ಶಾಂಘೈ ಸಭೆಗೂ ಮುನ್ನ ಜಿನ್ ಪಿಂಗ್ ಭೇಟಿಯಾದ ಮೋದಿ

ಬೀಜಿಂಗ್, ಜೂನ್ 10: 'ಶಾಂಘೈ ಸಹಕಾರ ಸಂಸ್ಥೆ'ಯ ಸಭೆಯಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭೇಟಿಯಾಗಿದ್ದಾರೆ.

ಚೀನಾದ ಕರಾವಳಿ ನಗರ ಕ್ವಿಂಡಾವೋದಲ್ಲಿ ಶಾಂಘೈ ಸಹಕಾರ ಸಂಸ್ಥೆಯ ಸಭೆ ನಡೆಯಲಿದ್ದು, ಅದಕ್ಕೂ ಮೊದಲು ಇಂದು ಮುಂಜಾನೆ ಉಭಯ ನಾಯಕರು ಭೇಟಿಯಾಗಿ ಕೈಕುಲುಕಿದರು.

ಈ ಸಭೆಯಲ್ಲಿ ಭಾಗವಹಿಸಲೆಂದೇ ಮೋದಿ ಶನಿವಾರ ಸಂಜೆ ಕ್ವಿಂಡಾವೋಗೆ ಬಂದಿಳಿದಿದ್ದರು. 2017ರ ನಂತರ ನಡೆಯುತ್ತಿರುವ ಮೊದಲ 'ಶಾಂಘೈ ಸಹಕಾರ ಸಂಸ್ಥೆ'ಯ ಸಭೆ ಇದಾಗಿದೆ. 2017ರಲ್ಲಿ ಭಾರತ ಮತ್ತು ಪಾಕಿಸ್ತಾನವನ್ನು ಈ ಶಾಂಘೈ ಸಹಕಾರ ಸಂಸ್ಥೆಯ ಖಾಯಂ ಸದಸ್ಯರನ್ನಾಗಿ ನೇಮಿಸಲಾಗಿತ್ತು.

PM Modi meets Xi ahead of SCO summit

ಇಂದಿನ ಸಭೆಯಲ್ಲಿ ಶಾಂಘೈ ಸಹಕಾರ ಸಂಸ್ಥೆಯ ಸದಸ್ಯರು ಕ್ವಿಂಡಾವೋ ಘೋಷಣೆಗೆ ಸಹಿ ಹಾಕಲಿದ್ದಾರೆ. ಜೊತೆಗೆ ಭದ್ರತೆ, ಆರ್ಥಿಕ ಸಹಕಾರ ಸೇರಿದಂತೆ ಹಲವು ಒಪ್ಪಂದಗಳಿಗೂ ಸಹಿ ಹಾಕಲಿದ್ದಾರೆ.

ಪ್ರಾದೇಶಿಕ ಸಹಕಾರ ವೃದ್ಧಿ, ರಾಷ್ಟ್ರಗಳ ಭದ್ರತೆಗೆ ತೆಗೆದುಕೊಳ್ಳಬೇಕಾದ ಸುರಕ್ಷಿತ ಕ್ರಮಗಳ ಬಗ್ಗೆಯೂ ನಾಯಕರು ಚರ್ಚೆಗಳನ್ನು ನಡೆಸಲಿದ್ದಾರೆ.

17 ವರ್ಷಗಳ ಹಿಂದೆ ಈ ಶಾಂಘೈ ಸಹಕಾರ ಸಂಸ್ಥೆಯನ್ನು ಹುಟ್ಟುಹಾಕಲಾಗಿತ್ತು. ಇವತ್ತು ಈ ಸಹಕಾರ ಸಂಸ್ಥೆ ಜಾಗತಿಕ ಜನಸಂಖ್ಯೆಯ ಅರ್ಧದಷ್ಟನ್ನು ಒಳಗೊಳ್ಳುತ್ತದೆ ಮತ್ತು ಜಾಗತಿಕ ಜಿಡಿಪಿಯ ಶೇಕಡಾ 20 ಪಾಲು ಇದೇ ರಾಷ್ಟ್ರಗಳಿಂದ ಬರುತ್ತದೆ. ಇದು ವಿಶ್ವದ ಅತೀ ದೊಡ್ಡ ಪ್ರಾದೇಶಿಕ ಸಂಘಟನೆಯೂ ಹೌದು.

ಇಂದು ಪ್ರಧಾನಿ ಈ ಸಭೆಯಲ್ಲಿ ಭಾವಹಿಸಿ ನಂತರ ಸಂಜೆ ಕ್ವಿಂಡಾವೋದಿಂದ ಎಸ್ಎಫ್ಎಸ್ ಪಲಾಮ್ ತಲುಪಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+