ಚಿತ್ರಗಳು: ವಿಯೆಟ್ನಾಂನಲ್ಲಿ ಪ್ರಧಾನಿ ನರೇಂದ್ರ ಮೋದಿ
ವಿಯೆಟ್ನಾಂ, ಸೆಪ್ಟೆಂಬರ್, 03: ವಿಯೆಟ್ನಾಂಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ 12 ಒಪ್ಪಂದಗಳಿಗೆ ಸಹಿ ಮಾಡಿದ್ದು ಆಗ್ನೇಯ ಏಷ್ಯಾ ರಾಷ್ಟ್ರಕ್ಕೆ ರಕ್ಷಣಾ ವಲಯದಲ್ಲಿ 500 ಮಿಲಿಯನ್ ಡಾಲರ್ ನೆರವು ನೀಡುವುದಾಗಿ ಹೇಳಿದ್ದಾರೆ.
ಸೆಪ್ಟೆಂಬರ್ 4ರಂದು ಚೀನಾದಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಪ್ರಯಾಣ ಬೆಳಸಿರುವ ಪ್ರಧಾನಿ ನರೇಂದ್ರ ಮೋದಿ ಅವರು 2 ದಿನಗಳ ವಿಯೆಟ್ನಾಂ ಪ್ರವಾಸ ಮುಗಿಸಿದ್ದಾರೆ.[ಮೋದಿಯನ್ನು 'ಮಿಸ್ಟರ್ ರಿಲಯನ್ಸ್' ಎಂದ ದೆಹಲಿ ಸಿಎಂ ಕೇಜ್ರಿವಾಲ್]
ಶನಿವಾರ ವಿಯೆಟ್ನಾಂಗೆ ಭೇಟಿ ನೀಡಿದ ಮೋದಿ ದ್ವಿಪಕ್ಷೀಯ ಬಾಂಧವ್ಯಕ್ಕೆ ಈ ಭೇಟಿ ಮತ್ತಷ್ಟು ಸಹಕಾರವಾಗಲಿದೆ ಎಂದು ಹೇಳಿದರು. 15 ವರ್ಷಗಳ ಬಳಿಕ ವಿಯೆಟ್ನಾಂಗೆ ಭೇಟಿ ನೀಡಿದ ಪ್ರಧಾನಿ ಎಂಬ ಗೌರವಕ್ಕೆ ಮೋದಿ ಪಾತ್ರರಾದರು.

ಮೋದಿಗೆ ಗೌರವ
ಪಗೋಡಾ ದೇವಾಲಯಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅದ್ದೂರಿ ಸ್ವಾಗತ.

ದೇವಾಲಯಕ್ಕೆ ಭೇಟಿ
ನರೇಂದ್ರ ಮೋದಿ ಹನೋಯ್ ಪಗೋಡಾ ದೇವಾಲಯಕ್ಕೆ ಭೇಟಿ ನೀಡಿದ್ದರು.

ಸೌಹಾರ್ದ ಭೇಟಿ
ವಿಯೆಟ್ನಾಂ ನ ನ್ಯಾಶನಲ್ ಅಸೆಂಬ್ಲಿ ಅಧ್ಯಕ್ಷೆ ಥಿ ಕಿಮ್ ನಗನ್ ಅವರನ್ನು ಭೇಟಿ ಮಾಡಿದರು.

ಮೋದಿಗೆ ಗೌರವ
ಪಗೋಡಾ ದೇವಾಲಯಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೌದ್ಧ ಸನ್ಯಾಸಿಗಳು ಗೌರವಿಸಿದರು.












Click it and Unblock the Notifications