ICC: ಐಸಿಸಿ ಅಧ್ಯಕ್ಷರನ್ನೇ ‘ವಾಂಟೆಡ್’ ಲಿಸ್ಟ್‌ಗೆ ಸೇರಿಸಿದ ರಷ್ಯಾ

ಅಮೆರಿಕ ಹಾಗೂ ನ್ಯಾಟೋ ವಿರುದ್ಧ ತೊಡೆತಟ್ಟಿ ನಿಂತಿರುವ ರಷ್ಯಾ ಇದೀಗ ಮತ್ತೊಂದು ಸವಾಲು ಹಾಕಿದೆ. ಉಕ್ರೇನ್ ಮೇಲೆ ಯುದ್ಧ ಸಾರಿದ ನಂತರ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಿದ ಐಸಿಸಿಗೆ ಶಾಕ್ ಕೊಟ್ಟಿದೆ ರಷ್ಯಾ. ಐಸಿಸಿ ಅಂದರೆ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಅಧ್ಯಕ್ಷರನ್ನೇ ತನ್ನ 'ವಾಂಟೆಡ್' ಲಿಸ್ಟ್‌ಗೆ ಸೇರಿಸುವ ಮೂಲಕ ಶತ್ರುಗಳಿಗೆ ಸವಾಲು ಹಾಕಿದೆ ಪುಟಿನ್ ಆಡಳಿತ.

ರಷ್ಯಾ ಅಧ್ಯಕ್ಷ ಪುಟಿನ್ ಈಗ ಪಾಶ್ಚಿಮಾತ್ಯ ರಾಷ್ಟ್ರಗಳ ವಿರುದ್ಧ ನೇರ ಯುದ್ಧಕ್ಕೆ ಇಳಿದು, ಗುಡುಗಿದ್ದಾರೆ. ಅದರಲ್ಲೂ ರಷ್ಯಾ ಒಳಗೆ ಖಾಸಗಿ ಸೇನೆ ಬಂಡಾಯ ಎದ್ದು ಗಲಾಟೆ ಮಾಡಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ನಂತರ ಪರಿಸ್ಥಿತಿ ಕೈಮೀರಿ ಹೋಗಿದೆ. ಇದೇ ವೇಳೆ ರಷ್ಯಾ ತನ್ನ ದೇಶದ ಅಧ್ಯಕ್ಷರ ವಿರುದ್ಧವೇ ಅರೆಸ್ಟ್ ವಾರಂಟ್ ಹೊರಡಿಸಿದ್ದ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್‌ಗೆ ಸವಾಲು ಎಸೆದಿದೆ. ಉಕ್ರೇನ್ ಯುದ್ಧದ ಸಂದರ್ಭದಲ್ಲೇ ಈ ಘಟನೆ ಸಾಕಷ್ಟು ಮಹತ್ವ ಪಡೆಯುವ ಜೊತೆಗೆ ಸಂಚಲನ ಸೃಷ್ಟಿಸಿದೆ.

russia-added-international-criminal-court

ರಷ್ಯಾ ಹೀಗೆ ಮಾಡಿದ್ದು ಯಾಕೆ?

ಅಮೆರಿಕ ಹಾಗೂ ನ್ಯಾಟೋ ಜೊತೆಗೆ ರಷ್ಯಾ ದ್ವೇಷ ಕಟ್ಟಿಕೊಂಡಿದ್ದು, ತನ್ನ ಅಕ್ಕಪಕ್ಕಕ್ಕೆ ನ್ಯಾಟೋ ಸುಳಿದರೂ ರಷ್ಯಾ ಸಹಿಸುವುದಿಲ್ಲ. ಇದೇ ಕಾರಣಕ್ಕೆ ಉಕ್ರೇನ್ ವಿರುದ್ಧ ಯುದ್ಧ ಸಾರಿತ್ತು ರಷ್ಯಾ. ಇದಾದ ಬಳಿಕ ರಷ್ಯಾ ವಿರುದ್ಧ ಅಮೆರಿಕ ಹಾಗೂ ನ್ಯಾಟೋ ಒಕ್ಕೂಟವು ಒಂದಾಗಿ ನಿಂತಿದೆ. ಈ ಮೂಲಕ ಉಕ್ರೇನ್‌ಗೆ ಭಾರಿ ಪ್ರಮಾಣದ ನೆರವು ನೀಡುತ್ತಿವೆ. ಆದ್ರೆ ಇದನ್ನ ಸಹಿಸದ ರಷ್ಯಾ ತನ್ನ ದಾಳಿಯನ್ನ ತೀವ್ರಗೊಳಿಸಿತ್ತು. ಹೀಗಿದ್ದಾಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಪುಟಿನ್ ವಿರುದ್ಧ ಐಸಿಸಿ ಬಂಧನದ ವಾರೆಂಟ್ ಹೊರಡಿಸಿತ್ತು.

ಅಧ್ಯಕ್ಷರಿಗೆ ಶಾಕ್ ಕೊಟ್ಟ ರಷ್ಯಾ

ಪುಟಿನ್ ರಷ್ಯಾ ಬಿಟ್ಟು ಹೊರಗೆ ಬರಲು ಹೆದರುವ ಸ್ಥಿತಿ ಇದ್ದು, ಭಯದಲ್ಲೇ ಇದ್ದಾರೆ. ಅವರ ವಿರುದ್ಧ ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ಐಸಿಸಿ) ಹೊರಡಿಸಿದ ಬಂಧನ ವಾರಂಟ್‌ಗೆ ಚಿಂತಿತರಾಗಿದ್ದಾರೆ. ಹೀಗಾಗಿ ಪುಟಿನ್ ಬ್ರಿಕ್ಸ್ ಸೇರಿ ಹಲವು ಪ್ರಮುಖ ಶೃಂಗಸಭೆಗೆ ಬಂದಿರಲಿಲ್ಲ. ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಶೃಂಗಸಭೆಗೂ ಬಂದಿರಲಿಲ್ಲ ಪುಟಿನ್. ಹೀಗೆ ಐಸಿಸಿ ನೀಡಿದ್ದ ಅರೆಸ್ಟ್ ವಾರೆಂಟ್ ರಷ್ಯಾ ಅಧ್ಯಕ್ಷರನ್ನೇ ರಷ್ಯಾದಲ್ಲೇ ಬಂಧನವಾಗುವಂತೆ ಮಾಡಿ, ಸಾಕಷ್ಟು ಸಂಚಲನ ಸೃಷ್ಟಿಸಿದೆ. ಈ ವೇಳೆ ರಷ್ಯಾ ಕೂಡ ರೊಚ್ಚಿಗೆದ್ದು, ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ಐಸಿಸಿ) ಅಧ್ಯಕ್ಷ ಪಿಯೊಟರ್ ಹೊಫ್‍ಮಾನ್‍ಸ್ಕಿರನ್ನ 'ವಾಂಟೆಡ್' ಲಿಸ್ಟ್‌ಗೆ ಸೇರಿಸಿದೆ.

russia-added-international-criminal-court

ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಒಂದು ಸ್ವಾಯತ್ತ ಸಂಸ್ಥೆಯೇ ಆಗಿದ್ದರೂ, ಐಸಿಸಿ ಬಳಿ ಸ್ವಂತ ಸೇನೆ ಇಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಪುಟಿನ್ ರಷ್ಯಾ ಬಿಟ್ಟು ಎಲ್ಲೂ ಹೊರಗೆ ಹೋಗಿರಲಿಲ್ಲ. ಇಂತಹ ಸಮಯದಲ್ಲೇ ಸೇಡಿಗೆ ಸೇಡು ಎಂಬಂತೆ ರಷ್ಯಾ ಇದೀಗ ಐಸಿಸಿ ವಿರುದ್ಧ ಗುಟುರು ಹಾಕಿ, ರಷ್ಯಾ ಗಣರಾಜ್ಯದ ಕ್ರಿಮಿನಲ್ ನೀತಿ ಸಂಹಿತೆ ಅಡಿಯಲ್ಲಿ ಪೋಲ್ಯಾಂಡ್‍ನ ಪಿಯೊಟರ್ ಹೊಫ್‍ಮಾನ್‍ಸ್ಕಿ ಅವರನ್ನು 'ವಾಂಟೆಡ್' ಪಟ್ಟಿಗೆ ಸೇರಿಸಿರುವ ಮಾಹಿತಿ ಪ್ರಕಟಿಸಿದೆ. ರಷ್ಯಾ ಆಂತರಿಕ ಇಲಾಖೆ ವೆಬ್‍ಸೈಟ್‍ನಲ್ಲಿ ಇದು ಪ್ರಕಟವಾಗಿದೆ.

ನಿಲ್ಲುತ್ತಿಲ್ಲ ಉಕ್ರೇನ್ & ರಷ್ಯಾ ಯುದ್ಧ

ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉಕ್ರೇನ್‌ ವಿರುದ್ಧ 2022ರ ಫೆಬ್ರವರಿ 24ರಂದು ಮಿಲಿಟರಿ ಕಾರ್ಯಾಚರಣೆ ಘೋಷಿಸಿದ್ದರು. ಈ ಮೂಲಕ ಶುರುವಾದ ಯುದ್ಧ ಲಕ್ಷಾಂತರ ಜನರ ಜೀವ ಬಲಿಪಡೆದು, ಲೆಕ್ಕವಿಲ್ಲದಷ್ಟು ಜನರ ಬದುಕು ಬೀದಿಗೆ ತಳ್ಳಿದೆ. ಇಷ್ಟೆಲ್ಲಾ ನಡೆದರೂ ಯುದ್ಧ ಸಮಾಧಾನ ಆಗಿಲ್ಲ. ಪರಿಸ್ಥಿತಿ ಹಿಡಿತಕ್ಕೆ ಸಿಗದ ಕಾರಣ ಉಕ್ರೇನ್ ಜನ ಕೂಡ ಭಯದಲ್ಲಿ ಜೀವನ ಕಳೆಯುತ್ತಿದ್ದಾರೆ.

ರಷ್ಯಾ ಹಾಗೂ ಉಕ್ರೇನ್ ಯುದ್ಧಕ್ಕೆ 19 ತಿಂಗಳು ತುಂಬಿದ್ದು, 90 ತಿಂಗಳು ತುಂಬಿದ್ರೂ ಯುದ್ಧ ಮುಗಿಯುವ ಲಕ್ಷಣ ಕಾಣ್ತಿಲ್ಲ. ಹೀಗಾಗಿ ಉಕ್ರೇನ್‌ನ ಲಕ್ಷಾಂತರ ಪ್ರಜೆಗಳು ತಮ್ಮ ತವರು ಬಿಟ್ಟು ಓಡಿ ಹೋಗಿದ್ದಾರೆ. ಅದ್ರಲ್ಲೂ ರಷ್ಯಾ ಜೊತೆ ಗಡಿ ಹಂಚಿಕೊಂಡ ಉಕ್ರೇನ್ ಪ್ರಾಂತ್ಯಗಳ ಜನ ನಿತ್ಯವೂ ನರಳುತ್ತಿದ್ದಾರೆ. ಹೀಗಾಗಿ ಯುದ್ಧ ನಿಲ್ಲಿಸಿ ಎಂಬ ಕೂಗು ಕೂಡ ಜೋರಾಗಿದೆ. ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ವಿರುದ್ಧವೂ ರಷ್ಯಾ ತೊಡೆತಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+