Ukraine: ಉಕ್ರೇನ್ & ರಷ್ಯಾ ಯುದ್ಧ ನಿಲ್ಲಿಸಲು ಮಹತ್ವದ ನಿರ್ಧಾರ?

ರಷ್ಯಾ & ಉಕ್ರೇನ್ ನಡುವೆ ಭೀಕರ ಕಾಳಗ ಶುರುವಾಗಿ ಇನ್ನೇನು 3 ವರ್ಷಗಳು ಮುಗಿಯಲಿದೆ. ಹೀಗೆ ಹಲವು ವರ್ಷಗಳಿಂದ ಇಬ್ಬರ ನಡುವೆ ತಿಕ್ಕಾಟ ಇದ್ದರೂ, ಯುದ್ಧ ನಿಲ್ಲಿಸಲು ಯಾರೂ ಮಹತ್ವದ ನಿರ್ಧಾರ ಕೈಗೊಂಡಿಲ್ಲ. ಲಕ್ಷಾಂತರ ಜನ ಈ ಯುದ್ಧಕ್ಕೆ ಬಲಿಯಾಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ. ಮತ್ತೊಂದು ಕಡೆ ಉಕ್ರೇನ್ ದೇಶದಲ್ಲಿ ಜನರು ಹಸಿವು & ಭಯಾನಕ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದಾಗ, ದಿಢೀರ್ ಉಕ್ರೇನ್ & ರಷ್ಯಾ ಯುದ್ಧ ನಿಲ್ಲಿಸಲು ಮಹತ್ವದ ನಿರ್ಧಾರ?

ಜಾಗತಿಕ ಮಟ್ಟದಲ್ಲಿ ರಷ್ಯಾ & ಉಕ್ರೇನ್ ಯುದ್ಧ ಒಂದು ರೀತಿ ಗ್ಯಾಂಗ್ರಿನ್ ರೀತಿ ಹರಡುತ್ತಾ, ಭಯ ಹುಟ್ಟು ಹಾಕುತ್ತಿದೆ. ಯಾಕಂದ್ರೆ, ರಷ್ಯಾ & ಉಕ್ರೇನ್ ವಾರ್ ಶುರುವಾದ ನಂತರ ಈಗ ಹಲವು ದೇಶಗಳ ನಡುವೆ ಕಿರಿಕ್ ಶುರುವಾಗಿದೆ. ಈ ತಿಕ್ಕಾಟ ಮುಂದೆ 3ನೇ ಮಹಾಯುದ್ಧಕ್ಕೆ ದಾರಿ ಮಾಡಿ ಕೊಡುತ್ತಾ? ಎಂಬ ಆತಂಕ ಕೂಡ ಆವರಿಸಿದೆ. ಹೀಗಾಗಿ ರಷ್ಯಾ & ಉಕ್ರೇನ್ ಯುದ್ಧಕ್ಕೆ ಬ್ರೇಕ್ ಹಾಕಬೇಕು ಎಂಬುದು ಎಲ್ಲರ ವಾದ ಆಗಿದೆ. ಹೀಗಿದ್ದಾಗ ಇಂದಿನಿಂದಲೇ ಶುರುವಾಗುತ್ತಿರುವ 'ಕ್ವಾಡ್‌' ಶೃಂಗಸಭೆಯಲ್ಲಿ ರಷ್ಯಾ & ಉಕ್ರೇನ್ ಯುದ್ಧದ ಬಗ್ಗೆ ಮಹತ್ವದ ಚರ್ಚೆ ನಡೆಯುವ ಸಾಧ್ಯತೆ ದಟ್ಟವಾಗಿದೆ.

Quad Summit May Take Big Decision Over Russia And Ukraine Issue

ಇಸ್ರೇಲ್ & ಗಾಜಾ ಯುದ್ಧದ ಚರ್ಚೆ?

ರಷ್ಯಾ & ಉಕ್ರೇನ್ ಮಾತ್ರ ಅಲ್ಲದೆ ಇಸ್ರೇಲ್ & ಗಾಜಾ ನಡುವೆ ಕೂಡ ಇದೀಗ ಭೀಕರ ಯುದ್ಧ ನಡೆಯುತ್ತಿದೆ. ಹೀಗಾಗಿ 'ಕ್ವಾಡ್‌' ಶೃಂಗಸಭೆಯಲ್ಲಿ ಇಸ್ರೇಲ್ & ಗಾಜಾ ಯುದ್ಧದ ಬಗ್ಗೆ ಕೂಡ ಚರ್ಚೆ ನಡೆಯಲಿದೆ ಎನ್ನಲಾಗಿದೆ. ಯಾಕಂದ್ರೆ ಈ ಎರಡೂ ಯುದ್ಧಗಳು ಪಾಶ್ಚಿಮಾತ್ಯರನ್ನ ಇನ್ನಿಲ್ಲದಂತೆ ಕಾಡುತ್ತಿವೆ. ಅದರಲ್ಲೂ ಅಮೆರಿಕದ ಪರಿಸ್ಥಿತಿ ಬಿಸಿ ತುಪ್ಪ ನುಂಗಿದಂತೆ ಆಗಿದೆ. ಹೀಗಾಗಿ ಈ ಎರಡೂ ಯುದ್ಧಗಳಿಗೆ ಬ್ರೇಕ್ ಹಾಕಲು ಸಾಧ್ಯವಾದಷ್ಟು ಪ್ರಯತ್ನ ಮಾಡುವ ಮುನ್ಸೂಚನೆ ಸಿಗುತ್ತಿದೆ.

'ಕ್ವಾಡ್‌' ರಾಷ್ಟ್ರಗಳ ಮುಖ್ಯಸ್ಥರು ಭಾಗಿ

ಜೋ ಬೈಡನ್‌ ಆಯೋಜನೆ ಮಾಡಿರುವ 'ಕ್ವಾಡ್‌' ರಾಷ್ಟ್ರಗಳ ಶೃಂಗಸಭೆಗೆ ಭಾರತ ಸೇರಿದಂತೆ, ಆಸ್ಟ್ರೇಲಿಯಾ, ಜಪಾನ್‌ನ ಪ್ರಧಾನ ಮಂತ್ರಿಗಳು ಭಾಗವಹಿಸಿದ್ದಾರೆ. ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್‌ ಹಾಗೂ ಜಪಾನ್‌ನ ಪ್ರಧಾನಿ ಫ್ಯುಮಿಯೊ ಕಿಶಿಡಾ ಈ ಸಭೆಗೆ ಹಾಜರ್ ಆಗಿದ್ದಾರೆ. ಹಾಗೇ ಭಾರತದ ಪರ ಖುದ್ದಾಗಿ, ಪ‍್ರಧಾನಿ ನರೇಂದ್ರ ಮೋದಿ ಅವರೆ ಅಮೆರಿಕಗೆ ತೆರಳಿದ್ದು ಶೃಂಗಸಭೆಯಲ್ಲಿ ಭಾಗವಹಿಸಿದ್ದಾರೆ. ಜಾಗತಿಕ ಮಟ್ಟದಲ್ಲೂ ಈ ಶೃಂಗಸಭೆ ಸಾಕಷ್ಟು ಪ್ರಭಾವ ಬೀರುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+