Breaking: ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಸಾವಿಗೆ ಮೋದಿ ಸಂತಾಪ
ನವದೆಹಲಿ, ಸೆಪ್ಟೆಂಬರ್ 9: ವಿಶ್ವದ ಅತ್ಯಂತ ಹಿರಿಯ ದೊರೆ ಬ್ರಿಟನ್‌ನ ರಾಣಿ ಎರಡನೇ ಎಲಿಜಬೆತ್ ಸಾವಿನ ಹಿನ್ನೆಲೆಯಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಏಳು ದಶಕಗಳ ಕಾಲ ಬ್ರಿಟನ್ ರಾಣಿಯಾಗಿದ್ದ ಎರಡನೇ ಎಲಿಜಬೆತ್, ಅತ್ಯಂತ ಸುದೀರ್ಘ ಅವಧಿಯವರೆಗೂ ದೇಶವನ್ನು ಆಳಿದ ವಿಶ್ವ ದಾಖಲೆಯನ್ನು ಹೊಂದಿದ್ದಾರೆ.
ಅವರ ಮೆಜೆಸ್ಟಿ ರಾಣಿ ಎಲಿಜಬೆತ್ II ನಮ್ಮ ಕಾಲದ ಧೀಮಂತ ಎಂದು ನೆನಪಿಸಿಕೊಳ್ಳುತ್ತಾರೆ. ಅವರು ತಮ್ಮ ರಾಷ್ಟ್ರ ಮತ್ತು ಜನರಿಗೆ ಸ್ಪೂರ್ತಿದಾಯಕ ನಾಯಕತ್ವವನ್ನು ನೀಡಿದರು. ಅವರು ಸಾರ್ವಜನಿಕ ಜೀವನದಲ್ಲಿ ಘನತೆ ಮತ್ತು ಸಭ್ಯತೆಯನ್ನು ನಿರೂಪಿಸಿದರು. ಅವರ ನಿಧನದಿಂದ ನೋವಾಗಿದೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ ಹಾಗೂ ಯುಕೆ ಜನರ ನೋವಿನಲ್ಲಿ ತಾವೂ ಸಹ ಭಾಗಿ ಆಗಿರುವುದಾಗಿ," ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಸೆಪ್ಟೆಂಬರ್ 8ರಂದು ಬ್ರಿಟನ್‌ನ ರಾಣಿ ಎರಡನೇ ಎಲಿಜಬೆತ್ ವೈದ್ಯಕೀಯ ಸ್ಥಿತಿ ಹದಗೆಟ್ಟಿದೆ ಎಂದು ವರದಿಯಾದ ಕೆಲವೇ ಗಂಟೆಗಳಲ್ಲಿ ಯುಕೆ ರಾಜಮನೆತನವು ಅವರ ಸಾವಿನ ಸುದ್ದಿಯನ್ನು ಪ್ರಕಟಿಸಿತು. "ರಾಣಿ ಇಂದು ಮಧ್ಯಾಹ್ನ ಬಲ್ಮೋರಲ್‌ನಲ್ಲಿ ನಿಧನರಾದರು. ರಾಜ ಮತ್ತು ರಾಣಿ ಇಂದು ಸಂಜೆ ಬಾಲ್ಮೋರಲ್‌ನಲ್ಲಿ ಉಳಿಯಲಿದ್ದು, ನಾಳೆ ಲಂಡನ್‌ಗೆ ಹಿಂತಿರುಗುತ್ತಾರೆ," ಎಂದು ರಾಜಮನೆತನ ಮಾಹಿತಿ ನೀಡಿದೆ.

ಬ್ರಿಟನ್ ಪ್ರವಾಸ ಸ್ಮರಿಸಿಕೊಂಡ ಪ್ರಧಾನಿ ಮೋದಿ:
2015 ಮತ್ತು 2018ರಲ್ಲಿ ನನ್ನ ಯುಕೆ ಭೇಟಿ ಸಮಯದಲ್ಲಿ ನಾನು ಹರ್ ಮೆಜೆಸ್ಟಿ ಕ್ವೀನ್ ಎಲಿಜಬೆತ್ II ಅವರೊಂದಿಗೆ ಸ್ಮರಣೀಯ ಸಭೆಗಳನ್ನು ನಡೆಸಿದ್ದೇನೆ. ನಾನು ಅವರ ಪ್ರೀತಿ ಮತ್ತು ದಯೆಯನ್ನು ಎಂದಿಗೂ ಮರೆಯುವುದಿಲ್ಲ. ಅಂದಿನ ಸಭೆಯೊಂದರಲ್ಲಿ ಅವರು ಮಹಾತ್ಮ ಗಾಂಧಿಯವರು ತಮ್ಮ ಮದುವೆಗೆ ಉಡುಗೊರೆಯಾಗಿ ನೀಡಿದ ಕರವಸ್ತ್ರವನ್ನು ನನಗೆ ತೋರಿಸಿದರು. ನಾನು ಯಾವಾಗಲೂ ಆ ಸೂಚಕವನ್ನು ಗೌರವಿಸುತ್ತೇನೆ," ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.












Click it and Unblock the Notifications