PM Modi US Visit: ಅಮೆರಿಕಾ ರೆಸ್ಟೋರೆಂಟ್‌ನಲ್ಲಿ 'ಮೋದಿ ಜೀ ಥಾಲಿ' ಹೆಸರಿನ ಭಾರತೀಯ ಆಹಾರ ಸಿದ್ಧ!

ಪ್ರಧಾನಿ ನರೇಂದ್ರ ಮೋದಿಯವರು ಅಮೇರಿಕಾ ಭೇಟಿಗೂ ಮುನ್ನ ನ್ಯೂಜೆರ್ಸಿ ರೆಸ್ಟೊರೆಂಟ್‌ 'ಮೋದಿ ಜಿ ಥಾಲಿ' ಎಂಬ ವಿಶೇಷ ಭಾರತೀಯ ಖಾದ್ಯವನ್ನು ಬಿಡುಗಡೆ ಮಾಡಿದೆ. ಭಾರತೀಯ ಮೂಲದ ರೆಸ್ಟೋರೆಂಟ್ ಮಾಲೀಕ ಶ್ರೀಪಾದ್ ಕುಲಕರ್ಣಿ ಈ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಅಲ್ಲಿ ವಾಸಿಸುವ ಭಾರತೀಯ ಸಮುದಾಯದ ಬೇಡಿಕೆಯ ಮೇರೆಗೆ ಮೋದಿ ಜಿ ಥಾಲಿಯನ್ನು ವಿಶೇಷವಾಗಿ ತಯಾರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಶ್ರೀಪಾದ್ ಕುಲಕರ್ಣಿ ರಚಿಸಿದ ಈ 'ಮೋದಿ ಜಿ ಥಾಲಿ' ಭಾರತದ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ವೈವಿಧ್ಯಮಯ ಭಕ್ಷ್ಯಗಳನ್ನು ಒಳಗೊಂಡಿದೆ. ಇದರಲ್ಲಿ ಖಿಚಡಿ, ರಸಗುಲ್ಲಾ, ಕಾಶ್ಮೀರಿ ದಮ್ ಆಲೂ, ಇಡ್ಲಿ, ಡೋಕ್ಲಾ, ಸಾಚ್ ಮತ್ತು ಅಪ್ಪಳ ಹೀಗೆ ವಿವಿಧ ಭಕ್ಷ್ಯಗಳಿವೆ.

PM Modi US Visit news in Kannada

ಭಾರತ ಸರ್ಕಾರದ ಶಿಫಾರಸಿನ ಮೇರೆಗೆ ವಿಶ್ವಸಂಸ್ಥೆಯು 2023 ಅನ್ನು ಅಂತರರಾಷ್ಟ್ರೀಯ ಸಣ್ಣ ಧಾನ್ಯಗಳ ವರ್ಷ ಎಂದು ಘೋಷಿಸಿತು. ಈ ಸಾಧನೆಯನ್ನು ಮೆಲುಕು ಹಾಕಲು ಹಾಗೂ ಕಿರುಧಾನ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಶ್ರೀಪಾದ್ ಕುಲಕರ್ಣಿ ಅವರ ರೆಸ್ಟೊರೆಂಟ್ ನಲ್ಲಿ ಕಿರುಧಾನ್ಯಗಳನ್ನು ಬಳಸಿ ತಯಾರಿಸಿದ ಖಾದ್ಯಗಳನ್ನು ನೀಡಲಾಗುತ್ತಿದೆ.

ಜೊತೆಗೆ ವಿದೇಶಾಂಗ ಸಚಿವ ಜೈಶಂಕರ್ ಅವರ ಹೆಸರಿನ ಮತ್ತೊಂದು ವಿಶೇಷ ಭಾರತೀಯ ಖಾದ್ಯವನ್ನು ಶೀಘ್ರದಲ್ಲೇ ಪರಿಚಯಿಸುವುದಾಗಿ ರೆಸ್ಟೋರೆಂಟ್ ಮಾಲೀಕ ಶ್ರೀಪಾದ್ ಹೇಳಿದ್ದಾರೆ. "ಮೋದಿಜಿ ಥಾಲಿ ಜನಪ್ರಿಯವಾಗುವುದು ಖಚಿತ ಎಂದು ನನಗೆ ಖಾತ್ರಿಯಿದೆ. ಇದಾದ ನಂತರ ಡಾ. ಜೈಶಂಕರ್ ಥಾಲಿಯನ್ನು ಪ್ರಾರಂಭಿಸಲು ನಾವು ಯೋಜಿಸುತ್ತಿದ್ದೇವೆ. ಏಕೆಂದರೆ ಅವರು ಭಾರತೀಯ ಅಮೆರಿಕನ್ ಸಮುದಾಯದಲ್ಲಿ ರಾಕ್‌ಸ್ಟಾರ್ ಆಕರ್ಷಣೆಯನ್ನು ಹೊಂದಿದ್ದಾರೆ" ಎಂದು ಅವರು ಹೇಳುತ್ತಾರೆ.

56 ಇಂಚಿನ ನರೇಂದ್ರ ಮೋದಿ ಥಾಲಿ

ಪ್ರಧಾನಿ ಮೋದಿ ಹೆಸರಿನಲ್ಲಿ ರೆಸ್ಟೋರೆಂಟ್‌ನಲ್ಲಿ ವಿಶೇಷ ಆಹಾರ ನೀಡುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಸೆಪ್ಟೆಂಬರ್ 17 ರಂದು ಪ್ರಧಾನಿ ಮೋದಿ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ದೆಹಲಿಯ ರೆಸ್ಟೋರೆಂಟ್ 56 ಇಂಚಿನ ನರೇಂದ್ರ ಮೋದಿ ಥಾಲಿ ಎಂಬ ವಿಶೇಷ ಊಟವನ್ನು ನೀಡಿತು. ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿರುವ ಈ ರೆಸ್ಟೊರೆಂಟ್‌ನಲ್ಲಿ ಮೋದಿಯವರ ಹೆಸರಿನಲ್ಲಿ 56 ಕೋರ್ಸುಗಳ ಊಟವನ್ನು ನೀಡಲಾಯಿತು. ಇದು ಗ್ರಾಹಕರಿಗೆ ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಯ್ಕೆಯನ್ನು ಸಹ ನೀಡಿದೆ.

PM Modi Thali

ರೆಸ್ಟೋರೆಂಟ್‌ನ ಮಾಲೀಕ ಸುಮಿತ್ ಕಲಾರ ಮಾತನಾಡಿ, "ನನಗೆ ಪ್ರಧಾನಿ ಮೋದಿ ಅವರ ಬಗ್ಗೆ ಅಪಾರ ಗೌರವವಿದೆ. ಅವರು ನಮ್ಮ ರಾಷ್ಟ್ರದ ಹೆಮ್ಮೆ. ಅವರ ಜನ್ಮದಿನದಂದು ನಾವು ಅವರಿಗೆ ವಿಶಿಷ್ಟವಾದದ್ದನ್ನು ಉಡುಗೊರೆಯಾಗಿ ನೀಡಲು ಬಯಸಿದ್ದೇವೆ. ಆದ್ದರಿಂದ ನಾವು ಈ ಖಾದ್ಯವನ್ನು ಪರಿಚಯಿಸಲು ನಿರ್ಧರಿಸಿದ್ದೇವೆ. ನಾವು ಅದಕ್ಕೆ '56 ಇಂಚಿನ ಮೋದಿ ಜಿ' ಥಾಲಿ ಎಂದು ಹೆಸರಿಟ್ಟಿದ್ದೇವೆ. ಅವರು ನಮ್ಮ ರೆಸ್ಟೋರೆಂಟ್‌ಗೆ ಬಂದು ಈ ಖಾದ್ಯವನ್ನು ಸವಿಯಲು ಬಯಸುತ್ತೇವೆ. ಆದರೆ ಭದ್ರತಾ ಕಾರಣಗಳಿಂದ ನಾವು ಅದನ್ನು ಮಾಡಲು ಸಾಧ್ಯವಿಲ್ಲ, ಆದರೆ ಅವರನ್ನು ಪ್ರೀತಿಸುವ ಅವರ ಎಲ್ಲಾ ಅಭಿಮಾನಿಗಳು ಇದನ್ನು ಖಂಡಿತ ರುಚಿ ನೋಡುತ್ತಾರೆಂದು ನಾನು ಭಾವಿಸುತ್ತೇನೆ' ಎಂದಿದ್ದರು.

ಪ್ರಧಾನಿ ಮೋದಿಯವರ ಅಮೇರಿಕಾ ಭೇಟಿ

ಅಧ್ಯಕ್ಷ ಜೋ ಬಿಡೆನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಜೂನ್‌ನಲ್ಲಿ ತಮ್ಮ ಮೊದಲ ಅಧಿಕೃತ ಭೇಟಿಗಾಗಿ ಯುಎಸ್‌ಗೆ ಭೇಟಿ ನೀಡಲಿದ್ದಾರೆ. ಜೂನ್ 22 ರಂದು ಅಮೆರಿಕ ಅಧ್ಯಕ್ಷರೊಂದಿಗೆ ಶ್ವೇತಭವನದಲ್ಲಿ ಪ್ರಧಾನಿ ಮೋದಿ ಅವರಿಗೆ ರಾಜ್ಯ ಭೋಜನವನ್ನು ಏರ್ಪಡಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿಯ ಸಮಯದಲ್ಲಿ ಎರಡನೇ ಬಾರಿಗೆ ಯುಎಸ್ ಕಾಂಗ್ರೆಸ್‌ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವ ಮೊದಲ ಭಾರತೀಯ ಪ್ರಧಾನಿಯಾಗಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+