ಅಂತ್ಯಕ್ರಿಯೆಯ ಸ್ಥಳಗಳಲ್ಲಿ ಶವಗಳ ರಾಶಿ: ವಾಸ್ತವವನ್ನು ಮರೆಮಾಚಿತಾ ಚೀನಾ?
ವಾಷಿಂಗ್ಟನ್ ಜನವರಿ 11: ಕೊರೊನಾ ವೈರಸ್ ಇಡೀ ಚೀನಾವನ್ನು ಜಾಗೃತಗೊಳಿಸಿದೆ. ಕಳೆದ ಒಂದು ತಿಂಗಳಲ್ಲಿ ಚೀನಾದಲ್ಲಿ ಎಷ್ಟು ಜನರು ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ ಎಂಬ ನಿಖರವಾದ ವರದಿಯನ್ನು ಚೀನಾ ಸರ್ಕಾರ ನೀಡಿಲ್ಲ. ಈ ಮೂಲಕ ಚೀನಾ ದೊಡ್ಡ ವಿಚಾರವನ್ನು ಜಗತ್ತಿನಿಂದ ಮರೆಮಾಡಿದೆ. ವಾಷಿಂಗ್ಟನ್ ಪೋಸ್ಟ್ ವರದಿಯ ಪ್ರಕಾರ, ಕೋವಿಡ್ ಸಾಂಕ್ರಾಮಿಕ ಚೀನಾದಲ್ಲಿ ಎಷ್ಟರ ಮಟ್ಟಿಗೆ ವಿನಾಶವನ್ನು ಸೃಷ್ಟಿಸಿದೆ ಮತ್ತು ಚೀನಾದ ಕಮ್ಯುನಿಸ್ಟ್ ಪಕ್ಷವು ಕೋವಿಡ್‌ನ ವಾಸ್ತವತೆಯನ್ನು ಹೇಗೆ ಜನರಿಂದ ಮರೆಮಾಡಿದೆ ಎಂಬುದನ್ನು ಉಪಗ್ರಹ ಫೋಟೋಗಳು ಬಹಿರಂಗಪಡಿಸಿವೆ. ವಾಷಿಂಗ್ಟನ್ ಪೋಸ್ಟ್ ಪ್ರಕಾರ, ಚೀನಾದ ಹಲವಾರು ನಗರಗಳ ಸ್ಮಶಾನಗಳು ಮತ್ತು ಅಂತ್ಯಕ್ರಿಯೆಯ ಕೇಂದ್ರಗಳ ಮುಂದೆ ಜನಸಂದಣಿಯನ್ನು ಉಪಗ್ರಹಗಳಲ್ಲಿ ಸೆರೆಹಿಡಿಯಲಾಗಿದೆ.
ವಾಷಿಂಗ್ಟನ್ ಪೋಸ್ಟ್ ಪ್ರಕಾರ, ಚೀನಾದ ಚೆಂಗ್ಡುವಿನಲ್ಲಿ ಅಂತ್ಯಕ್ರಿಯೆಯ ಕೇಂದ್ರದ ಹೊರಗೆ ಅನೇಕ ದೇಹಗಳನ್ನು ತರಲಾಯಿತು. ಅಲ್ಲಿನ ಆಡಳಿತ, ಜನರಿಗೆ ತಮ್ಮ ಕುಟುಂಬಸ್ಥ ಮೃತರಿಗೆ ವಿದಾಯ ಹೇಳಲು ಕೇವಲ 2 ನಿಮಿಷಗಳನ್ನು ನೀಡುತ್ತಿರುವುದು ತಿಳಿದುಬಂದಿದೆ. ಮೃತ ದೇಹವನ್ನು ಮಾತ್ರ ಇಡಲು ಸಂಬಂಧಿಕರಿಗೆ ಹೆಚ್ಚು ಸಮಯ ನೀಡಲಾಗುತ್ತಿದೆ. ಆದರೆ ಅದರ ನಂತರ ಸಂಬಂಧಿಕರನ್ನು ತಕ್ಷಣವೇ ಅಲ್ಲಿಂದ ಕಳೆಸಲಾಗುತ್ತಿರುವುದು ಕಂಡುಬಂದಿದೆ. ರಾಜಧಾನಿ ಬೀಜಿಂಗ್‌ನ ಹೊರವಲಯದಲ್ಲಿರುವ ಹೊಸ ಪಾರ್ಕಿಂಗ್ ಸ್ಥಳದ ಜಾಗವನ್ನು ತ್ವರಿತವಾಗಿ ಅಂತ್ಯಕ್ರಿಯೆಗೆ ತೆರವುಗೊಳಿಸಲಾಗಿದೆ.
ಶಾಂಘೈನ ಸ್ಮಶಾನದ ಮೈದಾನದಲ್ಲಿ ಕುಟುಂಬಸ್ಥರು ಒಂದು ಮೃತ ದೇಹದ ಅಂತ್ಯ ಸಂಸ್ಕಾರಕ್ಕೆ $ 300 ರಂತೆ ಹಣ ನೀಡಲು ಸಾಲುಗಟ್ಟಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಆದರೆ ಡಿಸೆಂಬರ್ 7 ರಿಂದ, ಇಡೀ ಚೀನಾದಲ್ಲಿ ಕೊರೊನಾ ವೈರಸ್‌ನಿಂದ ಕೇವಲ 40 ಜನರು ಸಾವನ್ನಪ್ಪಿದ್ದಾರೆ ಎಂದು ಚೀನಾ ಅಧಿಕೃತವಾಗಿ ಹೇಳಿದೆ. ಉಪಗ್ರಹ ಫೋಟೋಗಳು ಪ್ರತಿ ದಿನ ಚೀನಾದಲ್ಲಿ ಕೊರೊನಾದಿಂದ ಹೆಚ್ಚು ಸಾವುಗಳು ಸಂಭವಿಸುತ್ತಿವೆ ಎಂದು ಸೂಚಿಸುತ್ತವೆ.

ವಾಸ್ತವವನ್ನು ಮರೆಮಾಚಿದ ಚೀನಾ
ವಾಸ್ತವವೆಂದರೆ ಚೀನಾದಲ್ಲಿ ಪ್ರತಿದಿನ ಸುಮಾರು 30 ಮಿಲಿಯನ್ ಜನರು ಕೋವಿಡ್ ಸೋಂಕಿಗೆ ಒಳಗಾಗುತ್ತಿದ್ದಾರೆ ಮತ್ತು ಹೆನಾನ್ ಪ್ರಾಂತ್ಯದ ಆರೋಗ್ಯ ಅಧಿಕಾರಿಗಳು ಸ್ವತಃ ಪ್ರಾಂತ್ಯದ 90 ಪ್ರತಿಶತದಷ್ಟು ಜನರು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಹೇಳಿದ್ದಾರೆ. ಆದರೆ ಚೀನಾ ಸರ್ಕಾರ ಕೇವಲ 40 ಸಾವುಗಳು ಸಂಭವಿಸಿವೆ ಎಂದು ಹೇಳುತ್ತದೆ. ಇದರಿಂದ ಚೀನಾ ವಾಸ್ತವವನ್ನು ಮರೆಮಾಚುತ್ತಿದೆ ಎನ್ನಲಾಗುತ್ತಿದೆ. ಮ್ಯಾಕ್ಸರ್ ಟೆಕ್ನಾಲಜೀಸ್‌ನಿಂದ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡುತ್ತಾ, ಯುಎಸ್ ವಾರ್ತಾಪತ್ರಿಕೆಯು ಉತ್ತರದಲ್ಲಿ ಬೀಜಿಂಗ್‌ನಿಂದ ಪೂರ್ವದ ನಾನ್‌ಜಿಂಗ್ ಟಕಲ್ ಮತ್ತು ನೈಋತ್ಯದಲ್ಲಿ ಚೆಂಗ್ಡು ಮತ್ತು ಕುನ್‌ಮಿಂಗ್‌ವರೆಗೆ ಆರು ವಿಭಿನ್ನ ನಗರಗಳಲ್ಲಿ ಶವಸಂಸ್ಕಾರ ಕೇಂದ್ರಗಳ ಹೊರಗೆ ಶವಗಳು ರಾಶಿ ಬಿದ್ದಿದೆ ಎಂದು ವರದಿ ಮಾಡಿದೆ. ಅಂತಹ ಅನೇಕ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದೆ. ಇದರಲ್ಲಿ ಶವಗಳ ಸರತಿ ಸಾಲುಗಳು ಶವಸಂಸ್ಕಾರ ಕೇಂದ್ರಗಳ ಹೊರಗೆ ಕಂಡುಬರುತ್ತವೆ.

ಪ್ರತ್ಯಕ್ಷದರ್ಶಿಗಳು ಏನು ಹೇಳುತ್ತಾರೆ?
ನೈಋತ್ಯ ಚೀನಾದ ಚಾಂಗ್‌ಕಿಂಗ್‌ನಲ್ಲಿರುವ ಜಿಯಾಂಗ್ನಾನ್ ಫ್ಯೂನರಲ್ ಹೋಮ್‌ನಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರು ಹೇಗೆ ಹೇಳಿದ್ದಾರೆ- "ನಾನು ಆರು ವರ್ಷಗಳ ಕಾಲ ಇಲ್ಲಿ ಕೆಲಸ ಮಾಡಿದ್ದೇನೆ. ಶವಸಂಸ್ಕಾರದಲ್ಲಿ ಫ್ರೀಜರ್‌ಗಳು ತುಂಬಿ ಹೋಗಿವೆ ಮತ್ತು ಎಲ್ಲಾ ಎಂಟು ಶವಗಾರಗಳು ದಿನದ 24 ಗಂಟೆಗಳ ಕಾಲ ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ" ಎಂದು ಅವರು ಹೇಳಿದರು. ವಾಷಿಂಗ್ಟನ್ ಪೋಸ್ಟ್ ವರದಿಯ ಪ್ರಕಾರ, ಕನಿಷ್ಠ ನಾಲ್ಕು ಅಂತ್ಯಕ್ರಿಯೆಯ ಮನೆಗಳು ಅಂತ್ಯಕ್ರಿಯೆಯ ಮೊದಲು ಸಂಬಂಧಿಕರಿಗೆ ಕೊನೆಯ ಆಚರಣೆಗಳನ್ನು ಮಾಡಲು ಅನುಮತಿಸುವುದನ್ನು ನಿಲ್ಲಿಸಿವೆ. ಯಾವುದೇ ಆಚರಣೆ ಇಲ್ಲದೆ ಮೃತ ದೇಹಗಳನ್ನು ಸ್ಮಶಾನ ಕೇಂದ್ರಗಳಲ್ಲಿ ದಹನ ಮಾಡಲಾಗುತ್ತಿದೆ. ಅವುಗಳ ಭಸ್ಮವನ್ನು ಮಾತ್ರ ಸುರಕ್ಷಿತವಾಗಿ ಇಡಲಾಗುತ್ತಿದ್ದು ನಂತರ ಅದನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುತ್ತಿದೆ.

ಚೀನಾದ ಪರಿಸ್ಥಿತಿ ಏಕೆ ಹದಗೆಟ್ಟಿತು?
ಕಳೆದ ಎರಡು ವರ್ಷಗಳಿಂದ ಕೋವಿಡ್ ಸಮಯದಲ್ಲಿ, ಪಾಶ್ಚಿಮಾತ್ಯ ದೇಶಗಳು ನೋಡಿದಂತೆ ಕಟ್ಟುನಿಟ್ಟಾದ ಕೋವಿಡ್ ನೀತಿಯಿಂದಾಗಿ ಚೀನಾ ಹೆಚ್ಚಿನ ಜನರನ್ನು ಸಾವಿನಿಂದ ರಕ್ಷಿಸಿತು. ಈ ಸಮಯದಲ್ಲೂ ಕೋವಿಡ್ ಸೋಂಕಿನ ಬಗ್ಗೆ ಚೀನಾ ತನ್ನ ಶ್ರೇಷ್ಠತೆಯನ್ನು ಸಾಬೀತುಪಡಿಸುವುದನ್ನು ಮುಂದುವರೆಸಿದೆ. ಡಿಸೆಂಬರ್ 7 ರಿಂದ, ಚೀನಾದಲ್ಲಿ ಕೋವಿಡ್‌ನಿಂದ 40 ಕ್ಕಿಂತ ಕಡಿಮೆ ಜನರು ಸಾವನ್ನಪ್ಪಿದ್ದಾರೆ ಎಂದು ಚೀನಾ ಸರ್ಕಾರ ಒತ್ತಿ ಹೇಳುತ್ತಲೇ ಇದೆ. ಆದರೆ, ವಾಸ್ತವ ಇದಕ್ಕೆ ತದ್ವಿರುದ್ಧವಾಗಿದೆ. ಚೀನಾದ ಅಧಿಕಾರಿಗಳು ಕೋವಿಡ್ ಸಾವುಗಳನ್ನು ಹೇಗೆ ಎಣಿಸುತ್ತಾರೆ ಎಂಬುದು ಸಾಂಕ್ರಾಮಿಕ ರೋಗದ ಆರಂಭದಿಂದಲೂ ವಿವಾದದ ವಿಷಯವಾಗಿದೆ. ಡಿಸೆಂಬರ್‌ನಿಂದ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದವರನ್ನು ಮಾತ್ರ ಕೋವಿಡ್ ಸಾವಿನ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಆದರೆ, ಕೋವಿಡ್‌ನಿಂದಾಗಿ ಇತರ ಸಾವುಗಳನ್ನು ಇದರಲ್ಲಿ ಸೇರಿಸಲಾಗಿಲ್ಲ. ಚೀನಾ ಸರ್ಕಾರದ ಅಧಿಕೃತ ಅಂಕಿಅಂಶಗಳ ಪ್ರಕಾರ, ಇದುವರೆಗೆ ಚೀನಾದಲ್ಲಿ ಕೇವಲ 5200 ಜನರು ಸಾವನ್ನಪ್ಪಿದ್ದಾರೆ.

ಚೀನಾದಲ್ಲಿ ಕೋವಿಡ್‌ನಿಂದ ಎಷ್ಟು ಸಾವುಗಳು ಸಂಭವಿಸಿವೆ?
ಜಾಗತಿಕ ಆರೋಗ್ಯ ವಿಶ್ಲೇಷಣಾ ಸಂಸ್ಥೆ ಏರ್‌ಫಿನಿಟಿ ಡಿಸೆಂಬರ್ 1, 2022 ರಿಂದ ಚೀನಾದಲ್ಲಿ 5 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ಜನವರಿ 23 ರಿಂದ, ಚೀನಾದಲ್ಲಿ ಕೋವಿಡ್‌ನಿಂದ ಪ್ರತಿದಿನ ಕನಿಷ್ಠ 25,000 ಕ್ಕೂ ಹೆಚ್ಚು ಜನರು ಸಾಯಬಹುದು ಎಂದು ಏರ್‌ಫಿನಿಟಿ ಹೇಳಿಕೊಂಡಿದೆ. ಇದೇ ಸಮಯದಲ್ಲಿ ಮ್ಯಾಕ್ಸರ್ ಲ್ಯಾಬ್‌ನ ಉಪಗ್ರಹ ಫೋಟೋಗಳು ಚೀನಾದ ಸುಳ್ಳನ್ನು ಬಹಿರಂಗಪಡಿಸಿವೆ. ಚೀನಾದಲ್ಲಿ ಸಾವಿಗೆ ದೊಡ್ಡ ಕಾರಣವೆಂದರೆ ಹೆಚ್ಚಿನ ಜನರು ಕೋವಿಡ್‌ನ ಬೂಸ್ಟರ್ ಡೋಸ್ ತೆಗೆದುಕೊಳ್ಳದಿರುವುದು. ಇದರೊಂದಿಗೆ ಚೈನೀಸ್ ಲಸಿಕೆ ಕೂಡ ತುಂಬಾ ದುರ್ಬಲವಾಗಿದೆ ಎನ್ನಾಲಗುತ್ತಿದೆ. ಆದ್ದರಿಂದ ಈಗ ಚೀನಾ ವಿದೇಶಿ ಲಸಿಕೆಯನ್ನು ಅನುಮೋದಿಸಿದೆ.
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications