ಕಂತ್ರಿ ಪಾಕಿಸ್ತಾನಕ್ಕೆ ಗೂಸಾ ಕೊಡಲು ನಾವೂ ಸಿದ್ಧ ಎಂದ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ
ಅಮೆರಿಕದ ಮಧ್ಯಸ್ಥಿಕೆ ಬಳಿಕ ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಒಪ್ಪಂದಕ್ಕೆ ಒಪ್ಪಿಕೊಂಡಿವೆ. ಭಾರತೀಯ ಸೇನೆ ಕೊಟ್ಟ ಪ್ರತಿ ದಾಳಿಗೆ ಅಕ್ಷರಸಹ ನಲುಗಿದ ಪಾಪಿ ಪಾಕ್ ಕೊನೆಗೂ ಈ ನಿರ್ಧಾರಕ್ಕೆ ಬಂದಿದೆ ಎನ್ನುವ ಮಾಹಿತಿ ಇದೆ. ಈ ನಡುವೆಯೇ ಇದೀಗ ಬಲೂಚಿಸ್ತಾನ ಕೂಡ ಪಾಪಿಸ್ತಾಸನಕ್ಕೆ ಹೊಡೆತ ಕೊಡಲು ಸಜ್ಜಾಗಿ ನಿಂತಿದೆ.
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಈಗಾಗಲೇ ಪಾಕಿಸ್ತಾನಿ ಸೇನೆ ಮತ್ತು ಪೊಲೀಸರ ತುಂಬಾ ಸ್ಥಳಗಳನ್ನು ಧ್ವಂಸ ಮಾಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬಲೂಚಿಸ್ತಾನದಲ್ಲಿ ಬಲೂಚ್ ಲಿಬರೇಶನ್ ಆರ್ಮಿಯ ದಾಳಿ ತೀವ್ರಗೊಂಡಿವೆ. ಮಾಹಿತಿಯ ಪ್ರಕಾರ, ಮೇ 8 ರಿಂದ 10ರ ವರೆಗೆ ಬಲೂಚಿಸ್ತಾನದಲ್ಲಿ ದಾಳಿ ತೀವ್ರಗೊಂಡಿದೆ. ಕ್ವೆಟ್ಟಾ, ಕೆಚ್, ಪಂಜ್‌ಗುರ್, ನುಷ್ಕಿ, ಖುಜ್ದಾರ್ ಮತ್ತು ಇತರ ಜಿಲ್ಲೆಗಳು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಈ ದಾಳಿ ನಡೆದಿದೆ ಎಂದು ತಿಳಿದುಬಂದಿದೆ. ಇದಕ್ಕೆ ಪ್ರತಿಕಾರವಾಗಿ ಪಾಕಿಸ್ತಾನದ ವಿರುದ್ಧ ಸೇಡು ತೀರಿಸಿಕೊಳ್ಳಲು ಬಲೂಚಿಸ್ತಾನ ಈ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ.
ಬಲೂಚಿಸ್ತಾನ್ ಆರ್ಮಿ ಪಾಕಿಸ್ತಾನದಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದೆ. ಇದೇ ವಿಚಾರಚಾಗಿ ತುಂಬಾ ದಿನಗಳಿಂದ ಪಾಕಿಸ್ತಾನ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಲೇ ಇದೆ. ಆದರೆ, ಕಳೆದ ಕೆಲವು ತಿಂಗಳುಗಳಲ್ಲಿ ಬಿಎಲ್‌ಎ ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.
ಈ ಕುರಿತು ಬಲೂಚಿಸ್ತಾನದಲ್ಲಿರುವ 39 ಪಾಕಿಸ್ತಾನಿ ಮಿಲಿಟರಿ ಮತ್ತು ಪೊಲೀಸ್ ನೆಲೆಗಳ ಮೇಲೆ ದಾಳಿ ಮಾಡುವುದಾಗಿಯೂ ಬಿಎಲ್‌ಎ ಎಚ್ಚರಿಕೆ ಸಂದೇಶ ನೀಡಿದೆ. ಅಲ್ಲದೆ, ಹಲವು ಕಾರ್ಯತಂತ್ರಗಳನ್ನು ಸಾಧಿಸುವ ಗುರಿಯನ್ನು ಹೊಂದಿರುವ ತನ್ನ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂದು ಬಿಎಲ್‌ಎ ತಿಳಿಸಿದೆ.
ಬಿಎಲ್‌ಎ ವಕ್ತಾರ ಜಿಯಾಂಡ್ ಬಲೂತ್ ಸುದ್ದಿಗಾರರೊಂದಿದೆ ಮಾತನಾಡಿ, ಬಿಎಲ್‌ಎ ನಡೆಸಿದ ಇತ್ತೀಚಿನ ದಾಳಿಗಳು ಸ್ಥಳೀಯ ಪೊಲೀಸ್ ಠಾಣೆಗಳು, ಮಿಲಿಟರಿ ಬೆಂಗಾವಲು ಪಡೆ, ಪ್ರಮುಖ ಹೆದ್ದಾರಿ ಹಾಗೂ ಪ್ರಮುಖ ರಸ್ತೆಗಳಲ್ಲಿನ ದಿಗ್ಬಂಧನಗಳು ಸೇರಿದಂತೆ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡಿವೆ ಎಂದು ಹೇಳಿದರು.
ಅಲ್ಲದೆ, ಪಂಜ್‌ಗುರ್ ಮತ್ತು ಹೋಶಬ್‌ನಲ್ಲಿರುವ ಬಲೂಚ್ ಲಿಬರೇಶನ್ ಆರ್ಮಿ ಶಸ್ತ್ರಸಜ್ಜಿತ ಪಡೆ ಪೊಲೀಸ್ ಠಾಣೆಗಳು ಸೇರಿದಂತೆ ಸರ್ಕಾರಿ ಕಟ್ಟಡಗಳನ್ನು ವಶಪಡಿಸಿಕೊಂಡಿದೆ. ಜೊತೆಗೆ ಪೊಲೀಸ್ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಆರ್ಥಿಕ ಶೋಷಣೆ ಮತ್ತು ಮಿಲಿಟರಿ ದಬ್ಬಾಳಿಕೆ ನಡೆಯುತ್ತಿದೆ ಎಂದು ಆರೋಪಿಸಿ ಬಲೂಚಿಗಳು ತುಂಬಾ ಹಿಂದಿನಿಂದಲೂ ಪಾಕಿಸ್ತಾನದಿಂದ ಪ್ರತ್ಯೇಕತೆ ಬಯಸುತ್ತಿದ್ದಾರೆ. ಈ ಮೂಲಕ ಪಾಕಿಸ್ತಾನದ ಮೇಲೆ ದಾಳಿ ಮಾಡಲು ಸಿದ್ಧವಾಗಿದೆ ಎಂದು ಹೇಳಾಗುತ್ತಿದೆ. ಇದೀಗ ಭಾರತ-ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಆಗುತ್ತಿದ್ದಂತೆ ಭಾರತ ಜೊತೆ ನಿಂತರೆ, ನಾವು ಪಾಕಿಸ್ತಾನವನ್ನು ಧ್ವಂಸ ಮಾಡುತ್ತೇವೆ ಎಂದು ಹೇಳಿದೆ.












Click it and Unblock the Notifications