Donald Trump: ಜಗತ್ತಿನ ಗಮನ ಸೆಳೆದ ಪ್ರಧಾನಿ ಮೋದಿ ಅಮೆರಿಕ ಪ್ರವಾಸ!
ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಎಂಟ್ರಿ ಕೊಟ್ಟ ನಂತರ ಇಡೀ ಜಗತ್ತಿಗೆ ಜಗತ್ತೇ ಶೇಕ್, ಶೇಕ್ ಆಗುತ್ತಿದೆ. ಯಾಕಂದ್ರೆ ಡೊನಾಲ್ಡ್ ಟ್ರಂಪ್ ಆ ರೀತಿ ಕ್ರಾಂತಿಕಾರಿ ನಿರ್ಧಾರ ಕೈಗೊಂಡು ಶತ್ರುಗಳಿಗೆ ತೊಡೆ ತಟ್ಟುತ್ತಿದ್ದಾರೆ. ಅದರಲ್ಲೂ ಟ್ರಂಪ್ ಅವರ ನಿರ್ಧಾರಗಳ ಪರಿಣಾಮವಾಗಿ ಭಾರತ ಕೂಡ ಸಂಕಷ್ಟಕ್ಕೆ ಸಿಲುಕಿದ್ದು, ಇದೇ ಸಮಯದಲ್ಲಿ ಪ್ರಧಾನಿ ಮೋದಿ ಅವರು ಈಗ ಅಮೆರಿಕದ ವಿಮಾನ ಹತ್ತಲು ಸಜ್ಜಾಗಿದ್ದಾರೆ. ಈ ಮೂಲಕ ತಮ್ಮ ಆತ್ಮೀಯ ಗೆಳೆಯ ಟ್ರಂಪ್ ಜೊತೆಗೆ ಮಾತುಕತೆ ನಡೆಸಲು ಮುಂದಾಗಿದ್ದಾರೆ.
ಹೌದು, ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮಾತು ಕೊಟ್ಟಂತೆ ಡೊನಾಲ್ಡ್ ಟ್ರಂಪ್ ಈಗ ಅಕ್ರಮ ವಲಸಿಗರ ವಿರುದ್ಧ ಯುದ್ಧ ಸಾರಿದ್ದಾರೆ. ಇದಕ್ಕಿಂತ ಹೆಚ್ಚಾಗಿ ತೆರಿಗೆ ಯುದ್ಧವನ್ನೂ ಸಾರಿ ಜಾಗತಿಕ ಆರ್ಥಿಕತೆ ಬುಡ ಅಲುಗಾಡುವಂತೆ ಮಾಡಿದ್ದಾರೆ. ಅದೇ ರೀತಿ ಬ್ರಿಕ್ಸ್ ಒಕ್ಕೂಟದ ವಿರುದ್ಧ ಕೂಡ ಗುಡುಗುತ್ತಿರುವ ಡೊನಾಲ್ಡ್ ಟ್ರಂಪ್ ಅವರು, ಶೇಕಡಾ 100 ರಷ್ಟು ತೆರಿಗೆ ಭಾರ ಹಾಕಲು ಮುಂದಾಗಿದ್ದಾರೆ. ಈ ಬೆಳವಣಿಗೆಗಳ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಗೆ ಹಾರುತ್ತಿದ್ದಾರೆ.

ಪಿಎಂ ಮೋದಿ & ಟ್ರಂಪ್ ನಡುವೆ ಏನೆಲ್ಲಾ ಚರ್ಚೆ?
ಅಮೆರಿಕ ಹಾಗೂ ಭಾರತದ ನಡುವೆ ಪ್ರತಿವರ್ಷ ಲಕ್ಷಾಂತರ ಕೋಟಿ ರೂಪಾಯಿ ವ್ಯಾಪಾರ ನಡೆಯುತ್ತದೆ. ಈ ವ್ಯವಹಾರದ ಭಾಗವಾಗಿ ಕೂಡ ಎರಡೂ ದೇಶಗಳ ಸಂಬಂಧ ಇನ್ನಷ್ಟು ಗಟ್ಟಿಯಾಗಿದೆ. ಹೀಗಿದ್ದಾಗ ಪ್ರಧಾನಿ ಮೋದಿ ಅವರು ಹಲವು ವಿಚಾರಗಳ ಬಗ್ಗೆ ಅಮೆರಿಕದ ನೂತನ ಅಧ್ಯಕ್ಷ ಟ್ರಂಪ್ ಅವರ ಜೊತೆಗೆ ಚರ್ಚೆ ನಡೆಸಲಿದ್ದಾರೆ. ಹಾಗೇ ಸೇನಾ ಸರಕುಗಳ ಖರೀದಿ ವಿಚಾರ ಕೂಡ ಮುನ್ನೆಲೆಗೆ ಬರುವ ಸಾಧ್ಯತೆ ಇದೆ.
ಅಮೆರಿಕಗೆ ಬೇಕು ಭಾರತದ ಬೆಂಬಲ
ಏಷ್ಯಾ ಭಾಗದಲ್ಲಿ ಅಮೆರಿಕ ಅತ್ಯುತ್ತಮ ಸ್ನೇಹ ಇಟ್ಟುಕೊಂಡಿರುವ ಏಕೈಕ ದೇಶ ಎಂದರೆ ಅದು ಭಾರತ ಮಾತ್ರ. ಹೀಗಾಗಿ ಭಾರತದ ಜೊತೆಗಿನ ಸ್ನೇಹ ಸಂಬಂಧ ಅಭಿವೃದ್ಧಿ ಇದೀಗ ಅಮೆರಿಕಗೆ ಬಹುಮುಖ್ಯ. ಇಷ್ಟೆಲ್ಲದರ ನಡುವೆ ಇತ್ತೀಚಿನ ದಿನಗಳಲ್ಲಿ ಎರಡೂ ದೇಶಗಳ ಮಧ್ಯೆ ಸಂಬಂಧ ಹಳಸುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ. ಇಂತಹ ಸಮಯದಲ್ಲೇ ಪ್ರಧಾನಿ ಮೋದಿ ಅವರು ಅಮೆರಿಕಗೆ ಹೋಗಲು ಸಜ್ಜಾಗಿದ್ದಾರೆ. ಭಾರತ ಮತ್ತು ಅಮೆರಿಕ ನಡುವಿನ ಮಾತುಕತೆ ಮೇಲೆ ಜಗತ್ತು ಕಣ್ಣಿಟ್ಟು ಕೂತಿದ್ದು, ಪ್ರಮುಖವಾಗಿ ತೆರಿಗೆ ವಿಚಾರ ಚರ್ಚೆಗೆ ಬರುವ ಸಾಧ್ಯತೆ ದಟ್ಟವಾಗಿದೆ.












Click it and Unblock the Notifications