‘ನಮ್ಮ ನಾಯಕಿಯನ್ನ ಬಿಟ್ಟು ಬಿಡಿ’: ಕಾದ ಕಬ್ಬಿಣವಾಗಿದೆ ಮ್ಯಾನ್ಮಾರ್‌..!

ಮುಖಕ್ಕೆ ಮಾಸ್ಕ್, ಕೈಯಲ್ಲಿ ಸೂಕಿ ಪರ ಘೋಷಣೆ, ಮಿಲಿಟರಿ ವಿರುದ್ಧ ತೀವ್ರ ಆಕ್ರೋಶ. ಅಂದಹಾಗೆ ಇದು ಸೇನಾ ಕ್ಷಿಪ್ರ ಕ್ರಾಂತಿಯನ್ನು ಕಂಡಿರುವ ಮ್ಯಾನ್ಮಾರ್‌ನ ಅತಿದೊಡ್ಡ ನಗರ ಯಾಂಗೊನ್ ಸ್ಥಿತಿ. ಸೇನಾ ಕ್ರಾಂತಿ ಸೆಲೆಯಲ್ಲಿ ಸಿಲುಕಿ ಮ್ಯಾನ್ಮಾರ್‌ ತತ್ತರಿಸಿದ್ದರೆ. ಮಿಲಿಟರಿ ಬಲದೆದುರು ಮಂಡಿಯೂರಿದ ಆಂಗ್ ಸಾನ್ ಸೂಕಿ ಮನೆಯಲ್ಲೇ ಜೈಲು ಕಾಣುತ್ತಿದ್ದಾರೆ.

ಈ ನಡುವೆ ಸೇನಾ ಕ್ರಾಂತಿಯ ಪರ ಹಾಗೂ ವಿರೋಧದ ಹೋರಾಟಗಳು ಮ್ಯಾನ್ಮಾರ್‌ನ ತತ್ತರಿಸುವಂತೆ ಮಾಡಿವೆ. ಈಗಾಗಲೇ ಲಕ್ಷಾಂತರ ಜನ ಮಿಲಿಟರಿ ಆಡಳಿತವನ್ನು ಬೆಂಬಲಿಸಿದ್ದು, ಮತ್ತೊಂದಿಷ್ಟು ಲಕ್ಷ ಮ್ಯಾನ್ಮಾರ್‌ ಪ್ರಜೆಗಳು ಮಿಲಿಟರಿ ಆಡಳಿತದ ವಿರುದ್ಧ ಸಮರ ಸಾರಿದ್ದಾರೆ. ಬೀದಿಗಿಳಿದು ಹೋರಾಟ ಆರಂಭಿಸಿದ್ದಾರೆ. ಹೀಗೆ ಮ್ಯಾನ್ಮಾರ್‌ ಸೇನೆ ವಿರುದ್ಧ ತೊಡೆ ತಟ್ಟಿದವರಲ್ಲಿ ಯುವಕರ ಸಂಖ್ಯೆಯೇ ಹೆಚ್ಚಾಗಿದೆ.

ಯಾಂಗೊನ್ ನಗರದಲ್ಲಿ ಆಂಗ್ ಸಾನ್ ಸೂಕಿ ಪರ ಘೋಷಣಾ ಪತ್ರ ಹಿಡಿದು, ಸಾವಿರಾರು ಜನ ಬೀದಿಗಿಳಿದಿದ್ದಾರೆ. ಹೀಗಾಗಿ ಮ್ಯಾನ್ಮಾರ್‌ ಸ್ಥಿತಿ ಮತ್ತಷ್ಟು ಸೂಕ್ಷ್ಮವಾಗಿದೆ. ಹೋರಾಟಗಾರರನ್ನು ನಿಯಂತ್ರಿಸಲು ಸೈನಿಕರು ಹಾಗೂ ಸ್ಥಳೀಯ ಪೊಲೀಸರು ಪರದಾಡುತ್ತಿದ್ದಾರೆ.

ಇಂಟರ್ನೆಟ್ ಇಲ್ಲದೆ ಪರದಾಟ..!

ಇಂಟರ್ನೆಟ್ ಇಲ್ಲದೆ ಪರದಾಟ..!

ಸೇನಾ ಕ್ರಾಂತಿಯ ವಿರುದ್ಧ ಮ್ಯಾನ್ಮಾರ್‌ನಲ್ಲಿ ಹೋರಾಟ ತೀವ್ರಗೊಳ್ಳುತ್ತಿದ್ದು, ದೇಶದ ಇತರ ಭಾಗಗಳಿಗೆ ತೀವ್ರ ಸ್ವರೂಪದಲ್ಲಿ ಹರಡುತ್ತಿದೆ. ಆದರೆ ಇದನ್ನು ತಡೆಯಲು ಮ್ಯಾನ್ಮಾರ್‌ ಮಿಲಿಟರಿ ತನ್ನ ಬಲವನ್ನು ಬಳಸುತ್ತಿದೆ. ಈಗಾಗಲೇ ಮ್ಯಾನ್ಮಾರ್‌ನಲ್ಲಿ ಇಂಟರ್ನೆಟ್ ಕಡಿತವಾಗಿದ್ದು, ಜನರನ್ನು ಅತ್ತಿಂದ ಇತ್ತ ಕದಡಲು ಬಿಡುತ್ತಿಲ್ಲ. ಈ ನಡುವೆ ಜನ ಬೀದಿಗಿಳಿದು ಮಿಲಿಟರಿ ಆಡಳಿತದ ವಿರುದ್ಧ ಹೋರಾಟ ತೀವ್ರಗೊಳಸಿದ್ದಾರೆ. ಹೀಗೆ ಮ್ಯಾನ್ಮಾರ್‌ ಬೂದಿ ಮುಚ್ಚಿದ ಕೆಂಡವಾಗಿದ್ದು, ಹಿಂಸಾಚಾರ ಸ್ಫೋಟಗೊಳ್ಳುವ ಆತಂಕವೂ ಎದುರಾಗಿದೆ. ಆದರೆ ಹೊರ ಜಗತ್ತಿಗೆ ಮ್ಯಾನ್ಮಾರ್‌ನಲ್ಲಿ ಏನಾಗುತ್ತಿದೆ ಎಂಬ ಸತ್ಯ ಸರಿಯಾಗಿ ತಿಳಿಯದಂತೆ ಮಾಡಿದೆ ಅಲ್ಲಿನ ಮಿಲಿಟರಿ.

ಮಿಲಿಟರಿ ಆಡಳಿತ ಶುರು..!

ಮಿಲಿಟರಿ ಆಡಳಿತ ಶುರು..!

ಮ್ಯಾನ್ಮಾರ್‌ನಲ್ಲಿ 2020ರಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ನಡೆದಿದ್ದರೂ ಅದನ್ನ ತಡೆಯಲು ಚುನಾವಣಾ ಆಯೋಗ ವಿಫಲವಾಗಿದೆ ಎಂದು ಆರೋಪಿಸಲಾಗಿತ್ತು. ಈ ಕಾರಣಕ್ಕಾಗಿ ಮ್ಯಾನ್ಮಾರ್‌ ಮಿಲಿಟರಿ ತುರ್ತು ಪರಿಸ್ಥಿತಿ ಹೇರಿದೆ. ದೇಶದಲ್ಲಿ ಮಿಲಿಟರಿ 1 ವರ್ಷದವರೆಗೂ ತುರ್ತು ಪರಿಸ್ಥಿತಿ ಘೋಷಿಸಿ ಹಂಗಾಮಿ ಅಧ್ಯಕ್ಷರನ್ನೂ ನೇಮಿಸಿದೆ. ಮತ್ತೊಂದ್ಕಡೆ ದೇಶದ ಸಂವಹನ ಸಾಧನಗಳನ್ನೂ ಕಂಟ್ರೋಲ್‌ಗೆ ತೆಗೆದುಕೊಂಡಿದೆ ಸೇನೆ. ಫೋನ್ ಕಾಲ್ ಹೋಗುತ್ತಿಲ್ಲ, ಇಂಟರ್ನೆಟ್ ಸಂಪರ್ಕ ಕೂಡ ಬಂದ್ ಆಗಿದೆ. ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಪರಿಸ್ಥಿತಿ ಅತಿಸೂಕ್ಷ್ಮವಾಗಿದೆ.

 ‘ಡ್ರ್ಯಾಗನ್ ಚೀನಿ’ ಗ್ಯಾಂಗ್ ಕೈವಾಡ..?

‘ಡ್ರ್ಯಾಗನ್ ಚೀನಿ’ ಗ್ಯಾಂಗ್ ಕೈವಾಡ..?

ಇಂತಹದ್ದೊಂದು ಅನುಮಾನ ಎಲ್ಲರನ್ನೂ ಕಾಡುತ್ತಿದೆ. ಏಕೆಂದರೆ ಚೀನಾ ಜೊತೆಗೆ ಮ್ಯಾನ್ಮಾರ್‌ ಸುಮಾರು 2 ಸಾವಿರ ಕಿಲೋ ಮೀಟರ್‌ಗೂ ಹೆಚ್ಚು ವಿಸ್ತಿರ್ಣದ ಗಡಿ ಹಂಚಿಕೊಂಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಚೀನಾ ತನ್ನ ಅಕ್ಕಪಕ್ಕದ ದೇಶಗಳ ಮೇಲೆ ನಿಯಂತ್ರಣ ಸಾಧಿಸಲು ಕುತಂತ್ರ ಬುದ್ಧಿ ಬಳಸುತ್ತಿದೆ. ನೇಪಾಳದಲ್ಲೂ ಹೀಗೆ ಮಾಡಿದೆ ಚೀನಾ. ಇದೀಗ ಮ್ಯಾನ್ಮಾರ್‌ ಸೇನಾ ಕ್ರಾಂತಿಗೂ ಚೀನಾ ಬೆಂಬಲ ಇರಬಹುದು ಎಂಬ ಅನುಮಾನ ಎಲ್ಲರನ್ನೂ ಕಾಡುತ್ತಿದೆ. ಏಕೆಂದರೆ ಮ್ಯಾನ್ಮಾರ್‌ ಪ್ರಜಾಪ್ರಭುತ್ವ ತತ್ವ ಅಳವಡಿಸಿಕೊಂಡಿರುವ ದೇಶ. ಆದರೆ ಮಾವೋವಾದಿ ಕಮ್ಯೂನಿಸ್ಟ್ ಸಿದ್ಧಾಂತದ ಚೀನಾಗೆ ಇದು ಬಿಲ್‌ಕುಲ್ ಇಷ್ಟವಿಲ್ಲ.

ಚುನಾವಣೆಯಲ್ಲಿ ಅಕ್ರಮ ನಡೆದಿತ್ತಾ..?

ಚುನಾವಣೆಯಲ್ಲಿ ಅಕ್ರಮ ನಡೆದಿತ್ತಾ..?

ಮ್ಯಾನ್ಮಾರ್‌ನಲ್ಲಿ 2020ರ ನವೆಂಬರ್‌ನಲ್ಲಿ ಚುನಾವಣೆ ನಡೆದಿತ್ತು. 75 ವರ್ಷದ ಸೂಕಿ ನೇತೃತ್ವದಲ್ಲಿ ಅವರ ಪಕ್ಷ ಭರ್ಜರಿ ಗೆಲುವು ಸಾಧಿಸಿತ್ತು. ಚುನಾವಣೆಯಲ್ಲಿ ಮ್ಯಾನ್ಮಾರ್‌ ಸಂಸತ್ತಿನ 642 ಸ್ಥಾನಗಳ ಪೈಕಿ ಸೂಕಿ ನೇತೃತ್ವದ ಎನ್‌ಎಲ್‌ಡಿ ಪಕ್ಷ 396 ಸ್ಥಾನ ಪಡೆದಿತ್ತು. ಅಂದಹಾಗೆ ಪ್ರಜಾಪ್ರಭುತ್ವದ ಪರ ಗಟ್ಟಿಯಾಗಿ ನಿಂತು ಹೋರಾಟ ನಡೆಸಿದ್ದವರು ಆಂಗ್ ಸಾನ್ ಸೂಕಿ. ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಆಡಳಿತ ವಿರುದ್ಧ ಸತತ ಹೋರಾಟ ನಡೆಸಿದ್ದ ಸೂಕಿಗೆ ಇದೀಗ ಹಿನ್ನಡೆಯಾಗಿದೆ. ಸೂಕಿ ಬಂಧನ ಹಲವು ಅನುಮಾನಗಳಿಗೂ ಕಾರಣವಾಗಿದೆ.

ಪ್ರಜಾಪ್ರಭುತ್ವ ವಾದಿ ರಾಷ್ಟ್ರಗಳ ಕಳವಳ

ಪ್ರಜಾಪ್ರಭುತ್ವ ವಾದಿ ರಾಷ್ಟ್ರಗಳ ಕಳವಳ

ಮ್ಯಾನ್ಮಾರ್‌ನಲ್ಲಿ ಸೇನಾ ಕ್ರಾಂತಿ ಎದುರಾದ ಬೆನ್ನಲ್ಲೇ ಪ್ರಜಾಪ್ರಭುತ್ವ ವಾದಿ ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿವೆ. ಹಠಾತ್ ಬೆಳವಣಿಗೆ ಬಗ್ಗೆ ಭಾರತ, ಅಮೆರಿಕ ಹಾಗೂ ಆಸ್ಟ್ರೇಲಿಯಾ ಸೇರಿದಂತೆ ಹಲವು ರಾಷ್ಟ್ರಗಳು ಆತಂಕ ವ್ಯಕ್ತಪಡಿಸಿವೆ. ಮತ್ತೊಂದ್ಕಡೆ ಸಂಪರ್ಕ ಸಾಧನಗಳನ್ನ ಬಂದ್ ಮಾಡಲಾಗಿದ್ದು, ವಾಕ್ ಸ್ವಾತಂತ್ರ್ಯಕ್ಕೆ ಮಿಲಿಟರಿ ಬ್ರೇಕ್ ಹಾಕಿದೆ. ಈ ಮೂಲಕ ಮ್ಯಾನ್ಮಾರ್‌ನ ಸಂಪೂರ್ಣ ಹಿಡಿತಕ್ಕೆ ತೆಗೆದುಕೊಳ್ಳಲು ಸೇನೆ ಮುಂದಾಗಿದೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ. ಈ ವಿಚಾರದಲ್ಲಿ ಚೀನಾ ಪರೋಕ್ಷ ಕೈವಾಡ ಅಲ್ಲಗಳೆಯುವಂತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+