ಇಂಗ್ಲೆಂಡ್‌ನಲ್ಲಿ ಕೂಚಿಪೂಡಿ ನೃತ್ಯ ಮಾಡಿ ಗಮನ ಸೆಳೆದ ರಿಷಿ ಸುನಕ್ ಪುತ್ರಿ
ನವದೆಹಲಿ, ನವೆಂಬರ್, 26: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಪುತ್ರಿ ಅನೌಷ್ಕ ಸುನಕ್ ಲಂಡನ್‌ನಲ್ಲಿ ಶುಕ್ರವಾರ (ನವೆಂಬರ್ 25) ಇತರ ಮಕ್ಕಳೊಂದಿಗೆ ಕೂಚಿಪೂಡಿ ನೃತ್ಯ ಮಾಡಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.
Watch: Rishi Sunak's Daughter Performs Kuchipudi At UK Event https://t.co/cTDhegSN9Y pic.twitter.com/IisEz55stc
— NDTV (@ndtv) November 26, 2022
ಇಂಗ್ಲೆಂಡ್‌ನ ಅಂತಾರಾಷ್ಟ್ರೀಯ ಕೂಚಿಪೂಡಿ ನೃತ್ಯ ಉತ್ಸವ 2022ರ ಭಾಗವಾದ ರಂಗ್‌ನಲ್ಲಿ 9 ವರ್ಷದ ಅನೌಷ್ಕ ಸುನಕ್ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾಳೆ. ಕಾರ್ಯಕ್ರಮದಲ್ಲಿ 4ರಿಂದ 85 ವರ್ಷದೊಳಗಿನ ಸಂಗೀತಗಾರರು, ಹಿರಿಯ ನೃತ್ಯ ಕಲಾವಿದರು, ನೃತ್ಯಗಾರ್ತಿಯರು, ಪೋಲೆಂಡ್‌ನ ನಟರಂಗ್ ಗ್ರೂಪ್‌ನ ಅಂತಾರಾಷ್ಟ್ರೀಯ ಬರ್ಸರಿ ವಿದ್ಯಾರ್ಥಿಗಳು ಸೇರಿದಂತೆ ಸುಮಾರು ನೂರಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

ಇನ್ನು ತಮ್ಮ ಮಗಳಾದ ಅನೌಷ್ಕಳ ನೃತ್ಯ ಕಾರ್ಯಕ್ರಮಕ್ಕೆ ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿಯವರ ಮಗಳು ಅಕ್ಷತಾ ಮೂರ್ತಿ, ರಿಷಿ ಸುನಕ್ ಪೋಷಕರು ಆಗಮಿಸಿದ್ದರು. ರಿಷಿ ಸುನಕ್ ಇಂಗ್ಲೆಂಡ್ 57ನೇ ಪ್ರಧಾನ ಮಂತ್ರಿಯಾಗಿದ್ದು, ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಭಾರತೀಯ ಮೂಲದ ವ್ಯಕ್ತಿಯಾಗಿದ್ದಾರೆ. 42ನೇ ವಯಸ್ಸಿನಲ್ಲಿ ಸುನಕ್ ಅವರು ಪ್ರಧಾನಿಯಾಗುವ ಮೂಲಕ ಕಳೆದ 200 ವರ್ಷಗಳಲ್ಲಿ ಅತ್ಯಂತ ಕಿರಿಯ ಬ್ರಿಟಿಷ್ ಪ್ರಧಾನಿಯಾಗಿ ಗಮನ ಸೆಳೆದಿದ್ದಾರೆ. ಅಲ್ಲದೇ ತಮ್ಮ ಕಚೇರಿಯ ಡೆಸ್ಕ್ ಮೇಲೆ ಗಣೇಶನ ವಿಗ್ರಹವನ್ನು ಇಟ್ಟುಕೊಂಡಿರುವುದು ಸಹ ವಿಶೇಷವಾಗಿದೆ.
Anoushka Sunak; daughter of UK Prime Minister @RishiSunak performs Kuchchipudi in "Rang" festival in London. Culture & tradition can prevail in corridors of power...... pic.twitter.com/wuni6EPX8c
— (@TIME_Asia_India) November 26, 2022
ಅನೌಷ್ಕಾ ನೃತ್ಯದ ವಿಡಿಯೋ ವೈರಲ್
ಅನೌಷ್ಕಾ ನೃತ್ಯದ ವಿಡೊಯೋ ಇದೀಗ ಸಾಮಾಜಿನ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದನ್ನು ನೋಡಿದ ಭಾರತೀಯರು ಸಂತಸ ವ್ಯಕ್ತಪಡಿಸಿದ್ದಾರೆ. ವಿದೇಶದಲ್ಲೂ ಕೂಡ ಭಾರತೀಯ ಕಲೆಯನ್ನು ಪರಿಚಯ ಮಾಡಿಸಿದ್ದಾಳೆ ಎನ್ನುವ ಮೆಚ್ಚುಗೆಗೆ ಪಾತ್ರಳಾಗಿದ್ದಳೆ. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅನೌಷ್ಕ ಸುನಕ್, ಭಾರತ ದೇಶವು ನನ್ನ ಕುಟುಂಬವಾಗಿದ್ದು, ನಾನು ಪ್ರತಿ ವರ್ಷವೂ ಅಲ್ಲಿಗೆ ಹೋಗಲು ಇಷ್ಟಪಡುತ್ತೇನೆ ಎಂದು ಹೇಳಿಕೊಂಡಿದ್ದಾಳೆ. ಹಾಗೂ ನಾನು ಕೂಚಿಪುಡಿ ಮತ್ತು ನೃತ್ಯವನ್ನು ಪ್ರೀತಿಸುತ್ತೇನೆ. ನೃತ್ಯ ಮಾಡುವಾಗ ನಿಮ್ಮ ಎಲ್ಲಾ ಚಿಂತೆಗಳು ಮತ್ತು ಒತ್ತಡಗಳು ದೂರವಾಗುತ್ತವೆ. ಈ ಸಂದರ್ಭದಲ್ಲಿ ನಮ್ಮ ಪಕ್ಕದಲ್ಲಿ ಸ್ನೇಹಿತರು, ಕುಟುಂಬಸ್ಥರು ಇದ್ದಾಗ ಸಂತೋಷ ಆಗುತ್ತದೆ ಎಂದಿದ್ದಾಳೆ.

2022ರ ರಂಗ್ ಪ್ರದರ್ಶನವನ್ನು ಸಂಯೋಜಿಸಿದ ಅರುಣಿಮಾ ಕುಮಾರ್ ಮಾತನಾಡಿ, "ವಿವಿಧ ವಯಸ್ಸಿನ ಕಲಾವಿದರನ್ನು ಗುರುತಿಸುವುದು ರಂಗ್ ಕಾರ್ಯಕ್ರಮದ ಉದ್ದೇಶವಾಗಿದೆ. ನಮ್ಮಲ್ಲಿ ಬಹಳಷ್ಟು ಜನರಿಗೆ ನೃತ್ಯ ಪ್ರದರ್ಶನ ನೀಡಲು ಅವಕಾಶಗಳು ಸಿಗುತ್ತವೆ. ಇಲ್ಲಿ ಮಕ್ಕಳು, ಹಿರಿಯರು, ವಿಶೇಷ ಸಾಮರ್ಥ್ಯದ ಜನರು ಕೂಡ ಭಾಗವಹಿಸಲು ಅವಕಾಶ ಇರುತ್ತದೆ," ಎಂದು ಹೇಳಿದ್ದಾರೆ.












Click it and Unblock the Notifications