Russia: ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಕದನ ವಿರಾಮ ಘೋಷಿಸಲು ರಷ್ಯಾ ಹಾಕಿದೆ ಖಡಕ್ ರೂಲ್ಸ್!

ರಷ್ಯಾ & ಉಕ್ರೇನ್ ನಡುವೆ ಘನಘೋರ ಯುದ್ಧ ಆರಂಭವಾಗಿ ಈಗಾಗಲೇ ಬರೋಬ್ಬರಿ 3 ವರ್ಷ ಮುಗಿದು ಹೋಗಿದೆ. ಇದೀಗ 4ನೇ ವರ್ಷಕ್ಕೆ ಕಾಲು ಇಟ್ಟಿರುವ ಈ ಯುದ್ಧ ನಿಲ್ಲಿಸೋದಕ್ಕೆ ಅತ್ತ ಅಮೆರಿಕ ಹರಸಾಹಸ ಪಡುತ್ತಾ ಒದ್ದಾಡಿ ಹೋಗಿದೆ. ಮತ್ತೊಂದು ಕಡೆ ಉಕ್ರೇನ್ ತನ್ನ ಹಠ ಬಿಟ್ಟು ಸಂಪೂರ್ಣವಾಗಿ ಶರಣಾಗಲು ಸಿದ್ಧವಿಲ್ಲ. ಇಂತಹ ಸ್ಥಿತಿಯಲ್ಲಿ ರಷ್ಯಾ ಅಧ್ಯಕ್ಷರಿಂದಲೇ ಮಹತ್ವದ ಹೇಳಿಕೆ ಹೊರಬಿದ್ದಿದೆ!

ರಷ್ಯಾ ತನ್ನ ದಾಳಿಯ ತೀವ್ರತೆಯನ್ನು ಹೆಚ್ಚು ಮಾಡಿದಂತೆ ಉಕ್ರೇನ್ ಕೂಡ ಬೆಚ್ಚಿಬಿದ್ದಿದ್ದು ಈಗಾಗಲೇ ಧೂಳಿಪಟವಾಗಿದೆ. ಇಷ್ಟೆಲ್ಲಾ ನಡೆದರೂ ಉಕ್ರೇನ್ ತನ್ನ ರಾಜಧಾನಿ ಕೀವ್ ರಕ್ಷಣೆ ಮಾಡಿಕೊಳ್ಳಲು ಯಶಸ್ವಿಯಾಗಿದ್ದು, ಇದೀಗ ರಷ್ಯಾ ಸೇನೆ ಅಲ್ಲಿಗೂ ನುಗ್ಗುತ್ತಿದೆ. ಈ ರೀತಿಯ ವಾತಾವರಣ ಸೃಷ್ಟಿಯಾಗಿರುವ ಸಮಯದಲ್ಲೇ ಆದಷ್ಟು ಬೇಗ ಅಮೆರಿಕ ನೇತೃತ್ವದಲ್ಲಿ ಈ ಯುದ್ಧ ನಿಲ್ಲಿಸಬೇಕು ಎಂಬ ಪ್ರಯತ್ನ ನಡೆಯುತ್ತಿದೆ. ಇಂತಹ ಸಮಯದಲ್ಲೇ ವ್ಲಾದಿಮಿರ್ ಪುಟಿನ್ ಭಾರಿ ಕಠಿಣ ಶರತ್ತು ಒಂದನ್ನು ವಿಧಿಸಿದ್ದಾರೆ.

Putin Outlines Key Conditions for Ukraine Ceasefire

ಉಕ್ರೇನ್‌ಗೆ ರೂಲ್ಸ್ ಹಾಕಿದ ಪುಟಿನ್!

ರಷ್ಯಾ ಇದೀಗ ಕದನ ವಿರಾಮಕ್ಕೆ ಒಪ್ಪಿಕೊಳ್ಳುವ ಅಗತ್ಯತೆ ಇಲ್ಲ, ಯಾಕಂದ್ರೆ ರಷ್ಯಾ ಸೇನೆಯು ಈಗಾಗಲೇ ಉಕ್ರೇನ್‌ನ ಬಹುತೇಕ ಪ್ರದೇಶವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಇಂತಹ ಸಮಯದಲ್ಲಿ ಕದನ ವಿರಾಮ ಘೋಷಣೆ ಮಾಡಿಕೊಂಡು ಬದುಕುವ ಅವಶ್ಯಕತೆ ಇಲ್ಲವಾಗಿದೆ. ಇದೇ ಕಾರಣಕ್ಕೆ ಯುದ್ಧ ಮುಂದುವರಿಸಿ, ಸಂಪೂರ್ಣ ಉಕ್ರೇನ್ ದೇಶವನ್ನು ತನ್ನ ವಶಕ್ಕೇ ಪಡೆದುಕೊಳ್ಳುವ ಪ್ಲಾನ್ ರಷ್ಯಾ ಸೇನೆಯ ಅಧಿಕಾರಿಗಳದ್ದು. ಅದರೆ ಇಂತಹ ಸಮಯದಲ್ಲೇ ರಷ್ಯಾ ಅಧ್ಯಕ್ಷ ಪುಟಿನ್ ಮಹತ್ವದ ಮಾಹಿತಿ ನೀಡಿದ್ದಾರೆ. ಅಲ್ಲದೆ ಕದನ ವಿರಾಮಕ್ಕೂ ಸಿದ್ಧ ಎಂದಿದ್ದಾರೆ.

30 ದಿನಗಳ ತಾತ್ಕಾಲಿಕ ಕದನ ವಿರಾಮ?

ಉಕ್ರೇನ್ ವಿರುದ್ಧ ಮೊದಲಿಗೆ 30 ದಿನಗಳ ತಾತ್ಕಾಲಿಕ ಕದನ ವಿರಾಮ ಘೋಷಣೆ ಆಗಲಿದ್ದು, ಆ ನಂತರ ಪೂರ್ಣ ಪ್ರಮಾಣದ ಕದನ ವಿರಾಮ ಘೋಷಣೆ ಆಗಲಿದೆ. ಹೀಗಿದ್ದಾಗ ರಷ್ಯಾದ ಅಧ್ಯಕ್ಷರು ಹಲವು ರೂಲ್ಸ್ ಹಾಕಿದ್ದು, ಈ ಪೈಕಿ ರಷ್ಯಾ ಸೇನೆ ಉಕ್ರೇನ್ ಕೈಯಿಂದ ಕಿತ್ತುಕೊಂಡ ಪ್ರದೇಶಗಳನ್ನು ವಾಪಸ್ ಕೊಡುವುದಿಲ್ಲ ಎಂದು ಪಟ್ಟು ಹಿಡಿಯಲಾಗಿದೆ. ಹಾಗೇ ಪ್ರಮುಖ ಬೆಳವಣಿಗೆ ಒಂದರಲ್ಲಿ ಅಮೆರಿಕ ಕೊಡುತ್ತಿದ್ದ ಬೆಂಬಲ ಕೂಡ ನಿಂತು ಹೋಗಿದ್ದು, ಉಕ್ರೇನ್ ಸೇನೆ ನರಳುವ ಸ್ಥಿತಿ ನಿರ್ಮಾಣವಾಗಿದೆ.

ಒಟ್ನಲ್ಲಿ ರಷ್ಯಾ & ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧಕ್ಕೆ ಇದೀಗ ಒಂದು ಅಂತ್ಯವನ್ನ ಕಾಣಿಸಬೇಕಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಈ ತಿಕ್ಕಾಟ ಇನ್ನಷ್ಟು ಹೆಚ್ಚಾಗಲಿದ್ದು, ಜಾಗತಿಕವಾಗಿ ಇದರ ಪರಿಣಾಮ ಕೈಮೀರಿ ಹೋಗುವ ಭಯ ಕೂಡ ಆವರಿಸಿದೆ. ಪ್ರಮುಖ ವಿಚಾರ ಏನೆಂದರೆ ಯುರೋಪ್ ದೇಶಗಳು ಈ ಯುದ್ಧದ ಪರಿಣಾಮ ನರಳಾಡುತ್ತಿವೆ. ಇದೇ ಕಾರಣಕ್ಕೆ ಯುದ್ಧ ನಿಲ್ಲಿಸಲೇಬೇಕು ಎಂಬ ನಿರ್ಧಾರಕ್ಕೆ ಅಮೆರಿಕ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+