ರಾಜಕುಮಾರಿ ಡಯಾನಾ ಲೈಂಗಿಕ ರಹಸ್ಯಗಳ ವಿಡಿಯೋ ಟೇಪ್ ಬಹಿರಂಗ!

ದಿವಂಗತ ರಾಜಕುಮಾರಿ ಡಯಾನಾ ಅವರ ಹೊಸ ವಿಡಿಯೋ ಟೇಪ್ ಬಹಿರಂಗ. ಇಪ್ಪತ್ತೊಂದು ಗಂಟೆಗಳ ಆ ವಿಡಿಯೋದಲ್ಲಿ ತಮ್ಮ ಲೈಂಗಿಕ ವಿಚಾರ ಹೇಳಿಕೊಂಡಿರುವ ಡಯಾನಾ. ಲಂಡನ್ ನ ಚಾನೆಲ್ 4 ಸುದ್ದಿ ಸಂಸ್ಥೆ ಹೇಳಿಕೆ.

ಲಂಡನ್, ಜುಲೈ 26: ರಾಜಕುಮಾರಿ ಡಯಾನಾ ಅವರ ಬೆಡ್ ರೂಂ ಸೀಕ್ರೇಟ್ ಗಳುಳ್ಳ ವಿಡಿಯೋ ಟೇಪ್ ಒಂದು ತನ್ನ ಕೈ ಸೇರಿರುವುದಾಗಿ ಬ್ರಿಟಿಷ್ ಟಿವಿ ಚಾನೆಲ್ 4 ಹೇಳಿಕೊಂಡಿದೆ.

ಇದರಲ್ಲಿ ರಾಜಕುಮಾರ ಚಾರ್ಲ್ಸ್ ಹಾಗೂ ಕೇಂಬ್ರಿಡ್ಜ್ ರಾಜಕುಮಾರಿ ಡಯಾನಾ ಅವರ ನಡುವಿನ ಲೈಂಗಿಕತೆಗೆ ಸಂಬಂಧಿಸಿದಂತೆ ಡಯಾನಾ ಅವರೇ ಮುಕ್ತವಾಗಿ ಹೇಳಿಕೊಂಡಿದ್ದಾರೆಂದು ಹೇಳಲಾಗಿದೆ.

Princess Diana tapes reveal intimate details of her 'sex life' with Prince Charles

ತಮ್ಮ ಬೆಡ್ ರೂಮ್ ವಿಚಾರಗಳ ಬಗ್ಗೆ ಡಯಾನಾ, ಅಮೆರಿಕ ಮೂಲದ ಪತ್ರಕರ್ತ ಪೀಟರ್ ಸೆಟಿಲೆನ್ ಮುಂದೆ ಧಾರಾಳವಾಗಿ ಹೇಳಿಕೊಂಡಿದ್ದರು. ಅದನ್ನು ಆಕೆಯ ಒಪ್ಪಿಗೆ ಮೇರೆಗೆ ಸಂದರ್ಶನ ರೂಪದಲ್ಲಿ ರೆಕಾರ್ಡ್ ಮಾಡಿಕೊಳ್ಳಲಾಗಿತ್ತು.

ಈ ವಿಡಿಯೋ ಟೇಪ್ 1992ರಿಂದ 1993ರ ಒಳಗೆ ಚಿತ್ರೀಕರಿಸಲಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಇದೀಗ ಡಯಾನಾ ತೀರಿಹೋಗಿ ಸುಮಾರು 2 ವರ್ಷಗಳ ನಂತರ, ಆ ಟೇಪ್ ಗಳು ಈಗ ಬಹಿರಂಗಗೊಂಡಿವೆ ಎಂದು ಹೇಳಲಾಗಿದೆ.

ಅಂದಹಾಗೆ, ಈ ವಿಡಿಯೋ ಟೇಪ್ ಸುಮಾರು 21 ಗಂಟೆಗಳ ದೀರ್ಘಾವಧಿಯದ್ದಾಗಿದೆಯಂತೆ! ಇದೇ ವರ್ಷ ಆಗಸ್ಟ್ 31ರಂದು ಡಯಾನಾ ಅವರು ತೀರಿಗೆ ಹೋಗಿ 20 ವರ್ಷ ಕಳೆಯುತ್ತದೆ. ಅಂದು ತಮ್ಮ ವಾಹಿನಿಯಲ್ಲಿ ವಿಶೇಷ ಕಾರ್ಯಕ್ರಮ ಪ್ರಸಾರವಾಗಲಿದ್ದು, ಅದರಲ್ಲಿ ಈ ವಿಡಿಯೋದ ಕೆಲವಾರು ಆಯ್ದ ಭಾಗಗಳನ್ನು ಪ್ರಸಾರ ಮಾಡಲಾಗುತ್ತದೆ ಎಂದು ಚಾನೆಲ್ 4 ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+