ಕಾಂತಿಪುರದಲ್ಲಿ ನರೇಂದ್ರಮೋದಿ 'ಕಾಂತಿ' ಆರಂಭ

ಕಠ್ಮಂಡು, ಆ.3: ಕಾಂತಿಪುರ ಎಂದು ಕರೆಯಲ್ಪಡುವ ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಭಾರತದ ಪ್ರಧಾನಿ ನರೇಂದ್ರಮೋದಿ ಅವರ 'ಕಾಂತಿ' ಗೆ ನೇಪಾಳಿ ಜನತೆ ಮಾರು ಹೋಗಿದ್ದಾರೆ. ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೋದಿ ಅವರಿಗೆ ಭವ್ಯ ಸ್ವಾಗತ ಸಿಕ್ಕಿದೆ.

ಎರಡು ದಿನಗಳ ಪ್ರವಾಸಕ್ಕೆ ಆಗಮಿಸಿರುವ ನರೇಂದ್ರ ಮೋದಿ ಅವರನ್ನು ನೇಪಾಳದ ಪ್ರಧಾನಿ ಸುಶೀಲ್‌ ಕೊಯಿರಾಲ ಸೇರಿದಂತೆ ವಿವಿಧ ರಾಜಕೀಯ ನಾಯಕರು ಆತ್ಮೀಯವಾಗಿ ಬರಮಾಡಿಕೊಂಡರು. ಸೈನಿಕರು 19 ಕುಶಾಲತೋಪುಗಳನ್ನು ಸಿಡಿಸಿ ಮೋದಿ ಅವರಿಗೆ ಗೌರವ ವಂದನೆ ನೀಡಿದರು.

ಮೋದಿ ಅವರು 16 ವರ್ಷದಿಂದ ಅಹ್ಮದಾಬಾದ್‌ನಲ್ಲಿ ವಿದ್ಯಾಭ್ಯಾಸ ಮಾಡಿಸುತ್ತಿದ್ದ ನೇಪಾಲಿ ಹುಡುಗ ಜೀತ್‌ ಬಹದ್ದೂರ್‌ ನ ಕುಟುಂಬ ಸದಸ್ಯರ ಭೇಟಿಯಾಗಿದ್ದಾರೆ. [ಹೆತ್ತವರ ಜತೆ ಮೋದಿ 'ಪುತ್ರ' ನ ಪುನರ್ಮಿಲನ]

ಮೋದಿ ಅವರು ಕಠ್ಮಂಡುವಿನಲ್ಲಿರುವ 5ನೇ ಶತಮಾನದ ಪಶುಪತಿನಾಥ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ದಕ್ಷಿಣ ಭಾರತದ ಪ್ರಧಾನ ಅರ್ಚಕ ಗಣೇಶ ಭಟ್ಟ ಪ್ರಧಾನಿಗೆ ಪ್ರಸಾದ ನೀಡಲಿದ್ದಾರೆ. ದೇವಾಲಯದ ಆಡಳಿತ ಮಂಡಳಿ ಮೋದಿಗೆ ಪಶುಪತಿನಾಥನ ಮೂರ್ತಿಯ ಉಡುಗೊರೆ ನೀಡಲು ನಿರ್ಧರಿಸಲಾಗಿದೆ.

ಕಳೆದ ವಾರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರೂ ಈ ದೇಗುಲಕ್ಕೆ ಭೇಟಿ ನೀಡಿದ್ದು, ದೇಗುಲದ ಸಂರಕ್ಷಣೆಗೆ 25 ಕೋಟಿ ನೆರವು ಘೋಷಿಸಿದ್ದರು. ಭಾರತವು ದೇವಾಲಯಕ್ಕಾಗಿ 2 ಕೋಟಿ ಮೌಲ್ಯದ 2,500 ಕೆಜಿ ಶ್ರೀಗಂಧವನ್ನೂ ಅರ್ಪಿಸಲಿದೆ.

ಉಭಯ ದೇಶಗಳ ಬಾಂಧವ್ಯ ವೃದ್ಧಿಗಾಗಿ ಪ್ರಧಾನಿ ನೇಪಾಳಕ್ಕೆ ಭೇಟಿ ನೀಡುತ್ತಿದ್ದು, ಆರ್ಥಿಕ ಅಭಿವೃದ್ಧಿ ಬಗ್ಗೆ ಚರ್ಚಿಸಲಿದ್ದಾರೆ.17 ವರ್ಷಗಳ ನಂತರ ನೇಪಾಳಕ್ಕೆ ಭಾರತದ ಪ್ರಧಾನಿ ಭೇಟಿ ನೀಡುತ್ತಿರುವುದು ವಿಶೇಷ. ಮೋದಿಯ ಸಾಕುಮಗ ಜೀತ್​ ಬಹುದ್ದೂರ್ ಸಹ ತನ್ನ ಹುಟ್ಟೂರಿಗೆ ಮೋದಿಯ ಜತೆಗೆ ತೆರಳಲಿದ್ದಾನೆ. ಇವರನ್ನು ಸ್ವಾಗತಿಸಲು ಜೀತ್​ ಕುಟುಂಬ ಸಜ್ಜಾಗಿದೆ.

ಸುಶೀಲ್‌ ಕೊಯಿರಾಲರಿಂದ ಮೋದಿಗೆ ಸ್ವಾಗತ

ಸುಶೀಲ್‌ ಕೊಯಿರಾಲರಿಂದ ಮೋದಿಗೆ ಸ್ವಾಗತ

ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೋದಿ ಅವರಿಗೆ ಭವ್ಯ ಸ್ವಾಗತ ಸಿಕ್ಕಿದೆ.

ವಿದೇಶಾಂಗ ಸಚಿವರ ಜತೆ ಮೋದಿ ಮಾತುಕತೆ

ವಿದೇಶಾಂಗ ಸಚಿವರ ಜತೆ ಮೋದಿ ಮಾತುಕತೆ

ನೇಪಾಳದ ಹೊಟೆಲ್ ಹಯಾತ್ ನಲ್ಲಿ ವಿದೇಶಾಂಗ ಸಚಿವ ಮಹೇಂದ್ರ ಬಹದೂರ್ ಪಾಂಡೆ ಅವರ ಜತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮಾತುಕತೆ

ಸಾಕುಮಗ ಜೀತ್​ ಬಹುದ್ದೂರ್ ಕುಟುಂಬದೊಡನೆ

ಸಾಕುಮಗ ಜೀತ್​ ಬಹುದ್ದೂರ್ ಕುಟುಂಬದೊಡನೆ ಮತ್ತೆ ಸೇರುವಂತೆ ಮಾಡಿದ ಸಂತೋಷದಲ್ಲಿ ಪ್ರಧಾನಿ ಮೋದಿ

ವಿಮಾನ ನಿಲ್ದಾಣದಲ್ಲಿ ಗೌರವ ವಂದನೆ ಸ್ವೀಕಾರ

ಸೈನಿಕರು 19 ಕುಶಾಲತೋಪುಗಳನ್ನು ಸಿಡಿಸಿ ಮೋದಿ ಅವರಿಗೆ ಗೌರವ ವಂದನೆ ನೀಡಿದರು.

ಮೋದಿ ಆಗಮನಕ್ಕೆ ಕಾದಿರುವ ಜನತೆ

ಎರಡು ದಿನಗಳ ಪ್ರವಾಸಕ್ಕೆ ಆಗಮಿಸಿರುವ ನರೇಂದ್ರ ಮೋದಿ ಅವರನ್ನು ಕಾಣಲು ಕಾತುರದಿಂದ ಕಾದಿರುವ ನೇಪಾಳಿಗಳು

ವಿಮಾನ ನಿಲ್ದಾಣದಲ್ಲಿ ಮೋದಿ ವಿಡಿಯೋ

ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೋದಿ ಅವರಿಗೆ ಸಿಕ್ಕ ಭವ್ಯ ಸ್ವಾಗತ, ಗೌರವ ವಂದನೆ ವಿಡಿಯೋ

ಮೋದಿ ಅವರ 2 ದಿನಗಳ ನೇಪಾಳ ಪ್ರವಾಸ

ಮೋದಿ ಅವರ 2 ದಿನಗಳ ನೇಪಾಳ ಪ್ರವಾಸ ಭಾನುವಾರ ಆರಂಭಗೊಂಡಿದೆ. ಮೋದಿ ಅವರ ಜೊತೆ ಭದ್ರತಾ ಸಲಹೆಗಾರ ಅಜಿತ್ ಡೊವೆಲ್, ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್ ಹಾಗೂ ಇನ್ನಿತರ ಹಿರಿಯ ಅಧಿಕಾರಿಗಳು ತೆರಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+