ಪುಲ್ವಾಮಾ ದಾಳಿ ಕುರಿತು ಸತ್ಯ ಬಾಯ್ಬಿಟ್ಟ ಮಂತ್ರಿಗೆ ಪಾಕ್ ಪ್ರಧಾನಿ ಸಮನ್ಸ್
ಲಾಹೋರ್, ನವೆಂಬರ್ 03:ಪಾಕಿಸ್ತಾನ ನ್ಯಾಷನಲ್ ಅಸ್ಸೆಂಬ್ಲಿಯಲ್ಲಿ ಪುಲ್ವಾಮಾ ದಾಳಿ ಕುರಿತು ರಾಜಾರೋಷವಾಗಿ ಮಾತನಾಡಿದ್ದ ಸಚಿವರ ವಿರುದ್ಧ ಪಾಕಿಸ್ತಾನ ಪ್ರಧಾನಿ ಸಮನ್ಸ್ ಜಾರಿ ಮಾಡಿದ್ದಾರೆ.
ಹಿಂದೂಸ್ಥಾನ ನೆಲಕ್ಕೆ ನುಗ್ಗಿ ದಾಳಿ ಮಾಡುವ ಛಾತಿ ಇಮ್ರಾನ್ ಖಾನ್ ಆಡಳಿತದ ಯಶಸ್ಸು ಎಂದು ಪಾಕಿಸ್ತಾನ ಸಚಿವ ಫವಾದ್ ಚೌಧರಿ ಹೇಳಿದ್ದರು.
ಚೌಧರಿ ಅಧಿ ಕೃತ ಹೇಳಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಕಳ್ಳಾಟವನ್ನು ಬಯಲು ಮಾಡಿತ್ತು.

ಪ್ರಧಾನಿ ಇಮ್ರಾನ್ ಖಾನ್ಗೆ ತೀವ್ರ ಸಂಕಷ್ಟ ತಂದೊಡ್ಡಿತ್ತು. ಇದೀಗ ಪಾಕಿಸ್ತಾನವನ್ನು ಇಕ್ಕಟ್ಟಿಗೆ ಸಿಲುಕಿಸಿದ ಫಹಾದ್ ಚೌದರಿ ವಿರುದ್ಧ ಪಾಕ್ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ.
ಚೌಧರಿ ಹೇಳಿಕೆ ನೀಡಿ ಸ್ವಲ್ಪ ಹೊತ್ತಿನಲ್ಲೇ ತಾನು ಆ ರೀತಿ ಹೇಳಿಕೆ ನೀಡಿಲ್ಲ, ಹೇಳಿಕೆಯನ್ನು ತಿರುಚಲಾಗಿದೆ ಎಂದು ಹೇಳಿದ್ದರು.
ಪುಲ್ವಾಮಾ ದಾಳಿ ಬಳಿಕ ಭಾರತ ಪಾಕಿಸ್ತಾನದ ಮೇಲೆ ಆಕ್ರಮಣ ಮಾಡಲು ಮುಂದಾದಾಗ ಪಾಕಿಸ್ತಾನ ಹಿಂದೂಸ್ತಾನದೊಳಗೆ ನುಗ್ಗಿ ದಾಳಿ ಮಾಡಿದೆ.ಗಡಿ ರೇಖೆ ದಾಟಿದ ಭಾರತದ ವಾಯುಪಡೆಯನ್ನು ಪಾಕಿಸ್ತಾನ ಹೊಡೆದುರುಳಿಸಿದೆ ಎಂದು ನಾನು ಹೇಳಿದ್ದೆ ಎಂದು ಫಹಾದ್ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಕುತಂತ್ರ ಮತ್ತು ಬುದ್ಧಿಮತ್ತೆ ಬಯಲಾಗುತ್ತಿದ್ದಂತೆ ಪ್ರಧಾನಿ ಇಮ್ರಾನ್ ಖಾನ್, ಕೋಪಗೊಂಡಿದ್ದಾರೆ. ಹೇಳಿಕೆಯನ್ನು ವಾಪಸ್ ಪಡೆಯುವಂತೆ ಒತ್ತಡ ಹಾಕಿದ್ದಾರೆ.
ಇಷ್ಟೇ ಅಲ್ಲ ಪುಲ್ವಾಮಾ ದಾಳಿ, ಭಾರತ ಹಾಗೂ ಪಾಕಿಸ್ತಾನ ಗಡಿ ಸಮಸ್ಯೆಗಳ ಕುರಿತು ಯಾವುದೇ ಹೇಳಿಕೆ ನೀಡದಂತೆ ಸೂಚಿಸಿದ್ದಾರೆ.
-
US-Iran Talks: ಪಾಕ್ ನೆಲದಲ್ಲಿ 21 ಗಂಟೆಗಳ ಸಂಧಾನ ಮಾತುಕತೆ ವಿಫಲ: ಹೆಚ್ಚಿದ ಯುದ್ಧ ಭೀತಿ- ಪ್ರಮುಖಾಂಶಗಳು -
School Property: ಸರ್ಕಾರಿ ಶಾಲೆ 12 ವರ್ಷಗಳಿಂದ ಒಂದೇ ಭೂಮಿಯಲ್ಲಿದ್ದರೆ ಅದು ರಾಜ್ಯ ಸರ್ಕಾರದ ಆಸ್ತಿ: ಏನಿದು ಹೊಸ ಕಾನೂನು? -
Ankita Jayaram: ನಟನೆಯ ನಡುವೆಯೂ ದ್ವಿತೀಯ ಪಿಯುಸಿಯಲ್ಲಿ ಕರ್ಣ ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ಜಯರಾಮ್ ಅಮೋಘ ಸಾಧನೆ -
Karnataka Weather: ಕರ್ನಾಟಕದ 4 ಜಿಲ್ಲೆಗಳಲ್ಲಿ ಮಳೆ - ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು, ಕರ್ನಾಟಕದ ಹವಾಮಾನ ವರದಿ -
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ











Click it and Unblock the Notifications