‘ಜೇಡರ ಬಲೆ’ಗೆ ಸಿಲುಕಿದ ಆಸ್ಟ್ರೇಲಿಯಾ! ಕಾಂಗರೂ ನಾಡಿಗೆ ಸಾಲು ಸಾಲು ಕಷ್ಟಗಳು!
ಆಸ್ಟ್ರೇಲಿಯನ್ನರ
ಗ್ರಹಚಾರ ನೆಟ್ಟಗಿಲ್ಲ ಅಂತಾ ಕಾಣುತ್ತೆ, ಯಾಕಂದ್ರೆ ಸಾಲು ಸಾಲು ಸಂಕಷ್ಟಕ್ಕೆ ಸಿಲುಕುತ್ತಿದೆ ಕಾಂಗರೂ ನಾಡು. ಕಳೆದ ವರ್ಷ ಭೀಕರ ಕಾಡ್ಚಿಚ್ಚು ಬಂದು ಕಾಲು ಭಾಗದಷ್ಟು ಆಸ್ಟ್ರೇಲಿಯಾದ ಕಾಡುಗಳು ನಾಶವಾಗಿ ಹೋದವು. ಇದಾದ ನಂತರ ಜಗತ್ತನ್ನೇ ಕಾಡಿರುವ ಕೊರೊನಾ ಕಂಟಕ ಎದುರಾಗಿತ್ತು. ಆದರೆ ಕೊರೊನಾ ಸೋಂಕನ್ನ ದಿಟ್ಟವಾಗಿ ಎದುರಿಸಿದ ಆಸ್ಟ್ರೇಲಿಯಾಗೆ ಮಳೆ ಶಾಕ್ ಕೊಟ್ಟಿತ್ತು. ಭೀಕರ ಪ್ರವಾಹದ ಪರಿಣಾಮ ಆಸ್ಟ್ರೇಲಿಯಾ ಹಲವು ಸಮಸ್ಯೆಗಳನ್ನ ಎದುರಿಸುತ್ತಿದೆ. ಈಗ ವಿಷಕಾರಿ ಜೇಡಗಳು ಆಸ್ಟ್ರೇಲಿಯಾ ಜನರ ನಿದ್ದೆಗೆಡಿಸಿವೆ.Recommended Video
ಅತ್ತ
ಕೋಟ್ಯಂತರ ಇಲಿಗಳು ಆಸ್ಟ್ರೇಲಿಯಾ ತುಂಬ ಹಬ್ಬಿ ಕೂತಿವೆ. ಇದು ಮತ್ತೊಂದು ಸಾಂಕ್ರಾಮಿಕ ರೋಗದ ಭೀತಿ ಹುಟ್ಟುಹಾಕಿದೆ. ಆದ್ರೆ ಈ ಮಧ್ಯೆ ಅತ್ಯಂತ ವಿಷಕಾರಿ ಜೇಡಗಳು ಆಸ್ಟ್ರೇಲಿಯಾ ದೇಶವನ್ನ ಕಾಡುತ್ತಿವೆ. ಅದರಲ್ಲೂ ಭಾರಿ ಪ್ರಮಾಣದ ಪ್ರವಾಹಕ್ಕೆ ತುತ್ತಾಗಿರುವ ವಿಕ್ಟೋರಿಯಾ ಪ್ರಾಂತ್ಯದಲ್ಲಿ ಎಲ್ಲೆಂದರಲ್ಲಿ ಜೇಡರ ಬಲೆ ಕಾಣಿಸುತ್ತಿದೆ. ರಸ್ತೆ, ಪಾರ್ಕ್, ಮನೆ, ಮಹಡಿ ಹೀಗೆ ಎಲ್ಲಿ ನೋಡಿದರೂ ಜೀವ ತೆಗೆಯುವ ಜೇಡಗಳೇ ತುಂಬಿ ತುಳುಕುತ್ತಿವೆ. id='are-slot-2' class='oiad oi-axt oiadv'>
ಜೇಡ ನಿಯಂತ್ರಣಕ್ಕೆ ಸರ್ಕಸ್..!
ಅತ್ತ ಜೇಡಗಳು ಕಂಡ ಕಂಡಲ್ಲಿ ಬಲೆ ಹೆಣೆದು ಟಾರ್ಚರ್ ಕೊಡುತ್ತಿದ್ದರೆ, ಅಪಾರ್ಟ್‌ಮೆಂಟ್ ಮತ್ತು ಮನೆಯ ಒಳಗೂ ಇವುಗಳ ಕಾಟ ಶುರುವಾಗಿದೆ. ಅದರಲ್ಲೂ ಮಕ್ಕಳು, ವೃದ್ಧರು ಇರುವ ಮನೆಗಳಲ್ಲಿ ಭಾರಿ ಆತಂಕವೇ ಎದುರಾಗಿದೆ. ಏಕೆಂದರೆ ಆಸ್ಟ್ರೇಲಿಯಾದಲ್ಲಿ ಕಾಣಸಿಗುವ ಜೇಡದ ಜಾತಿ ಜೀವ ತೆಗೆಯುವಷ್ಟು ಶಕ್ತಿಶಾಲಿ. ಈ ಕಾರಣಕ್ಕೆ ಆಸ್ಟ್ರೇಲಿಯನ್ನರಿಗೆ ನಿದ್ದೆ ಬರುತ್ತಿಲ್ಲ. ಒಂದು ಕಡೆ ಇಲಿಗಳು ಮನೆ ಮಾಳಿಗೆ ಏರಿ ಸದ್ದು ಮಾಡುತ್ತಿವೆ, ಇನ್ನೊಂದು ಕಡೆ ಜೀವ ತೆಗೆಯಲು ಜೇಡಗಳು ಮನೆಯ ಒಳಗೆ ನುಗ್ಗಿವೆ. ಇದು ಬಿಡಿ ಪ್ರವಾಹದ ಜೊತೆ ಮನೆ ಸೇರಿದ್ದ ಕೊಳಕು ಮಂಡಲ ಜಾತಿಯ ಲಕ್ಷಾಂತರ ಹಾವುಗಳು, ಈಗಲೂ ಮನೆಯ ಒಳಗೇ ಹರಿದಾಡುತ್ತಿವೆ.

ಮಳೆಯಿಂದ ಎದುರಾಯ್ತಾ ಸಮಸ್ಯೆ..?
ಆಸ್ಟ್ರೇಲಿಯಾ ಮರುಭೂಮಿ, ಕೆಲವು ಭಾಗಗಳಲ್ಲಿ ಮಾತ್ರ ಹಸಿರು ವಲಯ ಕಾಣುತ್ತದೆ. ಹೀಗಾಗಿಯೇ ಅಲ್ಲಿನ ಮಳೆ ಪ್ರಮಾಣ ತೀರಾ ಕಮ್ಮಿ. ಆದರೆ ಈ ಬಾರಿ ದುರಾದೃಷ್ಟಕ್ಕೆ ಎಂಬಂತೆ ಮಳೆ ಸುರಿದಿದೆ. ಅದು ಅಷ್ಟೋ, ಇಷ್ಟೋ ಅಲ್ಲ. 50 ವರ್ಷಗಳಲ್ಲೇ ಸುರಿಯದಷ್ಟು ಮಳೆ ದಿಢೀರನೆ ಸುರಿದಿದೆ. ಹೀಗೆ ಕಳೆದ 5-10 ವರ್ಷದಿಂದ ಆಸ್ಟ್ರೇಲಿಯಾದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗುತ್ತಿದ್ದಂತೆ ಅಲ್ಲಿನ ರೈತರು ಖುಷಿಯಲ್ಲಿ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆದುಬಿಟ್ಟರು. ಇದೇ ಎಡವಟ್ಟಿಗೆ ಕಾರಣವಾಗಿದೆ ಎನ್ನಲಾಗುತ್ತಿದೆ. ಅರೆ ಬೆಳೆ ಹೆಚ್ಚಾದರೆ ಇಲಿ ಸಂತತಿ ಹೆಚ್ಚಳಕ್ಕೆ ಕಾರಣವೇನು ಎನ್ನಬೇಡಿ..! ಏಕೆಂದರೆ ಆಸ್ಟ್ರೇಲಿಯಾದ ಇಲಿಗಳು ಇದೇ ರೈತರ ಬೆಳೆಗಳನ್ನು ನಂಬಿ ಬದುಕುತ್ತಿದ್ದವು, ಇದೀಗ ಭಾರಿ ಪ್ರಮಾಣದಲ್ಲಿ ಬೆಳೆ ಬೆಳೆದು ಅದನ್ನ ಸಂಗ್ರಹಣೆ ಮಾಡಿದ ಹಿನ್ನೆಲೆಯಲ್ಲಿ ಇಲಿಗಳ ಸಂತತಿ ಊಹೆಗೂ ನಿಲುಕದಷ್ಟು ಬೆಳೆದಿದೆ.

ಎಲ್ಲೆಲ್ಲೂ ಇಲಿಗಳ ಅಟ್ಟಹಾಸ..!
ಇಂಟರ್ನೆಟ್‌ನಲ್ಲಿ ಆಸ್ಟ್ರೇಲಿಯಾದ ಇಲಿಗಳದ್ದೇ ಸುದ್ದಿ. ಎಲ್ಲಿ ನೋಡಿದರೂ ಇಲಿಗಳೇ ಅಬ್ಬರಿಸುತ್ತಿರುವ ಹಿನ್ನೆಲೆ ದ್ವೀಪರಾಷ್ಟ್ರ ಆಸ್ಟ್ರೇಲಿಯಾದಲ್ಲಿ ಜನರು ತತ್ತರಿಸಿ ಹೋಗಿದ್ದಾರೆ. ಮನೆ, ಜಮೀನು, ಗೋದಾಮು, ಕಾರು, ಬೈಕು, ಇದೆಲ್ಲಾ ಬಿಡಿ ಕಾಡುಗಳಿಗೂ ನುಗ್ಗಿ ದಾಳಿ ಮಾಡುತ್ತಿವೆ ಇಲಿಗಳು. ಸುಮ್ಮನೆ ಮನೆ ಅಕ್ಕಪಕ್ಕ ಬಿದ್ದಿದ್ದ ಹಳೆಯ ವಸ್ತುಗಳನ್ನ ತೆಗೆದರೆ ಸಾವಿರಾರು ಇಲಿಗಳ ದರ್ಶನವಾಗುತ್ತದೆ. ಇದರಿಂದ ಬೆಚ್ಚಿಬಿದ್ದಿರುವ ಆಸ್ಟ್ರೇಲಿಯಾ ಜನ, ಪ್ಲೀಸ್ ನಮಗೆ ಇಲಿಗಳ ಕಾಟದಿಂದ ಮುಕ್ತಿ ಕೊಡಿಸಿ ಅಂತಾ ಸರ್ಕಾರದ ಬಳಿ ಅಂಗಲಾಚುತ್ತಿದ್ದಾರೆ.

ಪ್ಲೇಗ್ ಭೀತಿಯಲ್ಲಿ ಆಸ್ಟ್ರೇಲಿಯಾ..?
ಇಲಿಗಳಿಂದ ಮುಖ್ಯವಾಗಿ ತಗುಲುವ ರೋಗವೆಂದರೆ ಪ್ಲೇಗ್. ಈಗಾಗಲೇ ಆಸ್ಟ್ರೇಲಿಯಾದಲ್ಲಿ ಪ್ಲೇಗ್ ಬಗ್ಗೆ ಸಣ್ಣ ವಾರ್ನಿಂಗ್ ಕೂಡ ಸಿಕ್ಕಿದೆ. ಇಲಿಗಳಿಂದ ತಗುಲುವ ಇತರ ರೋಗಗಳಿಗೆ ಜನ ತುತ್ತಾಗುತ್ತಿದ್ದಾರೆ. ಇಂತಹ ಕೆಲ ಪ್ರಕರಣಗಳು ವರದಿಯಾಗಿವೆ. ತಕ್ಷಣ ಅಲರ್ಟ್ ಆಗಿರುವ ಆಸ್ಟ್ರೇಲಿಯಾ ಸರ್ಕಾರ ರೈತರು ಮತ್ತು ನಾಗರಿಕರ ನೆರವಿಗಾಗಿ ಸುಮಾರು 50 ಮಿಲಿಯನ್ ಡಾಲರ್ ಪರಿಹಾರ ಘೋಷಣೆ ಮಾಡಿದೆ. ಮತ್ತೊಂದು ಕಡೆ ಇಲಿಗಳ ಸಾಮ್ರಾಜ್ಯಕ್ಕೆ ಒಂದು ಗತಿ ಕಾಣಿಸಲು ದೊಡ್ಡ ಯೋಜನೆ ಹಾಕಿಕೊಂಡಿದೆ. ಇದಕ್ಕಾಗಿ ಭಾರತದ ಸಹಾಯಕ್ಕೆ ಮೊರೆಯಿಟ್ಟಿದೆ ಶ್ರೀಮಂತ ರಾಷ್ಟ್ರ ಆಸ್ಟ್ರೇಲಿಯಾ.

ವಿಷಕ್ಕಾಗಿ ಭಾರತಕ್ಕೆ ಮನವಿ..!
ಅತ್ತ ಕೊರೊನಾ ಕಂಟ್ರೋಲ್ ಮಾಡಿ ಗೆದ್ದು ಬೀಗಿದ್ದ ಆಸ್ಟ್ರೇಲಿಯಾಗೆ ಪ್ರಾಕೃತಿಕ ವಿಕೋಪಗಳು ಸವಾಲಾಗಿವೆ. ಇದರ ನಡುವೆ ಇಲಿಗಳ ಅಟ್ಟಹಾಸದಿಂದ ಪ್ಲೇಗ್ ಹಬ್ಬಿದರೆ ಪರಿಸ್ಥಿತಿ ವಿಕೋಪಕ್ಕೆ ಹೋಗೋದಂತೂ ಪಕ್ಕಾ. ಹೀಗಾಗಿಯೇ ಸುಮಾರು 5 ದಶಕದಲ್ಲಿ ಕಾಣದ ಭೀಕರ ಇಲಿ ದಾಳಿಯಿಂದ ಬಚಾವ್ ಆಗಲು ಆಸ್ಟ್ರೇಲಿಯಾ ಭಾರತದ ಬಳಿ ವಿಷಕ್ಕಾಗಿ ಮೊರೆ ಇಟ್ಟಿದೆ. ನ್ಯೂ ಸೌತ್ ವೇಲ್ಸ್‌ನ ಸರ್ಕಾರ ಭಾರತದ ಬಳಿ 5000 ಲೀಟರ್ ನಿಷೇಧಿತ ಬ್ರೊಮಾಡಿಯೋಲೋನ್ ವಿಷಕ್ಕಾಗಿ ಬೇಡಿಕೆ ಸಲ್ಲಿಸಿದೆ. ಅಕಸ್ಮಾತ್ ಇಲಿಗಳ ನಿಯಂತ್ರಣ ಸಾಧ್ಯ ಆಗದೇ ಇದ್ದರೆ ವಿಷ ಇಟ್ಟು ಸಾಯಿಸಲು ಸಿದ್ಧತೆ ನಡೆದಿದೆ.












Click it and Unblock the Notifications