ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

4ನೇ ಕ್ವಾಡ್ ಶೃಂಗಸಭೆಯಲ್ಲಿ ಚರ್ಚೆಯಾಗುವ ಜಾಗತಿಕ ವಿಷಯಗಳೇನು?

|
Google Oneindia Kannada News

ಟೋಕಿಯೋ, ಮೇ 24: ಟೋಕಿಯೋದಲ್ಲಿ ನಡೆಯುತ್ತಿರುವ ನಾಲ್ಕನೇ ಕ್ವಾಡ್ ಶೃಂಗಸಭೆಯಲ್ಲಿ ಇಂಡೋ-ಫೆಸಿಫಿಕ್ ವಲಯದ ಶಾಂತಿ-ಸುವ್ಯವಸ್ಥೆ, ಸುಸ್ಥಿರ ಅಭಿವೃದ್ಧಿ ಸೇರಿದಂತೆ ಜಾಗತಿಕ ವಿಷಯಗಳ ಬಗ್ಗೆ ನಾಯಕರು ಮಂಗಳವಾರ ಚರ್ಚೆ ನಡೆಸಲಿದ್ದಾರೆ.

ಇಂಡೋ-ಪೆಸಿಫಿಕ್‌ ಆರ್ಥಿಕ ಚೌಕಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಈ ವೇಳೆ ಜಂಟಿ ಹೇಳಿಕೆ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಮತ್ತು ಜಪಾನ್‌ ಪ್ರಧಾನಿ ಫುಮಿಯೊ ಕಿಶಿಡಾ ಮತ್ತು ಇತರ ಪಾಲುದಾರ ರಾಷ್ಟ್ರಗಳಾದ ಆಸ್ಪ್ರೇಲಿಯಾ, ಬ್ರೂನೈ, ಇಂಡೋನೇಷ್ಯಾ, ಕೊರಿಯಾ ಗಣರಾಜ್ಯ, ಮಲೇಷ್ಯಾ, ನ್ಯೂಜಿಲ್ಯಾಂಡ್‌, ಫಿಲಿಪೈನ್ಸ್, ಸಿಂಗಾಪುರ, ಥಾಯ್ಲೆಂಡ್ ಮತ್ತು ವಿಯೆಟ್ನಾಂನ ನಾಯಕರು ಉಪಸ್ಥಿತಿ ವಹಿಸಿದ್ದರು.

ತೈವಾನ್ ತಂಟೆಗೆ ಬಂದರೆ ಹುಷಾರ್: ಚೀನಾಗೆ ಬೈಡನ್ ಎಚ್ಚರಿಕೆ ತೈವಾನ್ ತಂಟೆಗೆ ಬಂದರೆ ಹುಷಾರ್: ಚೀನಾಗೆ ಬೈಡನ್ ಎಚ್ಚರಿಕೆ

ಇಂಡೋ-ಪೆಸಿಫಿಕ್‌ ವಲಯದಲ್ಲಿಸ್ಥಿತಿಸ್ಥಾಪಕತ್ವ, ಸುಸ್ಥಿರತೆ, ಒಳಗೊಳ್ಳುವಿಕೆ, ಆರ್ಥಿಕ ಬೆಳವಣಿಗೆ, ನ್ಯಾಯಸಮ್ಮತತೆ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಭಾಗವಹಿಸುವ ದೇಶಗಳ ನಡುವೆ ಆರ್ಥಿಕ ಪಾಲುದಾರಿಕೆಯನ್ನು ಬಲಪಡಿಸಲು ಐ.ಪಿ.ಇ.ಎಫ್‌ ಪ್ರಯತ್ನಿಸುತ್ತದೆ.

ಐ.ಪಿ.ಇ.ಎಫ್ ಘೋಷಣೆಯ ಮುಖ್ಯ ಉದ್ದೇಶ

ಐ.ಪಿ.ಇ.ಎಫ್ ಘೋಷಣೆಯ ಮುಖ್ಯ ಉದ್ದೇಶ

ಐ.ಪಿ.ಇ.ಎಫ್ ಘೋಷಣೆಯು ಇಂಡೋ-ಪೆಸಿಫಿಕ್‌ ಪ್ರದೇಶವನ್ನು ಜಾಗತಿಕ ಆರ್ಥಿಕ ಬೆಳವಣಿಗೆಯ ಎಂಜಿನ್‌ ಆಗಿ ಮಾಡುವ ಸಾಮೂಹಿಕ ಬಯಕೆಯ ಘೋಷಣೆಯಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉದ್ಘಾಟನಾ ಸಮಾರಂಭದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಐತಿಹಾಸಿಕವಾಗಿ ಭಾರತವು ಇಂಡೋ-ಪೆಸಿಫಿಕ್‌ ಪ್ರದೇಶದಲ್ಲಿ ವ್ಯಾಪಾರ ಹರಿವಿನ ಕೇಂದ್ರಬಿಂದುವಾಗಿದ್ದು, ಗುಜರಾತ್‌ನ ಲೋಹ್ತಾಲ್‌ನಲ್ಲಿ ವಿಶ್ವದ ಅತ್ಯಂತ ಹಳೆಯ ವಾಣಿಜ್ಯ ಬಂದರನ್ನು ಹೊಂದಿದೆ. ಇಂಡೋ- ಪೆಸಿಫಿಕ್‌ ವಲಯದ ಆರ್ಥಿಕ ಸವಾಲುಗಳನ್ನು ಎದುರಿಸಲು ಸಾಮಾನ್ಯ ಮತ್ತು ಸೃಜನಶೀಲ ಪರಿಹಾರಗಳನ್ನು ಕಂಡುಹಿಡಿಯಲು ಪ್ರಧಾನಮಂತ್ರಿ ಕರೆ ನೀಡಿದರು.

3ಟಿ ಬಗ್ಗೆ ಒತ್ತಿ ಹೇಳಿದ ಪ್ರಧಾನಿ ನರೇಂದ್ರ ಮೋದಿ

3ಟಿ ಬಗ್ಗೆ ಒತ್ತಿ ಹೇಳಿದ ಪ್ರಧಾನಿ ನರೇಂದ್ರ ಮೋದಿ

ಎಲ್ಲರನ್ನೂ ಒಳಗೊಳ್ಳುವ ಮತ್ತು ಹೊಂದಿಕೊಳ್ಳುವ ಐ.ಪಿ.ಇ.ಎಫ್‌.ಗಾಗಿ ಎಲ್ಲಾ ಇಂಡೋ-ಪೆಸಿಫಿಕ್‌ ರಾಷ್ಟ್ರಗಳೊಂದಿಗೆ ಕೆಲಸ ಮಾಡುವ ಭಾರತದ ಬದ್ಧತೆಯನ್ನು ಅವರು ವ್ಯಕ್ತಪಡಿಸಿದರು. ಸ್ಥಿತಿಸ್ಥಾಪಕ ಪೂರೈಕೆ ಸರಪಳಿಗಳ ಅಡಿಪಾಯವು 3ಟಿ ಗಳಾಗಿರಬೇಕು - ವಿಶ್ವಾಸ, ಪಾರದರ್ಶಕತೆ ಮತ್ತು ಸಮಯೋಚಿತತೆ ಎಂದು ಪ್ರಧಾನಿ ನರೇಂದ್ರ ಮೋದಿ ಒತ್ತಿ ಹೇಳಿದರು.

ನಿರಂತರ ಬೆಳವಣಿಗೆಗೆ ಪಾಲದಾರರೊಂದಿಗೆ ಸಂಪರ್ಕ

ನಿರಂತರ ಬೆಳವಣಿಗೆಗೆ ಪಾಲದಾರರೊಂದಿಗೆ ಸಂಪರ್ಕ

ಭಾರತವು ಮುಕ್ತ ಮತ್ತು ಅಂತರ್ಗತ ಇಂಡೋ-ಪೆಸಿಫಿಕ್‌ ಪ್ರದೇಶಕ್ಕೆ ಬದ್ಧವಾಗಿದೆ. ಪಾಲುದಾರರ ಜೊತೆಗಿನ ಆರ್ಥಿಕ ಸಂಬಂಧವು ನಿರಂತರ ಬೆಳವಣಿಗೆ, ಶಾಂತಿ ಮತ್ತು ಸಮೃದ್ಧಿಗೆ ನಿರ್ಣಾಯಕವಾಗಿದೆ ಎಂದು ನಂಬಿದೆ. ಭಾರತವು ಐ.ಪಿ.ಇ.ಎಫ್‌ ಅಡಿಯಲ್ಲಿಪಾಲುದಾರ ರಾಷ್ಟ್ರಗಳೊಂದಿಗೆ ಸಹಯೋಗ ಹೊಂದಲು ಉತ್ಸುಕವಾಗಿದೆ. ಪ್ರಾದೇಶಿಕ ಆರ್ಥಿಕ ಸಂಪರ್ಕ, ಏಕೀಕರಣ ಮತ್ತು ಈ ವಲಯದಲ್ಲಿವ್ಯಾಪಾರ ಮತ್ತು ಹೂಡಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿಕೆಲಸ ಮಾಡಲು ಬದ್ಧವಾಗಿದೆ ಎಂದರು. ಇಂದಿನ ಉಡಾವಣೆಯೊಂದಿಗೆ, ಪಾಲುದಾರ ರಾಷ್ಟ್ರಗಳು ಆರ್ಥಿಕ ಸಹಕಾರವನ್ನು ಬಲಪಡಿಸುವ ಮತ್ತು ಹಂಚಿಕೆಯ ಗುರಿಗಳನ್ನು ಸಾಧಿಸುವತ್ತ ಗಮನ ಹರಿಸುವ ಚರ್ಚೆಗಳನ್ನು ಪ್ರಾರಂಭಿಸುತ್ತವೆ.

4ನೇ ಶೃಂಗಸಭೆಯಲ್ಲಿ ಚರ್ಚೆ ವಿಷಯ

4ನೇ ಶೃಂಗಸಭೆಯಲ್ಲಿ ಚರ್ಚೆ ವಿಷಯ

ಮೇ 24ರಂದು ಟೋಕಿಯೋದಲ್ಲಿ ನಡೆಯಲಿರುವ 3ನೇ ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಅಮರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಆಸ್ಟ್ರೇಲಿಯಾ ಪ್ರಧಾನಮಂತ್ರಿ ಭಾಗವಹಿಸಲಿದ್ದಾರೆ. 2021ರ ಮಾರ್ಚ್ ನಲ್ಲಿ ಮೊದಲ ವರ್ಚುವಲ್ ಸಭೆ ನಡೆದಿತ್ತು. ಆನಂತರ ಇದೀಗ ಟೋಕಿಯೋದಲ್ಲಿ ನಡೆಯುತ್ತಿರುವುದು ಕ್ವಾಡ್ ನಾಯಕರ 4ನೇ ಸಂವಾದವಾಗಿದೆ. 2021ರ ಸೆಪ್ಟೆಂಬರ್ ನಲ್ಲಿ ವಾಷಿಂಗ್ಟನ್ ಡಿಸಿಯಲ್ಲಿ 2ನೇ ಮುಖಾಮುಖಿ ಶೃಂಗಸಭೆ ಹಾಗೂ 2022ರ ಮಾರ್ಚ್ ನಲ್ಲಿ 3ನೇ ವರ್ಚುವಲ್ ಶೃಂಗಸಭೆ ನಡೆದಿತ್ತು.

ಈ ಬಾರಿ ನಡೆಯುತ್ತಿರುವ 4ನೇ ಕ್ವಾಡ್ ಶೃಂಗಸಭೆ, ಭಾರತ-ಪೆಸಿಫಿಕ್ ಪ್ರದೇಶದಲ್ಲಿನ ಬೆಳವಣಿಗೆಗಳು ಮತ್ತು ಪರಸ್ಪರ ಹಿತಾಸಕ್ತಿಯ ಸಮಕಾಲೀನ ಜಾಗತಿಕ ವಿಷಯಗಳ ಬಗ್ಗೆ ನಾಯಕರ ವಿಚಾರ ವಿನಿಮಯಕ್ಕೆ ಅವಕಾಶ ಒದಗಿಸಲಿದೆ. ನಾಯಕರು ಕ್ವಾಡ್ ಉಪಕ್ರಮಗಳು ಮತ್ತು ಕಾರ್ಯಕಾರಿ ಗುಂಪಿನ ಪ್ರಗತಿಯನ್ನು ಪರಾಮರ್ಶಿಸುವರು, ಸಹಕಾರ ಸಂಬಂಧದ ಹೊಸ ಅವಕಾಶಗಳನ್ನು ಗುರುತಿಸುವುದು ಮತ್ತು ಭವಿಷ್ಯದ ಸಹಭಾಗಿತ್ವಕ್ಕೆ ಕಾರ್ಯತಾಂತ್ರಿಕ ಮಾರ್ಗದರ್ಶನ ಮತ್ತು ದೂರದೃಷ್ಟಿಯನ್ನು ಒದಗಿಸುವರು.

English summary
Quad 4th Summit: Leaders to exchange views on developments in Indo-Pacific, discuss global issues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X