಳಿ ಕೂಡ ಇದೀಗ ಭೀಕರವಾಗುತ್ತಿದೆ. ಇನ್ನೇನು ಕೆಲವೇ ದಿನದಲ್ಲಿ ಚುನಾವಣೆ ಮುಕ್ತಾಯ ಆಗಲಿದ್ದು ಹೀಗಾಗಿ ರಷ್ಯಾ ಮಿಲಿಟರಿ ಇಡೀ ದೇಶದಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡಿದೆ. ಹಾಗೇ ರಷ್ಯಾ ಒಳಗೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಭದ್ರತೆ ಕೈಗೊಳ್ಳಲಾಗಿದೆ. ಹೀಗಿದ್ದರೂ ಉಕ್ರೇನ್ ಸೇನೆಯ ಡ್ರೋನ್‌ಗಳು ರಷ್ಯಾ ಗಡಿ ಒಳಗೆ ನುಗ್ಗಿ ಬರುತ್ತಿವೆ. ಇದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಪಿತ್ತ ನೆತ್ತಿಗೇರುವಂತೆ ಮಾಡಿದೆ.
ರಷ್ಯಾ & ಉಕ್ರೇನ್ ಯುದ್ಧ ಈ ತಿಂಗಳ ಅಂತ್ಯಕ್ಕೆ 2 ವರ್ಷ ಪೂರೈಸಲಿದೆ. ಹೀಗಿದ್ದಾಗಲೇ, ಪದೇ ಪದೇ ಇಬ್ಬರ ನಡುವೆ ಭೀಕರ ದಾಳಿಗಳು ನಡೆಯುತ್ತಿವೆ. ಹೀಗಾಗಿ ಇಡೀ ಪ್ರಪಂಚವೆ ಈ ಯುದ್ಧ ನಿಲ್ಲಿಸಲು ಯತ್ನಿಸುತ್ತಿದೆ. ಆದರೆ ಇದು ನಡೆಯದ ಪರಿಣಾಮ ತಿಕ್ಕಾಟ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಸಾಗಿದೆ.












Click it and Unblock the Notifications