ಹಸ್ತಪ್ರತಿ ಕೊಟ್ಟು ಕುದುರೆ ಪಡೆದ ನರೇಂದ್ರ ಮೋದಿ
ಉಲಾನ್ ಬಟರ್, ಮೇ.17: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಮಂಗೋಲಿಯಾದ ಅಧ್ಯಕ್ಷ ತ್ಸಖಿಯಾಗಿನ್ ಎಲ್ಬೆಗ್ದೊರ್ಜ್ ಅವರಿಗೆ ವಿಶೇಷ ಉಡುಗೊರೆ ಕೊಟ್ಟಿದ್ದಾರೆ. 13ನೇ ಶತಮಾನದ ಹಸ್ತಪ್ರತಿಯನ್ನು ಉಡುಗೊರೆ ನೀಡಿದ ಮೋದಿ ಅವರಿಗೆ ಮುದ್ದಾದ ಕುದುರೆ ಪ್ರತಿಯಾಗಿ ಸಿಕ್ಕಿದೆ.
13ನೇ ಶತಮಾನದ ಮಂಗೋಲ್ ಚರಿತ್ರೆ ಸಾರುವ ಹಸ್ತಪ್ರತಿ ರಾಮಪುರದ ರಾಜಾ ಗ್ರಂಥಾಲಯದಿಂದ ಪಡೆಯಲಾಗಿದೆ. 80ಕ್ಕೂ ಅಧಿಕ ಪುಟ್ಟ ದೃಷ್ಟಾಂತಗಳನ್ನು ಒಳಗೊಂಡ ಅಮೂಲ್ಯ ರಚನೆ ಇದಾಗಿದೆ. ಜಮಾಯಿತ್ ತವಾರಿಖ್ ಎಂದು ಕರೆಯಲಾಗುವ ಈ ಯೋಜನೆ ಬಗ್ಗೆ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಮೋದಿ ಅವರು ವಿವರಣೆ ನೀಡಿದ್ದಾರೆ.[ಮಂಗೋಲಿಯಾ ಸಂಸತ್ತಿನಲ್ಲಿ ಮೋದಿ ಭಾಷಣ]
ಇದಕ್ಕೆ ಬದಲಾಗಿದೆ ನರೇಂದ್ರ ಮೋದಿ ಅವರಿಗೆ ಮಂಗೋಲಿಯಾ ಸರ್ಕಾರ ಮುದ್ದಾದ ಕುದುರೆಯನ್ನು ಗಿಫ್ಟ್ ಆಗಿ ನೀಡಿದೆ. ಉಲಾನ್ ಬಟರ್ ನಲ್ಲಿ ನಡೆದ ಮಿನಿ ನಾದಾಮ್ ಹಬ್ಬದಲ್ಲಿ ಪಾಲ್ಗೊಂಡ ಮೋದಿ ಆವರು ಮಂಗೋಲಿಯಾ ಸಾಂಪ್ರದಾಯಿಕ ಉಡುಪು ತೊಟ್ಟು ಅಲ್ಲಿನ ಸಂಗೀತವಾದ್ಯಗಳನ್ನು ನುಡಿಸಿದರು.[ಮಂಗೋಲಿಯಾದಲ್ಲಿ ಅಮುಲ್ ಸ್ಥಾಪನೆ]

13ನೇ ಶತಮಾನದ ಹಸ್ತಪ್ರತಿ
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಮಂಗೋಲಿಯಾದ ಅಧ್ಯಕ್ಷ ತ್ಸಖಿಯಾಗಿನ್ ಎಲ್ಬೆಗ್ದೊರ್ಜ್ ಅವರಿಗೆ ವಿಶೇಷ ಉಡುಗೊರೆ ಕೊಟ್ಟಿದ್ದಾರೆ. 13ನೇ ಶತಮಾನದ ಹಸ್ತಪ್ರತಿಯನ್ನು ಉಡುಗೊರೆ ನೀಡಿದರು.

ಮುದ್ದಾದ ಕುದುರೆ ಗಿಫ್ಟ್
ನರೇಂದ್ರ ಮೋದಿ ಅವರಿಗೆ ಮಂಗೋಲಿಯಾ ಸರ್ಕಾರ ಮುದ್ದಾದ ಕುದುರೆಯನ್ನು ಗಿಫ್ಟ್ ಆಗಿ ನೀಡಿದೆ. PTI Photo by Shahbaz Khan
|
ಹಸ್ತಪ್ರತಿ ಬಗ್ಗೆ ಮೋದಿಯಿಂದ ವಿವರಣೆ
ವಜೀರ್ ರಶೀದುದ್ದೀನ್ ಫಜುಲುಲ್ಲಾ ಹಮೀದಾನಿ ಪರ್ಷಿಯನ್ ನಲ್ಲಿ ಬರೆದ ದೃಷ್ಟಾಂತಗಳು

ಮಂಗೋಲಿಯಾ ಸಂಸತ್ತಿನಲ್ಲಿ ಭಾಷಣ
ಮಂಗೋಲಿಯಾ ಸಂಸತ್ತಿನಲ್ಲಿ ಕಮಲವಿರುವ ಚಿನ್ಹೆ ಕಂಡು ಭಾರತದ ಪ್ರಧಾನಿ ಮೋದಿ ಅವರ ಮುಖರಾವಿಂದ ಅರಳಿದೆ. ಪೂರ್ವ ದೇಶಗಳ ಕುರಿತಂತೆ ಭಾರತ ತೆಗೆದುಕೊಂಡಿರುವ ಯೋಜನೆಗಳಲ್ಲಿ ಮಂಗೋಲಿಯಾವು ಅವಿಭಾಜ್ಯ ಅಂಗವಾಗಿದೆ. ಮಂಗೋಲಿಯಾ ಅಭಿವೃದ್ಧಿಗೆ ಭಾರತ ಸದಾ ಸಿದ್ಧ ಎಂದು ಮೋದಿ ಅವರು ಸಂಸತ್ತಿನಲ್ಲಿ ಭಾಷಣ

ಮಂಗೋಲಿಯಾದ ಸಂಸ್ಕೃತಿ ತುಂಬಾ ಪುರಾತನ
ಉಭಯ ರಾಷ್ಟ್ರಗಳ ಆರ್ಥಿಕ ಅಭಿವೃದ್ಧಿ, ಶಾಂತಿ ಸ್ಥಾಪನೆ, ರಾಜಕೀಯ ಸ್ಥಿರತೆಗಳಿಗೆ ಪರಸ್ಪರ ಮುಕ್ತ ಸಹಕಾರ ಅನಿವಾರ್ಯವಾಗಿದೆ. ಭಾರತ ಮತ್ತು ಮಂಗೋಲಿಯಾದ ಸಂಸ್ಕೃತಿ ತುಂಬಾ ಪುರಾತನವಾಗಿದೆ.

ಚೀನಾದಂತೆ ಮಂಗೋಲಿಯಾದ ದೇಗುಲಕ್ಕೂ ಭೇಟಿ
ಚೀನಾದಂತೆ ಮಂಗೋಲಿಯಾದ ಪ್ರಮುಖ ಬೌದ್ಧ ಕ್ಷೇತ್ರಗಳಿಗೆ ಭೇಟಿ ನೀಡಿ ಬೋಧಿ ವೃಕ್ಷದ ಸಸಿಯನ್ನು ಉಡುಗೊರೆಯಾಗಿ ನೀಡಿದರು. ನಂತರ ಬಾಲ ಭಿಕ್ಷುಗಳ ಜೊತೆ ಫೋಟೊ ತೆಗೆಸಿಕೊಂಡರು.

14 ಮಹತ್ವದ ಒಪ್ಪಂದಗಳಿಗೆ ಸಹಿ
ಆರ್ಥಿಕ ವಲಯ ಹಾಗೂ ಮೂಲ ಸೌಕರ್ಯ ವ್ಯವಸ್ಥೆ ಕಲ್ಪಿಸಲು ಭಾರತ 1 ಬಿಲಿಯನ್ ಡಾಲರ್ ನೀಡುವುದಾಗಿ ಮೋದಿ ಹೇಳಿದರು. ಭಾರತ ಹಾಗೂ ಮಂಗೋಲಿಯಾ ನಡುವೆ 14 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.

ಮಂಗೋಲಿಯಾ ನಂತರ ದಕ್ಷಿಣ ಕೊರಿಯಾಕ್ಕೆ
ಮಂಗೋಲಿಯಾ ನಂತರ ದಕ್ಷಿಣ ಕೊರಿಯಾಕ್ಕೆ ತೆರಳಲಿರುವ ಮೋದಿ ಅವರು ಎರಡು ದಿನಗಳ ಕಾಲ ಹಲವು ಮಹತ್ವದ ಚರ್ಚೆ, ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.












Click it and Unblock the Notifications