ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಎಸ್‌ ಮಧ್ಯಂತರ ಚುನಾವಣೆ; ರಿಪಬ್ಲಿಕನ್‌ ಅಭ್ಯರ್ಥಿಗಳಿಗೆ ಗೆಲುವು

|
Google Oneindia Kannada News

ವಾಷಿಂಗ್‌ಟನ್‌, ನವೆಂಬರ್‌ 17: ಅಮೆರಿಕಾದಲ್ಲಿ ರಿಪಬ್ಲಿಕನ್‌ ಪಕ್ಷವು ಮಧ್ಯಂತರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಯುಎಸ್‌ ಹೌಸ್‌ನ ನಿಯಂತ್ರಣ ಸಾಧಿಸಿದೆ. ತನ್ನ ರಾಜಕೀಯ ಪ್ರಾಬಲ್ಯ ಮರುಪಡೆದಿರುವ ರಿಪಬ್ಲಿಕನ್ನರು ಈಗ ಅಧ್ಯಕ್ಷ ಜೋ ಬೈಡನ್‌ಗೆ ತಡೆ ನೀಡಲು ಸನ್ನದ್ಧರಾಗಿದ್ದಾರೆ.

ಯುಎಸ್‌ ಚುನಾವಣೆಯಲ್ಲಿ 218 ಸ್ಥಾನಗಳನ್ನು ಕಡಿಮೆ ಅಂತರದಿಂದ ರಿಪಬ್ಲಿಕನ್ನರು ಗೆದಿದ್ದಾರೆ. ಯುಎಸ್‌ ಶಾಸಕಾಂಗದ ಕೆಳಮನೆಯಲ್ಲಿ ರಿಪಬ್ಲಿಕನ್‌ ಪಕ್ಷದವರು ಬಹುಮತ ಸಾಧಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಕೋಟಿಗಟ್ಟಲೇ ಜನರು ಮಧ್ಯಂತರ ಚುನಾವಣೆಯಲ್ಲಿ ಮತದಾನ ಮಾಡಿದ ವಾರದ ಬಳಿಕ ರಿಪಬ್ಲಿಕನ್ನರು ಫಲಿತಾಂಶದಲ್ಲಿ ಗೆಲುವು ಸಾಧಿಸಿದ್ದಾರೆ.

ಅಮೆರಿಕ ಮಧ್ಯಂತರ ಚುನಾವಣೆ: ಭಾರತ, ಜಗತ್ತಿನ ಮೇಲಾಗುವ ಪರಿಣಾಮವೇನು?ಅಮೆರಿಕ ಮಧ್ಯಂತರ ಚುನಾವಣೆ: ಭಾರತ, ಜಗತ್ತಿನ ಮೇಲಾಗುವ ಪರಿಣಾಮವೇನು?

ಹಣದುಬ್ಬರ ಏರಿಕೆ ಮತ್ತು ಜೋ ಬೈಡನ್ ಜನಪ್ರಿಯತೆಯ ರೇಟಿಂಗ್‌ಗಳು ಕಡಿಮೆಯಾಗುತ್ತಿದ್ದು, ರಿಪಬ್ಲಿಕನ್ನರು ಅಮೆರಿಕದ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗುತ್ತಿದೆ. ರಿಪಬ್ಲಿಕನ್ನರು ಯುಎಸ್‌ನ ಎರಡೂ ಮನೆಗಳ ನಿಯಂತ್ರಣವನ್ನು ಪಡೆಯಲಿದ್ದಾರೆ. ಇದ್ದರಿಂದ ಬೈಡನ್‌ರ ಹೆಚ್ಚಿನ ಶಾಸಕಾಂಗ ಯೋಜನೆಗಳ ಮೇಲೆ ಪರಿಣಾಮ ಬೀರಲಿದೆ.

Republicans win US midterm elections

ಬೈಡನ್ ಅವರ ಪಕ್ಷವು ಪೆನ್ಸಿಲ್ವೇನಿಯಾದಲ್ಲಿ ಪ್ರಮುಖ ಸ್ಥಾನವನ್ನು ಗೆದ್ದುಕೊಂಡಿದ್ದು, ಅರಿಜೋನಾ ಹಾಗೂ ನೆವಾಡಾದಲ್ಲಿ ಮತ್ತೆರಡು ಸ್ಥಾನಗಳನ್ನು ಪಡೆದುಕೊಂಡಿದೆ. ಮೇಲ್ಮನೆಯಲ್ಲಿ 50 ಸ್ಥಾನಗಳೊಂದಿಗೆ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರ ಟೈ ಬ್ರೇಕಿಂಗ್‌ ಮತದೊಂದಿಗೆ ಅಜೇಯ ಬಹುಮತವನ್ನು ಪಡೆದುಕೊಂಡಿತು.

ವಾಷಿಂಗ್ಟನ್‌: ಬುಡಕಟ್ಟು ಶಂಕಿತರ ಮೇಲೆ ಗುಂಡಿನ ದಾಳಿ: 2 ಸಾವುವಾಷಿಂಗ್ಟನ್‌: ಬುಡಕಟ್ಟು ಶಂಕಿತರ ಮೇಲೆ ಗುಂಡಿನ ದಾಳಿ: 2 ಸಾವು

ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಬಹುಮತ ಗಳಿಸಿದ್ದಕ್ಕಾಗಿ ರಿಪಬ್ಲಿಕನ್ನರನ್ನು ಯುಎಸ್ ಅಧ್ಯಕ್ಷ ಜೋ ಬೈಡನ್ ಬುಧವಾರ ಅಭಿನಂದಿಸಿದ್ದಾರೆ. ಅಮೆರಿಕದಲ್ಲಿ ತಮ್ಮ ರಾಜಕೀಯ ಪ್ರತಿಸ್ಪರ್ಧಿಗಳೊಂದಿಗೆ ಸಹಕರಿಸುವುದಾಗಿ ಪ್ರತಿಜ್ಞೆ ಮಾಡಿದರು. ಹೌಸ್ ಬಹುಮತವನ್ನು ಗೆದ್ದ ರಿಪಬ್ಲಿಕನ್ನರಿಗೆ ನಾನು ನಾಯಕ (ಕೆವಿನ್) ಮೆಕಾರ್ಥಿಯನ್ನು ಅಭಿನಂದಿಸುತ್ತೇನೆ. ದುಡಿಯುವ ವರ್ಗಕ್ಕೆ ಸಹಕಾರ ನೀಡಲು ಹೌಸ್ ರಿಪಬ್ಲಿಕನ್ನರೊಂದಿಗೆ ಕೆಲಸ ಮಾಡಲು ಸಿದ್ಧನಿದ್ದೇನೆ. ನಾನು ಯಾರೊಂದಿಗಾದರೂ ಕೆಲಸ ಮಾಡುತ್ತೇನೆ ಎಂದು ಬೈಡನ್ ತಿಳಿಸಿದ್ದಾರೆ.

English summary
In America, the Republican Party won the midterm elections and took control of the US House. Republicans, having regained their political dominance, are now poised to block President Joe Biden.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X