ಪುಲ್ವಾಮಾ ದಾಳಿ: ಜೈಷ್ ಕೇಂದ್ರ ಕಚೇರಿಯನ್ನು ತನ್ನ ಸುಪರ್ದಿಗೆ ಪಡೆದ ಪಾಕ್

ಲಾಹೋರ್, ಫೆಬ್ರವರಿ 23: ಪುಲ್ವಾಮಾ ದಾಳಿಯ ನಂತರ ಹೆಚ್ಚಿದ ಜಾಗತಿಕ ಒತ್ತಡಕ್ಕೆ ಮಣಿದ ಪಾಕಿಸ್ತಾನ ಲಾಹೋರ್ ನಲ್ಲಿರುವ ಜೈಷ್ ಇ ಮೊಹಮ್ಮದ್ ಕೇಂದ್ರ ಕಚೇರಿಯನ್ನು ತನ್ನ ಸುಪರ್ದಿಗೆ ಪಡೆದುಕೊಂಡಿದೆ.

ಈ ಮೂಲಕ ಜೈಷ್ ಸಂಘಟನೆ ತನ್ನದೇ ಕೂಸು ಎಂಬುದನ್ನೂ ಅದು ಒಪ್ಪಿಕೊಂಡಂತಾಗಿದೆ. ಇತ್ತೀಚೆಗಷ್ಟೇ ವಿಶ್ವಸಂಸ್ಥೆಯೂ ಪುಲ್ವಾಮಾ ಘಟನೆಯನ್ನು ಕಟು ಶಬ್ದಗಳಿಂದ ನಿಂದಿಸಿತ್ತು. ಜೈಷ್ ಸಂಘಟನೆ ಮಾಡಿದ ಈ ಕೃತ್ಯವನ್ನು ಅತ್ಯಂತ ಹೀನಾಯ ಕೃತ್ಯ ಎಂದಿತ್ತು. ಪಾಕಿಸ್ತಾನದ ವಿರುದ್ಧ ವಿಶ್ವದ ಹಲವು ರಾಷ್ಟ್ರಗಳು ತಿರುಗಿಬಿದ್ದ ಸೂಚನೆ ಸಿಗುತ್ತಿದ್ದಂತೆಯೇ, ಆತಂಕಗೊಂಡ ಪಾಕಿಸ್ತಾನ ಜೈಷ್ ಕೇಂದ್ರ ಕಚೇರಿಯನ್ನು ತನ್ನ ಸುಪರ್ದಿಗೆ ಪಡೆದುಕೊಂಡಿದೆ.

ಈ ಮೂಲಕ ಉಗ್ರಸಂಘಟನೆಯನ್ನು ತಾನೇ ನೀರೆರೆದು ಪೋಷಿಸುತ್ತಿರುವುದನ್ನೂ ಪರೋಕ್ಷವಾಗಿ ಪಾಕಿಸ್ತಾನ ಒಪ್ಪಿಕೊಂಡಂತಾಗಿದೆ.

ಪಾಕ್ ವಲಯದಲ್ಲಿ ಭೀತಿ

ಪಾಕ್ ವಲಯದಲ್ಲಿ ಭೀತಿ

ಇಡೀ ವಿಶ್ವವೂ ತನ್ನ ವಿರುದ್ಧ ತಿರುಗುವ ಸಾಧ್ಯತೆ ಇರುವುದು ತಿಳಿಯುತ್ತಿದ್ದಂತೆಯೇ ಪಾಕಿಸ್ತಾನ ಆತಂಕದಲ್ಲಿದ್ದಂತಿದೆ. ಇಷ್ಟು ದಿನ, 'ಪುಲ್ವಾಮಾ ದಾಳಿಯಲ್ಲಿ ಪಾಕ್ ಕೈವಾಡವಿದೆ ಎಂಬುದಕ್ಕೆ ಸಾಕ್ಷಿ ನೀಡಿ' ಎನ್ನುತ್ತಿದ್ದ ಪಾಕ್ ಇದೀಗ ಅದರ ಬಗ್ಗೆ ಸೊಲ್ಲೆತ್ತದೆ, ತಾನು ಸಾಚಾ ಎಂದು ತೋರಿಸಲು ಏನೆಲ್ಲ ಮಾಡಬೇಕೋ, ಮಾಡಲು ಪ್ರಯತ್ನಿಸುತ್ತಿದೆ.

ಉಗ್ರಸಂಘಟನೆಗೆ ನಿಷೇಧ

ಉಗ್ರಸಂಘಟನೆಗೆ ನಿಷೇಧ

2008ರ ಮುಂಬೈ ಮೇಲಿನ ಭಯೊತ್ಪಾದನಾ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ನೇತೃತ್ವದ ಜಮಾತ್-ಉದ್-ದವಾ ಹಾಗೂ ಅದರ ದತ್ತಿ ಸಂಸ್ಥೆಯಾದ ಫಲಾ-ಇ-ಇನ್ಸಾನಿಯತ್ ಫೌಂಡೇಷನ್ ನನ್ನು ಇತ್ತೀಚೆಗಷ್ಟೇ ಪಾಕಿಸ್ತಾನ ನಿಷೇಧಿಸಿತ್ತು. ಈ ಮೂಲಕ ತಾನು ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದಿಲ್ಲ ಎಂದಿತ್ತು.

ಭಾರತದ ಬೆಂಬಲಕ್ಕೆ ನಿಂತ ವಿಶ್ವ

ಭಾರತದ ಬೆಂಬಲಕ್ಕೆ ನಿಂತ ವಿಶ್ವ

ಪುಲ್ವಾಮಾ ಘಟನೆ ನಂತರ ಅಮೆರಿಕ, ಬಾಂಗ್ಲಾದೇಶ, ಅಫಘಾನಿಸ್ತಾನ, ರಷ್ಯಾ, ಫ್ರಾನ್ಸ್, ಮಾಲ್ಡೀವ್ಸ್, ಥೈಲ್ಯಾಂಡ್, ಶ್ರೀಲಂಕಾ, ಇಸ್ರೇಲ್ ದೇಶಗಳು ಈ ಘಟನೆಯನ್ನು ಕಟು ಶಬ್ದಗಳಿಂದ ಟೀಕಿಸಿ, ಭಯೋತ್ಪಾದನೆಯ ದಮನ ಈ ಹೊತ್ತಿನ ಅಗತ್ಯ ಎಂದಿದ್ದವು. ಜೊತೆಗೆ ಆ ನಿಟ್ಟಿನಲ್ಲಿ ನಾವು ಭಾರತದ ಪರ ಇದ್ದೇವೆ ಎಂದು ಸಹ ಹೇಳಿದ್ದವು.

ಪಾಕಿಸ್ತಾನದ ಕೈವಾಡ

ಪಾಕಿಸ್ತಾನದ ಕೈವಾಡ

ಈಗಾಗಲೇ ಭಾರತದ ವಿದೇಶಾಂಗ ಸಚಿವಾಲಯ ಪುಲ್ವಾಮಾ ಉಗ್ರದಾಳಿಯಲ್ಲಿ ಪಾಕಿಸ್ತಾನ ಕೈವಾಡವಿದೆ ಎಂದು 30 ಕ್ಕೂ ಹೆಚ್ಚು ದೇಶಗಳಿಗೆ ವಿವರಿಸಿದೆ. ವಿಶ್ವಸಂಸ್ಥೆಯ ಶಾಶ್ವತ ಮತ್ತು ಅರೆಕಾಲಿಕ ಸದಸ್ಯರಿಗೂ ವಿವರಣೆ ನೀಡಿದೆ. ಪಾಕ್ ಮೂಲದ ಜೈಷ್ ಇ ಮೊಹಮ್ಮದ್ ಸಂಘಟನೆಯ ಕೈವಾಡ ಈ ದಾಳಿಯಲ್ಲಿರುವುದರಿಂದ ಭಾರತದ ವಾದದಲ್ಲಿ ಹುರುಳಿದೆ ಎಂದು ವಿಶ್ವವೂ ನಂಬಿದೆ. ವಿಶ್ವಸಂಸ್ಥೆಯೂ ಜೈಷ್ ಗೆ ತಪರಾಕಿ ನೀಡುವ ಮೂಲಕ ಪರೋಕ್ಷವಾಗಿ ಪಾಕಿಸ್ತಾನಕ್ಕೂ ಮುಖಭಂಗವನ್ನುಂಟು ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+