ನರೇಂದ್ರ ಮೋದಿ ಏಷ್ಯಾದ ವರ್ಷದ ವ್ಯಕ್ತಿ-2014

ನವದೆಹಲಿ, ಡಿ. 5 : ಭಾರತದ ಪ್ರಧಾನಿ ನರೇಂದ್ರ ಮೋದಿ 'ಏಷ್ಯಾದ ವರ್ಷದ ವ್ಯಕ್ತಿ' ಯಾಗಿ ಆಯ್ಕೆಯಾಗುವ ಮೂಲಕ ಮತ್ತೊಂದು ವಿಕ್ರಮ ಸಾಧಿಸಿದ್ದಾರೆ. ಸಿಂಗಪುರದ ಪತ್ರಿಕೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ಮೋದಿ ವರ್ಷದ ವ್ಯಕ್ತಿಯಾಗಿ ಶುಕ್ರವಾರ ಹೊರಹೊಮ್ಮಿದ್ದಾರೆ.

ಮೋದಿ ಭಾರತವನ್ನು ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತವನ್ನು ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಪತ್ರಿಕೆಯ ಸಂಪಾದಕ ವಾರೆನ್ ಫರ್ನಾಂಡೀಸ್ ಹೇಳಿದ್ದಾರೆ.[ಟೈಮ್ : ಮತ್ತೆ ಮೊದಲ ಸ್ಥಾನಕ್ಕೆ ಮೋದಿ ಜಿಗಿತ]

narendra modi

ಪ್ರತಿ ವರ್ಷ ನೀಡುವ ಈ ಪ್ರಶಸ್ತಿಯನ್ನು ಕಳೆದ ವರ್ಷ ಚೀನಾ ಅಧ್ಯಕ್ಷ ಕ್ಸಿ ಜಿಂಗ್‌ಪಿಂಗ್ ಹಾಗೂ ಜಪಾನಿನ ಪ್ರಧಾನಿ ಶಿನ್ಜೋ ಅಬೆ ಹಂಚಿಕೊಂಡಿದ್ದರು. ಅನೇಕ ಪತ್ರಿಕೆಗಳ ಸಂಪಾದಕರು ಸೇರಿ ವರ್ಷದ ವ್ಯಕ್ತಿಯನ್ನು ಆಯ್ಕೆ ಮಾಡುತ್ತಾರೆ.[ಗಣರಾಜ್ಯೋತ್ಸವ : ಸಿಮಿ, ಲಷ್ಕರ್ ದಾಳಿ ಸಾಧ್ಯತೆ]

ಪ್ರಶಸ್ತಿ ಆಯ್ಕೆಗೆ ಅನೇಕ ಮಾನದಂಡಗಳಿರುತ್ತವೆ. ಅಭಿವೃದ್ಧಿ, ಆರ್ಥಿಕತೆ ವೃದ್ಧಿ, ಜನಪ್ರಿಯತೆ, ಬದಲಾವಣೆ ತರುವ ಶಕ್ತಿ, ಹೊಸ ಹೊಸ ಅಭಿಯಾನಗಳು, ವಿದೇಶಗಳೊಡನೆ ಹೊಂದಿರುವ ಸಂಬಂಧ, ಚುನಾವಣೆ ವಿಜಯ, ಈ ರೀತಿ ಹತ್ತು ಹಲವು ವಿಚಾರಗಳನ್ನು ಲೆಕ್ಕ ಹಾಕಲಾಗುತ್ತದೆ. ಈ ಎಲ್ಲ ವಿಭಾಗಗಳಲ್ಲೂ ಮೋದಿ ಅತಿ ಹೆಚ್ಚು ಅಂಕ ಗಳಿಸಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+