ಅಸಲಿ ಆಟ ಈಗ ಶುರು: ಅಮೆರಿಕದಲ್ಲಿ ಪ್ರಧಾನಿ ಮೋದಿ ಅಬ್ಬರ ಜೋರು!

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಅಂಗಳಕ್ಕೆ ಹೋಗಿ ತಲುಪಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರನ್ನ ಅದ್ಧೂರಿಯಾಗಿ ಸ್ವಾಗತಿಸಿ ಗಮನ ಸೆಳೆದಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಬೆಳವಣಿಗೆ ಎದುರಾಗಿರುವ ಈ ಸಮಯದಲ್ಲೇ, ಭಾರತದ ಜೊತೆ ಸ್ನೇಹ ಬೆಳೆಸಲು ಎಲ್ಲಾ ದೇಶಗಳು ಜಿದ್ದಿಗೆ ಬಿದ್ದಿವೆ. ಹಾಗಾದರೆ ಈಗ ನಡೆಯುತ್ತಿರುವ 'ಕ್ವಾಡ್' ಶೃಂಗಸಭೆ ಭಾರತಕ್ಕೆ ಯಾವ ರೀತಿ ಲಾಭ ತರಲಿದೆ? ಬನ್ನಿ ತಿಳಿಯೋಣ.

ಜೋ ಬೈಡನ್‌ ಆಯೋಜನೆ ಮಾಡಿರುವ 'ಕ್ವಾಡ್‌' ರಾಷ್ಟ್ರಗಳ ಶೃಂಗಸಭೆಯಲ್ಲಿ ಭಾರತವು ಸೇರಿ ಆಸ್ಟ್ರೇಲಿಯಾ, ಜಪಾನ್‌ನ ಪ್ರಧಾನ ಮಂತ್ರಿಗಳು ಭಾಗವಹಿಸಿದ್ದಾರೆ. ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್‌ ಹಾಗೂ ಜಪಾನ್‌ನ ಪ್ರಧಾನಿ ಫ್ಯುಮಿಯೊ ಕಿಶಿಡಾ ಈ ಸಭೆಗೆ ಹಾಜರ್ ಆಗಿದ್ದಾರೆ. ಭಾರತದ ಪರ ಪ‍್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಗೆ ತೆರಳಿ ಸಭೆಯಲ್ಲಿ ಭಾಗವಹಿಸಿದ್ದಾರೆ. ಹೀಗಿದ್ದಾಗ 'ಕ್ವಾಡ್‌' ಶೃಂಗಸಭೆ ಮೂಲಕ ಅಮೆರಿಕ ಇದೀಗ ಚೀನಾ & ತನ್ನ ಶತ್ರುಗಳಿಗೆ ಮೆಸೇಜ್ ಕೊಡಲು ಮುಂದಾಗಿದೆ. ಇದೇ ಸಮಯದಲ್ಲಿ ಭಾರತ ಕೂಡ ಈ ಶೃಂಗಸಭೆ ಮೂಲಕ ಅನೇಕ ಲಾಭ ಪಡೆಯಲಿದೆ.

Quad Summit And Profit For India From This Meet

ಏಷ್ಯಾದಲ್ಲಿ ಸೇನಾ ಪ್ರಾಬಲ್ಯ ಹೆಚ್ಚಳ!

ಭಾರತದ ಸುತ್ತಮುತ್ತಲ ಭಾಗದಲ್ಲಿ ಚೀನಾ ಸೇರಿದಂತೆ ಹಲವು ಶತ್ರುಗಳ ಕಾಟ ಹೆಚ್ಚಾಗುತ್ತಿದೆ. ಅದರಲ್ಲೂ ಹಿಂದೂ ಮಹಾಸಾಗರ ಪ್ರದೇಶದ ಮೇಲೆ ಭಾರತದ ಹಿಡಿತ ಇಲ್ಲ ಎಂಬ ಸುಳ್ಳು ಸುದ್ದಿ ನಿಜ ಮಾಡಲು ಹಲವು ಶತ್ರುಗಳು ಕಾಯುತ್ತಿದ್ದಾರೆ. ಹೀಗಿದ್ದಾಗ 'ಕ್ವಾಡ್‌' ಒಕ್ಕೂಟದ ಮೂಲಕ ಭಾರತ ತನ್ನ ಪ್ರಾಬಲ್ಯ ಏನು? ಎಂಬುದನ್ನ ಜಗತ್ತಿಗೇ ತೋರಿಸಲು ಮುಂದಾಗಿದೆ. ಅದ್ರಲ್ಲೂ ದಕ್ಷಿಣ ಚೀನಾ ಸಮುದ್ರ ಭಾಗದ ಮೇಲೆ ಕೂಡ 'ಕ್ವಾಡ್‌' ಒಕ್ಕೂಟದ ದೇಶಗಳು ಪ್ರಾಬಲ್ಯ ಸಾಧಿಸಲು ಯತ್ನಿಸುತ್ತಿದ್ದು, ಇದೀಗ 'ಕ್ವಾಡ್‌' ಶೃಂಗಸಭೆ ಪ್ರಮುಖ ವಿಚಾರಗಳಿಗೆ ದಾರಿ ಮಾಡಿಕೊಡಲಿದೆ.

ಅಮೆರಿಕ ಜೊತೆ ಸಂಬಂಧ ಸುಧಾರಣೆ

ಭಾರತ ಹಾಗೂ ಅಮೆರಿಕ ನಡುವೆ ಲಕ್ಷಾಂತರ ಕೋಟಿ ರೂಪಾಯಿ ವ್ಯವಹಾರ ನಡೆಯುತ್ತೆ. ಅದರಲ್ಲೂ ಅಮೆರಿಕ ಕೂಡ ಹಲವು ಸಂಗತಿಗಳಲ್ಲಿ ಈಗ ಭಾರತವನ್ನೇ ಅವಲಂಬಿಸಿ ಜೀವನ ನಡೆಸುತ್ತಿದೆ. ಹೀಗಿದ್ದಾಗ 'ಕ್ವಾಡ್‌' ಶೃಂಗಸಭೆ ಮೂಲಕ ಭಾರತ & ಅಮೆರಿಕ ಸಂಬಂಧವೂ ಸುಧಾರಣೆ ಆಗಲಿದೆ. ಇದರ ಜೊತೆಗೆ ಜಪಾನ್ & ಆಸ್ಟ್ರೇಲಿಯಾ ಜೊತೆಗಿನ ಭಾರತದ ಸ್ನೇಹ ಮತ್ತು ಬಾಂಧವ್ಯ ವೃದ್ಧಿಯಾಗುವ ನಿರೀಕ್ಷೆ ಇದೆ. ಹೀಗಾಗಿ 'ಕ್ವಾಡ್‌' ಶೃಂಗಸಭೆ ಭಾರತಕ್ಕೂ ಬಹುಮುಖ್ಯ ಆಗಿದ್ದು, ಜಗತ್ತಿನ ಗಮನವನ್ನೂ ಸೆಳೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+