ಕಪ್ಪು ಹಣ ವಾಪಸಾತಿಗೆ ಬೇಕು ಎಲ್ಲರ ಸಹಕಾರ: ಮೋದಿ
ಬ್ರಿಸ್ಬೇನ್, ನ. 16 : ಜಿ-20 ಶೃಂಗ ಸಭೆಯಲ್ಲಿ ಪಾಲ್ಗೊಂಡಿರುವ ನರೇಂದ್ರ ಮೋದಿ ಕಪ್ಪು ಹಣ ವಾಪಸಾತಿಗೆ ಸಂಬಂಧಿಸಿ ಎಲ್ಲ ದೇಶಗಳು ಸಹಕಾರ ನೀಡಬೇಕು ಎಂದು ಕೋರಿದ್ದಾರೆ.
ಭಾನುವಾರ ಸಭೆಯಲ್ಲಿ ಮಾತನಾಡಿದ ಮೋದಿ, ಕಪ್ಪು ಹಣ ವಾಪಸಾತಿಯ ಬಗೆಗಿನ ತಮ್ಮ ಸ್ಪಷ್ಟ ನಿಲುವನ್ನು ತಿಳಿಸಿದರು. ಭಯೋತ್ಪಾದನೆ, ಶಸ್ತ್ರಾಸ್ತ್ರ ಕಳ್ಳ ಸಾಗಣೆ ಮತ್ತು ಮಾದಕ ವಸ್ತು ಸಾಗಣೆ ನಿಯಂತ್ರಣದ ಬಗ್ಗೆ ಎಲ್ಲ ದೇಶಗಳು ಗಮನ ಹರಿಸಬೇಕು ಎಂದು ಕೋರಿದರು.[ತಪ್ಪು ನಕ್ಷೆ ತೋರಿಸಿ ಕ್ಷಮೆಯಾಚಿಸಿದ ಆಸ್ಟ್ರೇಲಿಯಾ]

ವಿಶ್ವದ ಆರ್ಥಿಕ ವ್ಯವಸ್ಥೆಯ ಪುನರ್ ನಿರ್ಮಾಣ ಕುರಿತು ಮಾತನಾಡಿದ ನರೇಂದ್ರ ಮೋದಿ, ಪರಸ್ಪರ ಸಹಕಾರದಿಂದ ಶಾಂತಿ ನೆಲೆಸಲು ಸಾಧ್ಯ. ಕೇವಲ ಕಪ್ಪು ಹಣ ವಾಪಸಾತಿಯೊಂದಕ್ಕೆ ಸಹಕಾರ ಕೇಳುತ್ತಿಲ್ಲ. ಉಳಿದ ಸಮಾಜ ವಿಧ್ವಂಸಕ ಕೃತ್ಯ ತಡೆಗೂ ಒಟ್ಟಾಗಿ ಹೋರಾಡಬೇಕು ಎಂದು ಹೇಳಿದರು.[ಕಪ್ಪು ಹಣː ಲಕೋಟೆ ಒಡೆಯುವ ಅಧಿಕಾರ ವಿಶೇಷ ತಂಡಕ್ಕೆ]
ಕಪ್ಪು ಹಣಕ್ಕೆ ಸಂಬಂಧಿಸಿ ದೇಶಗಳ ನಡುವಿನ ಸಂಬಂಧ ಹಾಳಾಗಬಾರದು. ಒಪ್ಪಂದಗಳಿಗೆ ಭಂಗ ಉಂಟಾಗಬಾರದು. ಈ ಬಗ್ಗೆ ಭಾರತದ ವಿದೇಶಾಂಗ ಇಲಾಖೆಗೆ ಸ್ಪಷ್ಟ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.












Click it and Unblock the Notifications