ನರೇಂದ್ರ ಮೋದಿ ಐರ್ಲೆಂಡ್ ಪ್ರವಾಸದ 9 ಚಿತ್ರಗಳು

ಡಬ್ಲಿನ್, ಸೆಪ್ಟೆಂಬರ್, 24 : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 23ರ ಬುಧವಾರದಿಂದ ಒಂದು ವಾರ ಕಾಲ ಐರ್ಲೆಂಡ್ ಮತ್ತು ಅಮೆರಿಕಾ ಪ್ರವಾಸ ಕೈಗೊಂಡಿದ್ದಾರೆ.ಮೋದಿ ಅವರು ಈಗಾಗಲೇ ಐರ್ಲೆಂಡ್ ತಲುಪಿ ಭಾರತವನ್ನುದ್ದೇಶಿಸಿ ಮಾತನಾಡಿದ್ದು, ಗುರುವಾರ ಅಮೆರಿಕಾ ತಲುಪಿದ್ದಾರೆ.

ಐರ್ಲೆಂಡ್ ರಾಜಧಾನಿ ಡಬ್ಲಿನ್ ಗೆ ಸೆಪ್ಟೆಂಬರ್ 23ರ ಬುಧವಾರದಂದು ತಲುಪಿದ ಮೋದಿ ಅವರಿಗೆ ಅದ್ದೂರಿ ಸ್ವಾಗತ ದೊರೆತಿದ್ದು, ಐರ್ಲೆಂಡ್ ನಾನಾ ಗಣ್ಯರು ಮೋದಿಯವರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.

60ವರ್ಷಗಳ ತರುವಾಯ ಐರ್ಲೆಂಡ್ ಪ್ರವಾಸಕ್ಕೆ ತೆರಳಿದ ಮೊದಲ ಪ್ರಧಾನಿ ಎಂಬ ಹೆಮ್ಮೆ ಹೊತ್ತು ಐರ್ಲೆಂಡ್ ಗೆ ನಡೆದ ಇವರು ಡಬ್ಲಿನ್ ಸಿಟಿ ಸೆಂಟರ್ ನಲ್ಲಿರುವ ಸರ್ಕಾರಿ ಕಚೇರಿಯಲ್ಲಿ ಐರ್ಲೆಂಡ್ ಪ್ರಧಾನಿ ಎಂಡ್ ಕೆನ್ನಿ ಅವರನ್ನು ಭೇಟಿ ಮಾಡಿದರು.[ಅಮೆರಿಕದಲ್ಲಿ ನರೇಂದ್ರ ಮೋದಿಗೆ ಭರ್ಜರಿ ಸ್ವಾಗತ LIVE]

ಬಹಳ ವರ್ಷಗಳಿಂದ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವದ ಕುರಿತಾಗಿ ಮಾತನಾಡುತ್ತಿದ್ದ ಭಾರತಕ್ಕೆ ಈ ವಿಚಾರವಾಗಿ ಬೆಂಬಲ ನೀಡಲು ಐರ್ಲೆಂಡ್ ಸಮ್ಮತಿ ನೀಡಿದೆ. ಹಾಗೆಯೇ ವಿಮಾನ ಸೇವೆ, ಐಟಿ ಉದ್ಯೋಗಿಗಳಿಗೆ ನೆರವು, ಕಂಪ್ಐಟರ್ ಸಾಫ್ಟ್ ವೇರ್, ಔಷಧ ಮತ್ತು ರಾಸಾಯನಿಕಗಳು, ಆಹಾರ ಮತ್ತು ಯಂತ್ರೋಪಕರಣಗಳು ಇನ್ನು ಮಂದೆ ಐರ್ಲೆಂಡ್ ನಿಂದ ಆಮದಾಗಲಿದೆ.

ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ಐರ್ಲೆಂಡ್ ಪ್ರವಾಸದ ಕೆಲವು ಚಿತ್ರ ತುಣುಕುಗಳು ಇಲ್ಲಿವೆ ನೋಡಿ.

ಇದು ನಮ್ಮ ಪದ್ಧತಿ

ಇದು ನಮ್ಮ ಪದ್ಧತಿ

ನರೇಂದ್ರ ಮೋದಿ ಐರ್ಲೆಂಡ್ ತಲುಪಿ ವಿಮಾನದಿಂದ ಇಳಿಯುವಾಗ ಐರ್ಲೆಂಡ್ ನ ಗಣ್ಯರಿಗೆ ನಮ್ಮ ಭಾರತದ ಪದ್ಧತಿಯಂತೆ ನಮಸ್ಕರಿಸಿ ವಿಮಾನ ಇಳಿದರು.

ನೀವು ಬಂದದ್ದು ಬಹಳ ಸಂತೋಷವಾಯಿತು

ನೀವು ಬಂದದ್ದು ಬಹಳ ಸಂತೋಷವಾಯಿತು

ಬಹಳ ಆತ್ಮೀಯವಾಗಿ ಬರಮಾಡಿಕೊಂಡ ಐರ್ಲೆಂಡ್ ಪ್ರಧಾನಿ ಎಂಡ ಕೆನ್ನಿ ನೀವು ಬಂದದ್ದು ನಮಗೆ ಬಹಳ ಸಂತಸ ತಂದಿದೆ ಎಂದು ಹೇಳಿದಾಗ ಮೋದಿ ನಗು ಬೀರಿದರು.

ಏನು ನೋಡುತ್ತಿದ್ದಾರೆ ಮೋದಿ?

ಏನು ನೋಡುತ್ತಿದ್ದಾರೆ ಮೋದಿ?

ನರೇಂದ್ರ ಮೋದಿ ಅವರಿಗೆ ಐರ್ಲೆಂಡ್ ಪ್ರಧಾನಿ ಎಂಡ ಕೆನ್ನಿ ನಗರದ ಸರ್ಕಾರಿ ಕಚೇರಿಯ ಪರಿಚಯ ಮಾಡಿಕೊಡುತ್ತಿದ್ದಾರೆ. ಮೋದಿ ಅವರು ಏಕಾಂತ ಚಿತ್ತದಿಂದ ಕಚೇರಿಯನ್ನು ನೋಡುತ್ತಿದ್ದಾರೆ.

ವೆಲ್ ಕಮ್ ಟು ಐರ್ಲೆಂಡ್

ವೆಲ್ ಕಮ್ ಟು ಐರ್ಲೆಂಡ್

ನರೇಂದ್ರ ಮೋದಿ ಅವರನ್ನು ಐರ್ಲೆಂಡ್ನ ಆರೋಗ್ಯ ಸಚಿವರಾದ ಲಿಯೋ ವರದಾಕರ್ ಡುಬ್ಲಿನ್ ಟಂತರಾಷ್ರೀಯ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು

ಇವರು ನಮ್ಮ ಪ್ರಧಾನಿ

ಇವರು ನಮ್ಮ ಪ್ರಧಾನಿ

ಐರ್ಲೆಂಡ್ ನಲ್ಲಿ ಭಾರತ ಮೂಲದ ಸುಮಾರು 26 ಸಾವಿರ ಮಂದಿ ಇದ್ದಾರೆ. ಇವರಲ್ಲಿ ಕೆಲವರು ಮೋದಿ ನೋಡಲು ಕಾರ್ಯಕ್ರಮಕ್ಕೆ ಆಗಮಿಸಿದ್ದರು.ಇವರು ತಮ್ಮ ದೇಶದ ಪ್ರಧಾನಿಯನ್ನು ಕಂಡು ಹರ್ಷಚಿತ್ತರಾಗಿ ಅವರಿಗೆ ಶುಭಾಶಯ ಕೋರಲು ಮುಗಿಬಿದ್ದರು.

ನಮ್ಮ ನಿಮ್ಮ ಸಂಬಂಧ ಉತ್ತಮವಾಗಿರಲಿ

ನಮ್ಮ ನಿಮ್ಮ ಸಂಬಂಧ ಉತ್ತಮವಾಗಿರಲಿ

ಭಾರತದ ಅರ್ಥವ್ಯವಸ್ಥೆಯನ್ನು ವಿವರಿಸುತ್ತಿರುವ ಮೋದಿಯನ್ನು ಎಂಡ ಕೆನ್ನಿ ನರೇಂದ್ರ ಮೋದಿ ಅವರ ಭಾಷಣದ ಧಾಟಿಯನ್ನು ತದೇಕ ಚಿತ್ತದಿಂದ ನೋಡುತ್ತಿದ್ದಾರೆ ಮತ್ತೆ ಕೇಳುತ್ತಿದ್ದಾರೆ.

ಭರತನಾಟ್ಯ ಕಂಡರು ಮೋದಿ

ಭರತನಾಟ್ಯ ಕಂಡರು ಮೋದಿ

ಭಾರತದ ಶಾಸ್ತ್ರೀಯ ನೃತ್ಯ ಭರತನಾಟ್ಯವನ್ನು ಐರಲೆಂಡ್ ನಾನಾ ಮಕ್ಕಳು ಪ್ರದರ್ಶನ ನೀಡಿದರು. ಭರತನಾಟ್ಯ ಮಾಡಿದ ಮಕ್ಕಳೊಂದಿಗೆ ಮೋದಿ ನಲ್ಮೆಯ ಮಾತುಗಳಲ್ಲಿ ತೊಡಗಿದಾಗ.

ಮಕ್ಕಳೊಂದಿಗೆ ಗ್ರೂಪ್ ಫೋಟೋ

ಮಕ್ಕಳೊಂದಿಗೆ ಗ್ರೂಪ್ ಫೋಟೋ

ಡಬ್ಲಿನ್ ಸಿಟಿ ಸೆಂಟರ್ ನಲ್ಲಿರುವ ಸರ್ಕಾರಿ ಕಚೇರಿಯಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ತಮ್ಮ ಪ್ರತಿಭೆಗಳ ಮೂಲಕ ಸ್ವಾಗತ ಕೋರಲು ಆಗಮಿಸಿದ ಮಕ್ಕಳೊಂದಿಗೆ ಗ್ರೂಪ್ ಫೋಟೋಗೆ ಫೋಸ್ ಕೊಟ್ಟರು ಮೋದಿ.

ಕೊಡುಗೆ ಪಡೆದುಕೊಂಡರು

ಕೊಡುಗೆ ಪಡೆದುಕೊಂಡರು

ನರೇಂದ್ರ ಮೋದಿ ಅವರಿಗೆ ಐರಲೆಂಡ್ ಪ್ರಧಾನಿ ಎಂಡ ಕೆನ್ನಿ ಐರ್ಲೆಂಡ್ ಎಂಬ ಬರಹವಿರುವ ವಸ್ತ್ರವನ್ನು ಐರ್ಲೆಂಡ್ ಪ್ರವಾಸದ ನೆನಪಿಗಾಗಿ ಕೊಡುಗೆ ನೀಡಿದರು. ನರೇಂದ್ರ ಮೋದಿ ಅವರ ಅಭಿಮಾನಕ್ಕೆ ಹರ್ಷಚಿತ್ತರಾದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+