• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಕೊಡುಗೆ: ಮಂಗೋಲಿಯಾದಲ್ಲಿ ಅಮುಲ್ ಸ್ಥಾಪನೆ

By Mahesh
|
Google Oneindia Kannada News

ಮಂಗೋಲಿಯಾ, ಮೇ.17: ಮೊಟ್ಟ ಮೊದಲ ಬಾರಿಗೆ ಮಂಗೋಲಿಯಾಕ್ಕೆ ಕಾಲಿಟ್ಟಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭರಪೂರ ಕೊಡುಗೆಗಳನ್ನು ಘೋಷಿಸಿದ್ದಾರೆ. ಈ ಪೈಕಿ ಅಮುಲ್ ಮಾದರಿ ಹಾಲಿನ ಕೇಂದ್ರ ಸ್ಥಾಪನೆ ಪ್ರಮುಖವಾಗಿದೆ. ಸುಮಾರು ಒಂದು ಬಿಲಿಯನ್ ಡಾಲರ್ ನೆರವು ಭಾರತದಿಂದ ಮಂಗೋಲಿಯಾಕ್ಕೆ ಸಿಗಲಿದೆ.

ಉದ್ಯೋಗ, ವ್ಯಾಪಾರ, ಆರ್ಥಿಕ ವಲಯ ಸೇರಿದಂತೆ ಅನೇಕ ಕ್ಷೇತ್ರಗಳಿಗೆ ಸಂಬಂಧಿಸಿದಂತೆ 29 ಒಪ್ಪಂದಗಳಿಗೆ ಸಹಿ ಬಿದ್ದಿದೆ. ಉಲಾನ್ ಬಟೋರ್ ನಲ್ಲಿ ಮೋದಿ ಅವರು ಮಂಗೋಲಿಯಾಕ್ಕೆ ಎಲ್ಲಾ ರೀತಿಯ ಆರ್ಥಿಕ ಸಹಕಾರ ನೀಡುವುದಾಗಿ ಹೇಳಿದರು. ಉಲಾನ್ ಬಟೋರ್ ನಲ್ಲಿರುವ ಬೌದ್ಧ ಧಾರ್ಮಿಕ ಮಂದಿರ ಗಂದಾನ್ ತೆಗ್ ಚಿನ್ ಲೆಂಗ್ ಗೆ ಭೇಟಿ ನೀಡಿದರು.

ಭಾರತ ಹಾಗೂ ಮಂಗೋಲಿಯಾ ನಡುವೆ ಹಲವು ವರ್ಷಗಳ ಬಾಂಧವ್ಯವಿದೆ. ಇದು ಆಧ್ಯಾತ್ಮಿಕ ನೆಲೆಯಾಗಿದ್ದು, ಇಲ್ಲಿಗೆ ಕಾಲಿಟ್ಟ ಭಾರತದ ಮೊದಲ ಪ್ರಧಾನಿ ಎಂಬ ಹೆಮ್ಮೆಯಿದೆ ಎಂದು ಮೋದಿ ಹೇಳಿದ್ದಾರೆ.

ಕಳೆದ ತಿಂಗಳು ಗುಜರಾತ್ ಸಹಕಾರಿ ಹಾಲು ಉತ್ಪಾದಕರ ಫೆಡೆರೇಷನ್(ಜಿಸಿಎಂಎಂಎಫ್) ಅಧಿಕಾರಿಗಳು ಮಂಗೋಲಿಯಾಕ್ಕೆ ಭೇಟಿ ನೀಡಿ ಹಾಲು ಉತ್ಪಾದಕ ಘಟಕ ಸ್ಥಾಪನೆ ಬಗ್ಗೆ ಮಾತುಕತೆ ನಡೆಸಿ, ಪರಿಶೀಲನೆ ನಡೆಸಿದ್ದರು.

ಹಾಲು ಉತ್ಪಾದನೆಗಾಗಿ ಉಲನ್ ಬಟೋರ್ ಹಾಗೂ ದರ್ಖಾನ್ ನಗರ, ಬಯಾನ್ಖೊಂಗೊರ್ ಹಾಗೋ ಓವರ್ ಖಾನ್ ಗೈ ನಗರಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಜಿಸಿಎಂಎಂಎಫ್ ನ ವ್ಯವಸ್ಥಾಪಕ ನಿರ್ದೇಶಕ ಆರ್ ಎಸ್ ಸೋಧಿ ಹೇಳಿದ್ದಾರೆ.

ನಗರವಾಸಿಗಳೇ ಹೆಚ್ಚಾಗಿರುವ ಮಂಗೋಲಿಯಾಕ್ಕೆ ಗ್ರಾಮೀಣ ಉತ್ಪನ್ನಗಳು, ಹೈನುಗಾರಿಕೆಯ ಪರಿಚಯ ಮಾಡಿಕೊಡಲು ಮೋದಿ ಸರ್ಕಾರ ಮುಂದಾಗಿದೆ. ಮಂಗೋಲಿಯಾದಲ್ಲಿ ರಾಸುಗಳ ಸಂಖ್ಯೆ ಐದು ಕೋಟಿ ಮೀರುತ್ತದೆ. ಹೀಗಾಗಿ ಹೈನುಗಾರಿಕೆಯಲ್ಲಿ ವಿಫುಲ ಅವಕಾಶಗಳಿವೆ ಎಂದು ಸೋಧಿ ಹೇಳಿದ್ದಾರೆ.

ಮಂಗೋಲಿಯಾ ಪ್ರವಾಸದ ನಂತರ ನರೇಂದ್ರ ಮೋದಿ ಅವರು ಮೇ. 18 ಹಾಗೂ 19 ರಂದು ದಕ್ಷಿಣ ಕೊರಿಯಾ ಪ್ರವಾಸ ಕೈಗೊಳ್ಳಲಿದ್ದಾರೆ. ಕೊರಿಯಾ ರಿಪಬ್ಲಿಕ್ ಅಧ್ಯಕ್ಷ ಪಾರ್ಕ್ ಜೊತೆ ಮಾತುಕತೆ ಹಾಗೂ ಪ್ರಮುಖ ಉದ್ದಿಮೆದಾರರ ಜೊತೆ ಚರ್ಚೆ ನಿಗದಿಯಾಗಿದೆ. (ಒನ್ ಇಂಡಿಯಾ ಸುದ್ದಿ)

English summary
When Prime Minister Narendra Modi visits Ulan Bator on Sunday, he will be taking along with him the 'Taste of India' to Mongolia. Amul - India's best known food brand - is all set to help Mongolia develop its dairy sector based on the Amul model of cooperatives.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X