ಭಾರತದಿಂದ ಅಕ್ಕಿ ರಫ್ತು ನಿಷೇಧ: ಅಮೆರಿಕದಾದ್ಯಂತ ಅನ್ನಕ್ಕಾಗಿ ಪರದಾಟ- ಹುಡುಕಿದರೂ ಅಂಗಡಿಗಳಲ್ಲಿ ಸಿಗುತ್ತಿಲ್ಲ ಅಕ್ಕಿ
ವಾಷಿಂಗ್ಟನ್, ಜುಲೈ 27: ಭಾರತವು ಇತ್ತೀಚೆಗೆ ಬಿಳಿ ಅಕ್ಕಿ ರಫ್ತಿನ ಮೇಲೆ ನಿಷೇಧ ಹೇರಿದೆ. ಇದು ಅಮೆರಿಕದಲ್ಲಿ ಆತಂಕವನ್ನು ಸೃಷ್ಟಿಸಿದ್ದು, ಅಕ್ಕಿ ಖರೀದಿ ಹಾಗೂ ಸಂಗ್ರಹಣೆಯಲ್ಲಿ ಜನರು ತೊಡಗಿದ್ದಾರೆ. ಅಕ್ಕಿ ಬೆಲೆ ದಿಡೀರ್ ಏರಿಕೆ ಕಂಡಿದೆ. ಹುಡುಕಿದರೂ ಅಂಗಡಿಗಳಲ್ಲಿ ಅಕ್ಕಿ ಸಿಗುತ್ತಿಲ್ಲವೆಂದು ವರದಿಯಾಗಿದೆ.
ಭಾರತವು ಪ್ರಮುಖ ಅಕ್ಕಿ ರಫ್ತುದಾರ ದೇಶವಾಗಿದೆ. ಕಳೆದ ವಾರ ಅಕ್ಕಿ ರಫ್ತಿಗೆ ನಿಷೇಧ ಹೇರಿದೆ.ಇದು ಜಾಗತಿಕ ಆಹಾರ ಮಾರುಕಟ್ಟೆಯಲ್ಲಿ ಆಘಾತವನ್ನು ಉಂಟುಮಾಡಿದೆ ಎಂದು ಸುದ್ದಿಸಂಸ್ಥೆ 'ಎಎನ್‌ಐ' ವರದಿ ಮಾಡಿದೆ.

ವಾಷಿಂಗ್ಟನ್‌ನಲ್ಲಿ ವಾಸಿಸುವ ಭಾರತ ಮೂಲಕ ಅರುಣಾ ಎಂಬುವವರು ಈ ಕುರಿತಾಗಿ ಎಎನ್‌ಐಗೆ ಮಾತನಾಡಿದ್ದಾರೆ. ಅನೇಕರು ಹೊಂದಿರುವ ಆತಂಕವನ್ನು ಅರುಣಾ ಹಂಚಿಕೊಂಡಿದ್ದಾರೆ.
'ನಾನು ಸುಮಾರು 10 ಕ್ಕೂ ಹೆಚ್ಚಿನ ಅಂಗಡಿಗಳಿಗೆ ಭೇಟಿ ನೀಡಿದ್ದೇನೆ. ಇಂದು ಬೆಳಿಗ್ಗೆ 9 ಗಂಟೆಗೆ ಸೋನಾ ಮಸೂರಿ ಅಕ್ಕಿ ಚೀಲವನ್ನು ಹುಡುಕಲು ಪ್ರಾರಂಭಿಸಿದೆ. ಸಂಜೆ 4 ಗಂಟೆಯವರೆಗೂ ನಾನು ಅಕ್ಕಿಯ ಚೀಲಕ್ಕಾಗಿ ಹುಡುಕಾಟ ನಡೆಸಿದೆ. ಆ ನಂತರ ಮೂರು ಪಟ್ಟು ಹೆಚ್ಚಿನ ಬೆಲೆಗೆ ಅಕ್ಕಿಯನ್ನು ಖರೀಧಿಸಿದೆ' ಎಂದು ಅವರು ತಿಳಿಸಿದ್ದಾರೆ.

ಅನಿವಾಸಿ ಭಾರತೀಯರು (ಎನ್‌ಆರ್‌ಐ) ಬಿಳಿ ಅಕ್ಕಿಯನ್ನು ಪಡೆಯಲು ಪರದಾಡುತ್ತಿದ್ದಾರೆ. ಭಾರತದಿಂದ ಅಕ್ಕಿ ರಫ್ತು ನಿಷೇಧವಾದ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ದೊಡ್ಡ ದೊಡ್ಡ ಅಂಗಡಿಗಳ ಮುಂದೆ ಅಕ್ಕಿ ಖರೀದಿಸಲು ಜನರು ಮುನ್ನುಗ್ಗತ್ತಿದ್ದಾರೆ. ಹಲವಾರು ಜನರು ಸರತಿ ಸಾಲಿನಲ್ಲಿ ನಿಂತಿರುವ ವಿಡಿಯೊ ಹಾಗೂ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಭಾರತದಲ್ಲಿ ಅಕ್ಕಿ ದಾಸ್ತಾನು ಇದ್ದರೂ, ಮುಂದಿನ ದಿನಗಳಲ್ಲಿ ಕೊರತೆ ಉಂಟಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಮುನ್ನಚ್ಚರಿಕೆ ಕ್ರಮವಾಗಿ ಅಕ್ಕಿಯನ್ನು ರಫ್ತನ್ನು ನಿಷೇಧಿಸಿದೆ.

ಗ್ರಾಹಕರಿಗೆ ಕಡಿಮೆ ಬೆಲೆಗಳಲ್ಲಿ ಅಕ್ಕಿ ಸಿಗುವಂತೆ ಮಾಡುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಇದು ಅಮೆರಿಕ ಸೇರಿದಂತೆ ಯುರೋಪಿನ ಹಲವು ದೇಶಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.
ಅಮೆರಿಕದ ಸಪ್ನಾ ಫುಡ್ಸ್‌ನಲ್ಲಿರುವ ಮೇರಿಲ್ಯಾಂಡ್‌ನ ಸಗಟು ಮಾರಾಟಗಾರ ತರುಣ್ ಸರ್ದಾನ ಅವರು ಎಎನ್‌ಐ ಜೊತೆ ಮಾತನಾಡಿದ್ದಾರೆ. ಅಕ್ಕಿಗೆ ಭಾರೀ ಬೇಡಿಕೆ ಇದ್ದು, ಬೆಲೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.
#India has banned the export of rice to foreign countries.
— Siraj Noorani (@sirajnoorani) July 22, 2023
NRI rising for rice in concern
#RiceExportsBan #RiceExports pic.twitter.com/jRFqh6uiAK
'ನಾವು ನಿರ್ದಿಷ್ಟ ತಳಿಯ ಅಕ್ಕಿಗಾಗಿ ಬಹಳಷ್ಟು ಕರೆಗಳನ್ನು ಸ್ವೀಕರಿಸುತ್ತಿದ್ದೇವೆ. ಸೋನಾ ಮಸೂರಿಗೆ ಅತಿಹೆಚ್ಚು ಬೇಡಿಕೆ ಇದೆ. ವಾರಾಂತ್ಯದಲ್ಲಿ ಬೇಡಿಕೆ ಇನ್ನೂ ಹೆಚ್ಚಿತ್ತು. ಸೋಮವಾರ ಬೆಳಿಗ್ಗೆ, ಎಲ್ಲರೂ ಗೋದಾಮುಗಳಿಂದ ಸಾಧ್ಯವಾದಷ್ಟು ದಕ್ಷಿಣ ಭಾರತದ ಅಕ್ಕಿಯನ್ನು ಪಡೆಯಲು ಪ್ರಯತ್ನಿಸುತ್ತಿದ್ದರು' ಎಂದು ತಿಳಿಸಿದ್ದಾರೆ.
Ration shop dhaggara rice kosam queue lo unnattu undhi rice export ban anesariki pic.twitter.com/moVL845Nsc
— Certified Aawara (@BogeshwarRao) July 21, 2023
ರಫ್ತು ನಿಷೇಧವು ಹೆಚ್ಚು ಬೆಲೆಯ ಬಾಸುಮತಿ ಅಕ್ಕಿಯನ್ನು ಒಳಗೊಂಡಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಹಕರು ಬಾಸುಮತಿ ಅಕ್ಕಿಯನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
Those who call Indian Christians ‘Rice Bag Converts’ are rioting to hoard rice bags in Texas! pic.twitter.com/r8df7oylHN
— Ashok Swain (@ashoswai) July 26, 2023
ಗ್ರಾಹಕರ ಬೇಡಿಕೆ ಹೆಚ್ಚಾಗುತ್ತಿದ್ದಂತೆ, ಬೆಲೆಯೂ ಹೆಚ್ಚಾಗುತ್ತದೆ. ಸಗಟು ವ್ಯಾಪಾರಿಗಳು ಮತ್ತು ಅಕ್ಕಿ ಕಂಪನಿಗಳು ಬೆಲೆಗಳನ್ನು ಏರಿಸುತ್ತಿವೆ. ಇದು ಬೆಲೆ ಏರಿಕೆಗೆ ಕಾರಣವಾಗುತ್ತದೆ. ದುರದೃಷ್ಟವಶಾತ್ ಬೆಲೆಗಳು ಹೆಚ್ಚಿವೆ. ಶೇಕಡಾ 100 ರಷ್ಟು ಹೆಚ್ಚಾಗಿದೆ. ಇದು ಹೆಚ್ಚುಕಮ್ಮಿ ದುಪ್ಪಟ್ಟಾಗಿದೆ ಎಂದು ಸರ್ದಾನ ತಿಳಿಸಿದ್ದಾರೆ.
-
Abhishek Sharma: 'ಅಭಿಷೇಕ್ ಶರ್ಮಾ ಒಬ್ಬ ಬ್ಲೈಂಡ್ ಸ್ಲಾಗರ್': ರೊಚ್ಚಿಗೆದ್ದ ಅಭಿಮಾನಿಗಳು -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Oil Import: ತೈಲ ಆಮದಿಗೆ ವಿದೇಶಗಳ ಅನುಮತಿ ಬೇಕಿಲ್ಲ: ಭಾರತದ ಸ್ವತಂತ್ರ ಇಂಧನ ನೀತಿ ಹೊಂದಿದೆ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ರಕ್ಷಿತ್ ಶೆಟ್ಟಿ ಪೋಸ್ಟ್ ವೈರಲ್, ರಶ್ಮಿಕಾ ಮಂದಣ್ಣ ಬಗ್ಗೆ ಚರ್ಚೆ ಶುರು... Rashmika Mandanna -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
ಮೊಟ್ಟೆ ಬೆಲೆ ಭಾರಿ ಕುಸಿತ, ಕೋಟಿ ಕೋಟಿ ರೂಪಾಯಿ ಕಳೆದುಕೊಳ್ಳುತ್ತಿರುವ ರೈತರು... Operation Roaring Lion -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ












Click it and Unblock the Notifications