ಜಪಾನಿನಲ್ಲಿ ಜಿ20 ಶೃಂಗಸಭೆ: ಟ್ರಂಪ್ ರನ್ನು ಭೇಟಿಯಾಗಲಿರುವ ಮೋದಿ

ಒಸಾಕಾ(ಜಪಾನ್), ಜೂನ್ 27: ಜಪಾನಿನ ಒಸಾಕಾದಲ್ಲಿ ಜೂನ್ 28-29 ರಂದು ನಡೆಯಲಿರುವ ಜಿ 20 ಶೃಂಗ ಸಭೆಯಲ್ಲಿ ಭಾಗವ ಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಬೆಳಿಗ್ಗೆ ಜಪಾನಿಗೆ ತೆರಳಿದ್ದಾರೆ.

ಈ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ವಿಶ್ವದ ಹಲವು ಗಣ್ಯರನ್ನು ಭೇಟಿಯಾಗಲಿದ್ದಾರೆ.

PM Modi arrives in Japan to attend G20 summit meetng

ಮಹಿಳಾ ಸಬಲೀಕರಣ, ಆರ್ಟಿಫಿಶಿಯಲ್ ಇಂಟೆಲಿಜನ್ಸ್ ಮತ್ತು ಬಹಳ ಮುಖಕ್ಯವಾಗಿ ಭಯೋತ್ಪಾದನೆಯನ್ನು ಹತ್ತಿಕ್ಕಲು ಒಗ್ಗಟ್ಟಿನ ನಿರ್ಣಯಗಳ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಗುತ್ತಿದೆ ಎಂದು ಜಪಾನಿಗೆ ಹೊರಡುವ ಮುನ್ನ ನವದೆಹಲಿಯಲ್ಲಿ ನರೇಂದ್ರ ಮೋದಿ ತಿಳಿಸಿದರು.

ಕಳೆದ ಐದು ವರ್ಷಗಳಲಲ್ಲಿ ಭಾರತ ಸಾಧಿಸಿದ ಅಭಿವೃದ್ಧಿಯ ಬಗ್ಗೆ ವಿವರಿಸಲೂ ಈ ಸಭೆ ವೇದಿಕೆಯಾಗಲಿದೆ ಎಂದ ಮೋದಿ, ಭಾರತದ ಮತದಾರರು ಈ ಬಾರಿ ಇಂಥ ಜನಾದೇಶ ನೀಡಲು ಆ ಅಭಿವೃದ್ಧಿಯೇ ಕಾರಣ ಎಂದರು.

ನಮ್ಮ ಪಾಲುದಾರ ದೇಶಗಳೊಂದಿಗೆ ದ್ವಿಪಕ್ಷೀಯ ಮಾತುಕತೆ ಮತ್ತು ಜಾಗತಿಕ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಲಿದ್ದೇನೆ. ಅಷ್ಟೇ ಅಲ್ಲ ಮುಂದಿನ ಆರ್ ಐಸಿ(ರಷ್ಯಾ, ಭಾರತ ಮತ್ತು ಚೀನಾ) ಅನೌಪಚಾರಿಕ ಸಮಿತಿ, ಬ್ರಿಕ್ಸ್(ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕ) ಸಮಿತಿ, ಜೈ(ಅಪಾನ್, ಅಮೆರಿಕ ಮತ್ತು ಭಾರತ) ಸಮಿತಿಗಳ ಮುಖಂಡರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದೇನೆ ಎಂದು ಮೋದಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+