ನಿಮಗೆ ದೊಡ್ಡ ಮಿತ್ರ ಬೇಕಾದರೆ ನಮ್ಮ ಕೈದಿಗಳನ್ನು ಹಸ್ತಾಂತರಿಸಿ: ರಷ್ಯಾಕ್ಕೆ ಝೆಲೆನ್ಸ್ಕಿ ಷರತ್ತು

ಕೀವ್‌, ಏಪ್ರಿಲ್ 13: ಯುನೈಟೆಡ್ ಸ್ಟೇಟ್ಸ್ ಇನ್ನೂ ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ಉಕ್ರೇನ್‌ಗೆ ಕಳುಹಿಸುವ ನಿರೀಕ್ಷೆ ಇದೆ. ಈ ನಡುವೆ ಕ್ರೆಮ್ಲಿನ್‌ನ ಅತ್ಯಂತ ಉನ್ನತ ಮಿತ್ರನನ್ನು ಬಿಡುಗಡೆ ಮಾಡಬೇಕಾದರೆ ನಮಗೆ ನಮ್ಮ ಯುದ್ಧ ಕೈದಿಗಳನ್ನು ಬಿಡುಗಡೆ ಮಾಡಿ ಎಂದು ಉಕ್ರೇನ್ ರಷ್ಯಾಕ್ಕೆ ಷರತ್ತು ಹಾಕಿದೆ.

ಈ ನಡುವೆ ಯುಎಸ್ ಅಧ್ಯಕ್ಷ ಜೋ ಬೈಡೆನ್ ಉಕ್ರೇನ್‌ನ ಮೇಲಿನ ರಷ್ಯಾದ ದಾಳಿಯನ್ನು ಮೊದಲ ಬಾರಿಗೆ ನರಮೇಧ ಎಂದು ಉಲ್ಲೇಖ ಮಾಡಿದ್ದಾರೆ. "ಇದು ನರಮೇಧವಾಗಿದೆ. ಇದನ್ನು ನಾವು ವಕೀಲರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ನಿರ್ಧರಿಸಲು ಅವಕಾಶ ನೀಡುತ್ತೇವೆ. ಆದರೆ ಇದು ನರಮೇಧ ಎಂದು ನನಗೆ ಖಚಿತವಾಗಿ ತೋರುತ್ತಿದೆ," ಎಂದು ಹೇಳಿದ್ದಾರೆ.

ಇನ್ನು ಬುಧವಾರ ಮುಂಜಾನೆ ಭಾಷಣದಲ್ಲಿ ಮಾತನಾಡಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, "ನಾನು ರಷ್ಯಾದ ಒಕ್ಕೂಟದ ಮುಂದೆ ಒಂದು ಪ್ರಸ್ತಾಪ ಇಡುತ್ತೇನೆ. ಈಗ ರಷ್ಯಾದ ಸೆರೆಯಲ್ಲಿರುವ ನಮ್ಮ ಯುವಕ, ಯುವತಿಯರನ್ನು ನೀವು ಬಿಡುಗಡೆ ಮಾಡಿ, ನಿಮ್ಮ ಈ ವ್ಯಕ್ತಿಯನ್ನು ನಿಮಗೆ ನಾವು ಹಸ್ತಾಂತರ ಮಾಡುತ್ತೇವೆ," ಎಂದು ಆಫರ್ ನೀಡಿದ್ದಾರೆ. ಹಾಗಾದರೆ ಈ ಉನ್ನತ್ತ ವ್ಯಕ್ತಿ ಯಾರು? ಮುಂದೆ ಓದಿ..

ರಷ್ಯಾದ ಅಗ್ರ ಮಿತ್ರ ಯಾರು?

ರಷ್ಯಾದ ಅಗ್ರ ಮಿತ್ರ ಯಾರು?

ಉಕ್ರೇನ್ ರಷ್ಯಾದ ಅಗ್ರ ಮಿತ್ರ ಎಂದೇ ಕರೆಯಲಾಗುವ ವಿಕ್ಟರ್ ವೊಲೊಡಿಮಿರೊವಿಚ್ ಮೆಡ್ವೆಡ್ಚುಕ್ ಅವರನ್ನು ಬಂಧನ ಮಾಡಿದೆ. ವಿಕ್ಟರ್ ವೊಲೊಡಿಮಿರೊವಿಚ್ ಮೆಡ್ವೆಡ್ಚುಕ್ ಉಕ್ರೇನಿಯನ್ ವಕೀಲರು, ವ್ಯಾಪಾರಿ ಹಾಗೂ ರಾಜಕಾರಣಿಯಾಗಿದ್ದಾರೆ. 29 ಆಗಸ್ಟ್ 2019 ರಂದು ಉಕ್ರೇನ್‌ನ ಪೀಪಲ್ಸ್ ಡೆಪ್ಯೂಟಿ ಆಗಿ ಆಯ್ಕೆಯಾದರು. ಹಾಗೆಯೇ ರಷ್ಯಾದ ಪರ ರಾಜಕೀಯ ಸಂಘಟನೆಯಾದ ಉಕ್ರೇನಿಯನ್ ಚಾಯ್ಸ್‌ನ ಅಧ್ಯಕ್ಷರಾಗಿದ್ದಾರೆ. ಉಕ್ರೇನ್ ಯುರೋಪಿಯನ್ ಒಕ್ಕೂಟಕ್ಕೆ ಸೇರುವ ವಿರೋಧಿಯಾಗಿದ್ದಾರೆ.

ಕೈಕೋಳದಲ್ಲಿ ಮೆಡ್ವೆಡ್ಚುಕ್

ಕೈಕೋಳದಲ್ಲಿ ಮೆಡ್ವೆಡ್ಚುಕ್

ಕೈಕೋಳದಲ್ಲಿರುವ ಮೆಡ್ವೆಡ್‌ಚುಕ್ ಅವರ ಫೋಟೋ ಅನ್ನು ಉಕ್ರೇನ್‌ನ ಭದ್ರತಾ ಸೇವೆಯ ಮುಖ್ಯಸ್ಥ ಇವಾನ್ ಬಕಾನೋವ್ ಫೇಸ್‌ಬುಕ್‌ನಲ್ಲಿ ಹಾಕಿದ್ದಾರೆ. ವಿಕ್ಟರ್ ವೊಲೊಡಿಮಿರೊವಿಚ್ ಮೆಡ್ವೆಡ್ಚುಕ್ ಅವರನ್ನು ಬಂಧನ ಮಾಡಲು ನಮ್ಮ ಯೋಧರು ಮಿಂಚಿನ ವೇಗದ ಮತ್ತು ಅಪಾಯಕಾರಿ ಬಹು-ಹಂತದ ವಿಶೇಷ ಕಾರ್ಯಾಚರಣೆಯನ್ನು ನಡೆಸಿದರು ಎಂದು ಹೇಳಿದ್ದಾರೆ. ಆದರೆ ಕ್ರೆಮ್ಲಿನ್ ವಕ್ತಾರರು "ನಾವು ಫೋಟೋವನ್ನು ನೋಡಿದ್ದೇವೆ. ಆದರೆ ಇದು ನಿಜ ಎಂದು ಹೇಳಲು ಸಾಧ್ಯವಿಲ್ಲ," ಎಂದಿದ್ದಾರೆ.

ಪುಟಿನ್ ಅನ್ನು ಅಪಹಾಸ್ಯ ಮಾಡಿದ ಝೆಲೆನ್ಸ್ಕಿ

ಪುಟಿನ್ ಅನ್ನು ಅಪಹಾಸ್ಯ ಮಾಡಿದ ಝೆಲೆನ್ಸ್ಕಿ

ಝೆಲೆನ್ಸ್ಕಿ ತನ್ನ ಭಾಷಣದಲ್ಲಿ ಪುಟಿನ್ ಅವರನ್ನು ಅಪಹಾಸ್ಯ ಮಾಡಿದ್ದಾರೆ. "ಒಂದು ತಿಂಗಳಿಗಿಂತ ಸ್ವಲ್ಪ ಹೆಚ್ಚು ಯುದ್ಧದಲ್ಲಿ ತಮ್ಮದೇ ಆದ ಹತ್ತಾರು ಸೈನಿಕರ ಸಾವಿಗೆ ರಷ್ಯಾ ಯೋಜನೆಯನ್ನು ಮಾಡಿದೆ," ಎಂದು ವ್ಯಂಗ್ಯವಾಡಿದ್ದಾರೆ. ಇನ್ನು ಆನ್-ಆಂಡ್-ಆಫ್ ಶಾಂತಿ ಮಾತುಕತೆಗಳು "ಮತ್ತೆ ನಮಗೆ ಡೆಡ್-ಎಂಡ್ ಪರಿಸ್ಥಿತಿಗೆ ಮರಳಿದೆ" ಎಂದು ಪುಟಿನ್ ಹೇಳಿದರು. ಮಂಗಳವಾರ ತನ್ನ ಹೇಳಿಕೆ ವೇಳೆ ಪುಟಿನ್ ತೊದಲುವಂತೆ ಕಂಡು ಬಂದಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ರಷ್ಯಾದ ವಿರುದ್ಧ ಆರೋಪಗಳ ಸುರಿಮಳೆ

ರಷ್ಯಾದ ವಿರುದ್ಧ ಆರೋಪಗಳ ಸುರಿಮಳೆ

1945ರ ಬಳಿಕ ಯುರೋಪಿಯನ್ ರಾಷ್ಟ್ರದ ಮೇಲೆ ನಡೆದ ಅತಿ ದೊಡ್ಡ ದಾಳಿ ಇದಾಗಿದೆ. ಮಾಸ್ಕೋದ ಸುಮಾರು ಏಳು ವಾರಗಳ ದೀರ್ಘ ಆಕ್ರಮಣದ ಸಂದರ್ಭದಲ್ಲಿ 4.6 ಮಿಲಿಯನ್‌ಗಿಂತಲೂ ಹೆಚ್ಚು ಜನರು ವಿದೇಶಕ್ಕೆ ಪಲಾಯನ ಮಾಡಿದ್ದಾರೆ. ಸಾವಿರಾರು ಜನರು ಕೊಲಲ್ಪಟ್ಟಿದ್ದಾರೆ. ಸಾವಿರಾರು ಮಂದಿಗೆ ಗಾಯಗಳು ಆಗಿದೆ. ಉತ್ತರ ಉಕ್ರೇನ್‌ನಲ್ಲಿ ರಷ್ಯಾ ಕೊಲೆ, ಚಿತ್ರಹಿಂಸೆ ಮತ್ತು ಅತ್ಯಾಚಾರ ಮಾಡುತ್ತಿದೆ ಎಂದು ಉಕ್ರೇನ್ ಹೇಳಿದೆ. ಹಾಗೆಯೇ ನಾಗರಿಕರ ಶವಗಳು ಲಭ್ಯವಾಗಿದೆ ಎಂದು ಉಕ್ರೇನ್ ಹೇಳಿದೆ. ಆದರೆ ಮಾಸ್ಕೋ ಮಾತ್ರ ಈ ಆರೋಪವನ್ನು ಅಲ್ಲಗಳೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+