Return of the King: ಡೊನಾಲ್ಡ್ ಟ್ರಂಪ್‌ಗೆ ಸ್ವಾಗತ ಕೋರಿದ ಎಲಾನ್ ಮಸ್ಕ್
ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಡೊನಾಲ್ಡ್ ಟ್ರಂಪ್‌ಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಯುಎಸ್ ಉದ್ಯಮಿ, ಬಿಲಿಯನೇರ್ ಎಲಾನ್ ಮಸ್ಕ್ ಚುನಾವಣೆಯಲ್ಲಿ ಬಹಿರಂಗವಾಗಿಯೇ ಡೊನಾಲ್ಡ್ ಟ್ರಂಪ್ ಅವರಿಗೆ ಬೆಂಬಲ ನೀಡಿದ್ದರು, ಟ್ರಂಪ್ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಎಲಾನ್ ಮಸ್ಕ್ ಕುಟುಂಬ ಸಮೇತ ಭಾಗವಹಿಸಿದ್ದರು. ಟ್ರಂಪ್ ಶ್ವೇತ ಭವನಕ್ಕೆ ಮರಳಿರುವುದಕ್ಕೆ ಟ್ರಂಪ್ ಎಕ್ಸ್‌ನಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ.
2021ರಲ್ಲಿ ಡೊನಾಲ್ಡ್ ಟ್ರಂಪ್ ಅವರ ಟ್ವಿಟರ್ ಖಾತೆಯನ್ನು ಅಮಾನತುಗೊಳಿಸಲಾಗಿತ್ತು. ಬಳಿಕ ಎಲಾನ್ ಮಸ್ಕ್ ಟ್ವಿಟರ್ ಅನ್ನು ಖರೀದಿ ಮಾಡಿದ್ದರು. ಈಗ ಅಮೆರಿಕದ ಅಧ್ಯಕ್ಷರಾಗಿ ಟ್ರಂಪ್ ಅವರ POTUS (ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ) ಖಾತೆಯನ್ನು ವಾಪಸ್ ನೀಡಲಾಗಿದ್ದು, ಎರಡೂ ಫೋಟೊಗಳನ್ನು ಎಲಾನ್ ಮಸ್ಕ್ ಹಂಚಿಕೊಂಡಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ ಟ್ರಂಪ್ ಅವರ ಖಾತೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಅಮೆರಿಕದ ಇತಿಹಾಸದಲ್ಲಿ ಶ್ರೇಷ್ಠ ರಾಜಕೀಯ ಪುನರಾಗಮನಗಳಲ್ಲಿ ಒಂದನ್ನು ಆಚರಿಸುವ Return of the King ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಹಂಚಿಕೊಂಡಿದ್ದಾರೆ.
2021ರಲ್ಲಿ ಟ್ವಿಟರ್ ಖಾತೆ ಅಮಾನತು
ಡೊನಾಲ್ಡ್ ಟ್ರಂಪ್ ಅವರ ಟ್ವೀಟ್‌ಗಳು ಸಾಮಾಜಿಕ ಮಾಧ್ಯಮ ವೇದಿಕೆಯ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಬಳಿಕ ಅವರ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಲಾಗಿತ್ತು. 2021ರ ಯುಎಸ್ ಚನಾವಣೆಯಲ್ಲಿ ಜೋ ಬಿಡೆನ್ ವಿರುದ್ಧ ಟ್ರಂಪ್ ಸೋತ ಬಳಿಕ ಅವರ ಬೆಂಬಲಿಗರು ಕ್ಯಾಪಿಟಲ್ ಕಟ್ಟಡಕ್ಕೆ ನುಗ್ಗಿದ್ದರು. ಈ ಸಂದರ್ಭದಲ್ಲಿ ಟ್ರಂಪ್ ಅವರ ಟ್ವಿಟರ್ ಖಾತೆಯನ್ನು ಅಮಾನತುಗೊಳಿಸಲಾಗಿತ್ತು.
ಟ್ರಂಪ್ ಅವರ ಟ್ವೀಟ್‌ಗಳು ಹಿಂಸೆಗೆ ಪ್ರಚೋದನೆ ನೀಡುವ ಮೂಲಕ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತವೆ ಎಂದು ಟ್ವಿಟರ್ ಕಾರಣ ನೀಡಿ ಖಾತೆಯನ್ನು ಅಮಾನತು ಮಾಡಿತ್ತು. 2022ರಲ್ಲಿ ಎಲಾನ್ ಮಸ್ಕ್ ಟ್ವಿಟರ್ ಅನ್ನು ಖರೀದಿ ಮಾಡಿದರು, ಬಳಿಕ ಎಲಾನ್ ಮಸ್ಕ್ ಸಾಮಾಜಿಕ ಮಾಧ್ಯಮದಲ್ಲಿ ಟ್ರಂಪ್ ಅವರ ಖಾತೆಯನ್ನು ಮರುಸ್ಥಾಪನೆ ಮಾಡಲು ಆನ್‌ಲೈನ್ ವೋಟಿಂಗ್ ಮಾಡಿದರು. ಇದರಲ್ಲಿ 51.8% ಜನರು ಪರವಾಗಿ ಮತ್ತು 48.2% ಜನರು ವಿರುದ್ಧವಾಗಿ ಮತ ಚಲಾಯಿಸಿದ ಬಳಿಕ ಟ್ರಂಪ್ ಅವರ ಎಕ್ಸ್ ಖಾತೆಯನ್ನು ಮತ್ತೆ ಸ್ಥಾಪನೆ ಮಾಡಲಾಯಿತು.
ಟ್ರಂಪ್ ಈಗ ಎಕ್ಸ್‌ನಲ್ಲಿ ಕೇವಲ ಉದ್ಯಮಿಯಾಗಿ ಮಾತ್ರವಲ್ಲದೆ ಎರಡು ಬಾರಿ ಆಯ್ಕೆಯಾದ ಯುನೈಟೆಡ್ ಸ್ಟೇಟ್ಸ್‌ನ ಅಧ್ಯಕ್ಷರಾಗಿಯೂ ಪುನರಾಗಮನ ಮಾಡಿದ್ದಾರೆ. ಅವರು ಈಗ ತಮ್ಮ ಹೆಸರಿನ POTUS ಖಾತೆಯನ್ನು ಹೊಂದಿದ್ದಾರೆ.












Click it and Unblock the Notifications