'ಪ್ರಧಾನಿ ಮೋದಿಗೆ' ವೀಸಾ ಕಂಟಕವಿಲ್ಲ: ಅಮೆರಿಕ ಘೋಷಣೆ

ready-to-work-with-prime-minister-modi-visa-issue-not-an-issue-us
ನವದೆಹಲಿ, ನ.8: ಗುಜರಾತಿನ ಹಾಲಿ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಮುಂದೆ ಪ್ರಧಾನಿಯಾದರೆ ಅವರ ಜತೆ ನಮ್ಮ ಬಾಂಧವ್ಯಕ್ಕೇನೂ ಅಡ್ಡಿ ಇರುವುದಿಲ್ಲ. ಅವರೊಂದಿಗೆ ಸುಗಮವಾಗಿ ನಾವು ಕೆಲಸ ಮಾಡಿಕೊಂಡು ಹೋಗಲು ಸಿದ್ಧವಾಗಿದ್ದೇವೆ ಎಂದು ಅಮೆರಿಕ ಘೋಷಿಸಿದೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಫಲಿತಾಂಶ ಏನೇ ಆಗಲಿ ಭಾರತ ಜತೆಗಿನ ನಮ್ಮ ದ್ವಿಪಕ್ಷೀಯ ಬಾಂಧವ್ಯ ಅಬಾಧಿತವಾಗಿ ಮುಂದುವರಿಯಲಿದೆ. ಮೋದಿ ಪಕ್ಷವೇ ಅಧಿಕಾರಕ್ಕೆ ಬಂದರೂ ಅವರ ಜತೆಯೇ ನಾವು ಬಾಂಧವ್ಯ ಮುಂದುವರಿಸುವುದಾಗಿ ಅಧ್ಯಕ್ಷ ಬರಾಕ್ ಒಮಾಮಾ ಆಡಳಿತದ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.

ಮೋದಿಗೆ ವೀಸಾ ಕೊಡೋಲ್ಲ ಅಂತ ನಾವೆಲ್ಲಿ ಹೇಳಿದ್ದೀವಿ:
'ಅಸಲಿಗೆ ಮೋದಿಗೆ ನಾವು ವೀಸಾ ಕೊಡೋಲ್ಲ ಎಂದು ಎಲ್ಲೂ ಹೇಳಿಲ್ಲ. ಅದು ದೊಡ್ಡ ವಿಷಯ/ಸಮಸ್ಯೆ ಅಲ್ವೇ ಅಲ್ಲ. ಮೋದಿಗೆ ಅಮೆರಿಕ ವೀಸಾ ಕೊಡೋಲ್ಲ ಎಂಬುದೆಲ್ಲಾ ಮಾಧ್ಯಮಗಳ ಸೃಷ್ಟಿ. ಮುಂದೆ ಮೋದಿ ವೀಸಾಗೆ ಅರ್ಜಿ ಹಾಕಿದರೆ ಅಂದಿನ ದಿನಮಾನವನ್ನು ನೋಡಿಕೊಂಡು ಅವರಿಗೆ ವೀಸಾ ನೀಡಲಾಗುತ್ತದೆ' ಎಂದು ಒಬಾಮಾ ಆಡಳಿತಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಒಂದು ವೇಳೆ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದರೆ ಭಾರತ ಸರಕಾರದ ಜತೆ ನಿಮ್ಮ ಸಂಬಂಧ/ ಬಾಂಧವ್ಯ ಹೇಗಿರುತ್ತದೆ ಎಂದು ಪ್ರಶ್ನಿಸಿದಾಗ 'ಭಾರತ ಜತೆಗಿನ ನಮ್ಮ ಬಾಂಧವ್ಯ ದೀರ್ಘ ಕಾಲದ್ದು. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ಜತೆ ನಾವು ಕೆಲಸ ಮಾಡುತ್ತೇವೆ. ಅದರ ಬಗ್ಗೆ ಯಾವುದೇ ಸಂಶಯ ಬೇಡ' ಎಂದು ಉನ್ನತಾಧಿಕಾರಿಗಳು ಹೇಳಿದ್ದಾರೆ.

'ಗಮನಾರ್ಹವೆಂದರೆ ಮೋದಿ ಅವರು ಇದುವರೆಗೂ ಅಮೆರಿಕ ವೀಸಾ ಕೋರಿ ಅರ್ಜಿಯನ್ನೇ ಹಾಕಿಲ್ಲ. ಅವರು ವೀಸಾಗೆ ಅರ್ಜಿ ಹಾಕುತ್ತಿದ್ದಂತೆ ನಾವು ಅದನ್ನು ಪರಾಮರ್ಶಿಸುತ್ತೇವೆ. ಅಮೆರಿಕ ಸರಕಾರದಲ್ಲಿ ಯಾರೂ ಅದನ್ನು ವಿರೋಧಿಸುತ್ತಿಲ್ಲ' ಎಂದು ಅವರು ಸ್ಪಷ್ಟಪಡಿಸಿದರು.

'ನೀವು ಪ್ರಧಾನಿ ಮನಮೋಹನ್ ಸಿಂಗ್ ಸರಕಾರದ ಜತೆ ಸಬಲ ಸಂಬಂಧ ಹೊಂದಿದ್ದೀರಿ ಎನ್ನುತ್ತೀರಿ. ಹಾಗಾದರೆ ಮೋದಿ ಪ್ರಧಾನಿಯಾದರೆ ಅಮೆರಿಕಕ್ಕೆ ಅದು ತೊಡಕಾಗುವುದೇ?' ಎಂಬ ಪ್ರಶ್ನೆಗೆ ಉತ್ತರಿಸಿರುವ ಆ ಅಧಿಕಾರಿ 'ಪ್ರಧಾನಿ ಮನಮೋಹನ್ ಸಿಂಗ್ ಅವರ ಹಿಂದಿನ ಸರಕಾರ ಬಿಜೆಪಿಯದ್ದಾಗಿತ್ತು. ಅವರ ಜತೆಗೂ ನಮ್ಮ ಬಾಂಧವ್ಯ ಸುಮಧುರವಾಗಿತ್ತು' ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+