ಅಮೆರಿಕಾದಲ್ಲಿ ರ್ಯಾಲಿಯಲ್ಲಿ ರಕ್ತಪಾತ, ಬಿಳಿಯರ ಮೇಲೆ ಹರಿದ ಕಾರು
ವರ್ಜೀನಿಯಾ, ಆಗಸ್ಟ್ 13: ಅಮೆರಿಕಾದ ವರ್ಜೀನಿಯಾದಲ್ಲಿ ಶನಿವಾರ ನಡೆದ ಬಿಳಿಯರ ರ್ಯಾಲಿ ಹಿಂಸೆಗೆ ತಿರುಗಿ ಹಲವರು ಗಾಯಗೊಂಡು, ಓರ್ವ ಸಾವನ್ನಪ್ಪಿದ ಘಟನೆ ನಡೆದಿದೆ.
ವರ್ಜೀನಿಯಾದ ಶೆರ್ಲೊಟ್ಸೆವಿಲ್ಲಾದಲ್ಲಿ ಬಿಳಿಯರು ನಡೆಸುತ್ತಿದ್ದ ಜನಾಂಗೀಯವಾದ ವಿರೋಧಿ ಮತ್ತು ಬಲಪಂಥೀಯ ವಿರೋಧಿ ಪ್ರತಿಭಟನಾಕಾರರ ಮೇಲೆ ವಿರೋಧಿ ಗುಂಪು ಮುಗಿಬಿದ್ದಿದೆ. ಅಷ್ಟೇ ಅಲ್ಲದೆ ಪ್ರತಿಭಟನಾಕಾರರ ಮೇಲೆ ವಿರೋಧಿ ಗುಂಪು ಕಾರು ಹರಿಸಿದೆ.

ಕಾರು ಹರಿಸಿ, ಪೆಪ್ಪರ್ ಸ್ಪ್ರೇ, ಕೋಲು-ಬಡಿಗೆಗಳಿಂದ ದಾಳಿ ನಡೆಸಿದ ಪರಿಣಾಮ ಓರ್ವ ಸಾವನ್ನಪ್ಪಿ 35ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
CPR being done on someone after Antifa caused a tragic accident in #Charlottesville #Virginia ....#ANTIFApic.twitter.com/JMpuBlrLZs
— 💎STOCK MONSTER💎 (@StockMonsterUSA) August 12, 2017
ಕಾರು ಹರಿಸಿದ 20 ವರ್ಷ ವಯಸ್ಸಿನ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ನಂತರ ಪೊಲೀಸರು ಲಾಠಿ ಚಾರ್ಚ್ ಮಾಡಿ ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಂಡಿದ್ದು, ಹಿಂಸಾತ್ಮಕ ಪ್ರತಿಭಟನೆ ಹಿನ್ನಲೆಯಲ್ಲಿ ಶೆರ್ಲೊಟ್ಸೆವಿಲ್ಲಾದಲ್ಲಿ ಕರ್ಪ್ಯೂ ಹೇರಲಾಗಿದೆ
A drone captured the terrifying moment a car plowed into the crowd in Charlottesville, Virginia pic.twitter.com/9YbX73bhCS
— NBC News (@NBCNews) August 13, 2017
'ಯುನೈಟ್ ದಿ ರೈಟ್' ಹೆಸರಿನ ಈ ರ್ಯಾಲಿಯನ್ನು ಮಾಜಿ ಪತ್ರಕರ್ತ ಜೇಸನ್ ಕೆಸ್ಲೆರ್ ಹಮ್ಮಿಕೊಂಡಿದ್ದರು.












Click it and Unblock the Notifications