ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಯಾರ್ಕ್‌ನಲ್ಲಿ ಗುಜರಾತ್ ಕಂಡ ನರೇಂದ್ರ ಮೋದಿ

|
Google Oneindia Kannada News

ನ್ಯೂಯಾರ್ಕ್, ಸೆಪ್ಟೆಂಬರ್ 24 : ಪ್ರಧಾನಿ ನರೇಂದ್ರ ಮೋದಿ ಅವರಿಗೆ ನ್ಯೂಯಾರ್ಕ್ ನಲ್ಲಿ ಅದ್ದೂರಿ ಸ್ವಾಗತ ಸಿಕ್ಕಿದೆ. ಮೋದಿ ತಮ್ಮ ಪ್ರವಾಸದ ವೇಳೆ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲದೇ ವಿಶ್ವದ ಅನೇಕ ಗಣ್ಯರ ಜತೆ ಮಾತುಕತೆ ನಡೆಸಲಿದ್ದಾರೆ.

ನ್ಯೂಯಾರ್ಕ್ ನ ವಾಲ್ಡೋರ್ಫ್‌ ಅಸ್ಟೋರಿಯಾ ಹೋಟೆಲ್ ಗೆ ಮೋದಿ ಅವರು ಆಗಮಿಸಿದಾಗ ನಾಗರಿಕರು ಘೋಷಣೆಗಳೊಂದಿಗೆ ಬರಮಾಡಿಕೊಂಡರು. ಸೆಪ್ಟೆಂಬರ್ 26 ರಂದು ವೆಸ್ಟ್ ಕೋಸ್ಟ್ ಗೆ ತೆರಳುವ ಮುನ್ನ ಮೋದಿ ಅವರು ಜರ್ಮನಿ ಪ್ರಧಾನಾಧಿಕಾರಿ ಅಂಜೆಲಾ ಮರ್ಕೆಲ್, ಜಪಾನ್ ಪ್ರಧಾನಿ ಶಿಂಸೋ ಅಬೆ ಮತ್ತು ಬ್ರೆಜಿಲ್ ಅಧ್ಯಕ್ಷ ದಿಲ್ಮಾ ರೌಸೆಫ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. [ಅಮೆರಿಕದಲ್ಲಿ ನರೇಂದ್ರ ಮೋದಿಗೆ ಭರ್ಜರಿ ಸ್ವಾಗತ]

ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರ ಮಧ್ಯೆ ಯಾವುದೇ ದ್ವಿಪಕ್ಷೀಯ ಮಾತುಕತೆ ಈ ಸಂದರ್ಭ ನಡೆಯುವ ಸಾಧ್ಯತೆಯಿಲ್ಲ ಎಂದು ಹೇಳಲಾಗಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯ ಸ್ಥಾನವನ್ನು ಪಡೆದುಕೊಳ್ಳುವುದರ ಮೇಲೆ ಮೋದಿ ಗಮನ ಹರಿಸಲಿದ್ದಾರೆ, ಅಲ್ಲದೇ ಮೋದಿ ಪ್ರಮುಖ ಕಂಪನಿ ಸಿಇಒಗಳ ಜತೆ ಮಾತುಕತೆ ನಡೆಸಲಿದ್ದು ಭಾರತಕ್ಕೆ ಮತ್ತಷ್ಟು ಬಂಡವಾಳ ಹರಿದು ಬರುವ ಸಾಧ್ಯತೆಯಿದೆ.

ಕಾಲಿಗೆ ಬಿದ್ದರು

ಕಾಲಿಗೆ ಬಿದ್ದರು

ಪ್ರಧಾನಿ ನರೇಂದ್ರ ಮೋದಿ ಕಾಲಿಗೆ ಬಿದ್ದು ಆಶೀರ್ವಾದ ಪಡೆಯಲು ಮುಂದಾದ ಗುಜರಾತ್ ಮೂಲದ ಮಹಿಳೆ.

 ಗುಜಾರಾತ್ ಸಮುದಾಯದೊಂದಿಗೆ

ಗುಜಾರಾತ್ ಸಮುದಾಯದೊಂದಿಗೆ

ಗುಜರಾತ್ ಮೂಲದ ಅಮೆರಿಕದ ನಾಗರಿಕರ ಸಮುದಾಯದೊಂದಿಗೆ ಪ್ರಧಾನಿ ನರೇಂದ್ರ ಮೋದಿ.

 ನಮ್ಮ ದೇಶ ಚೆನ್ನ

ನಮ್ಮ ದೇಶ ಚೆನ್ನ

ಪ್ರಧಾನಿಯೊಂದಿಗೆ ಮಾತುಕತೆಯಲ್ಲಿ ತೊಡಗಿದ್ದ ಗುಜರಾತ್ ಮೂಲದ ಯುವತಿ. ನಮ್ಮ ದೇಶ ಮತ್ತು ಅಮೆರಿಕ ನಡುವಿನ ವ್ಯತ್ಯಾಸ ಹೇಗಿದೆ ಎಂಬುದನ್ನು ವಿವರಿಸಿದಂತಿತ್ತು.

 ಬಂದಿಳಿದ ಪ್ರಧಾನಿ

ಬಂದಿಳಿದ ಪ್ರಧಾನಿ

ನ್ಯೂಯಾರ್ಕ್ ನ ಜಾನ್ ಎಫ್ ಕೆನಡಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ. ಮೋದಿ ಐರ್ಲೆಂಡ್ ಪ್ರವಾಸ ಮುಗಿಸಿ ಅಮೆರಿಕಕ್ಕೆ ಬಂದಿಳಿದರು.

ಮೋದಿಗೆ ಭವ್ಯ ಸ್ವಾಗತ

ಮೋದಿಗೆ ಭವ್ಯ ಸ್ವಾಗತ

ಅಮೆರಿಕಕ್ಕೆ ಆಗಮಿಸಿದ ಮೋದಿಗೆ ಭವ್ಯ ಸ್ವಾಗತ ನೀಡಿದ ನಾಗರಿಕರು. ಮೋದಿ... ಮೋದಿ..ಎಂದು ಘೊಷಣೆ ಕೂಗಿ ಬರಮಾಡಿಕೊಂಡರು.

English summary
As Prime Minister Narendra Modi arrived in New York. PM Modi will attend the United Nations General Assembly session and will also meet President Barack Obama during his five-day trip.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X