ಭಾರತ ಧ್ವಂಸಗೊಳಿಸಿದ ಜೈಷ್ ಉಗ್ರನೆಲೆಯ ಚಿತ್ರ ವೈರಲ್

Recommended Video

      Surgical Strike 2: ಭಾರತ ಧ್ವಂಸಗೊಳಿಸಿದ ಜೈಷ್ ಉಗ್ರನೆಲೆಯ ಚಿತ್ರ ವೈರಲ್ | Oneindia Kannada

      ಬಾಲಕೋಟ್, ಫೆಬ್ರವರಿ 27: ಭಾರತವು ಧ್ವಂಸಗೊಳಿಸಿದ ಪಾಕಿಸ್ತಾನದ ಬಾಲಕೋಟ್ ನಲ್ಲಿದ್ದ ಜೈಷ್ ಇ ಮೊಹಮ್ಮದ್ ಉಗ್ರನೆಲೆಯ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

      ಬಾಲಕೋಟ್ ನಲ್ಲಿದ್ದ ಜೈಷ್ ಇ ಮೊಹಮ್ಮದ್ ಉಗ್ರನೆಲೆಯನ್ನೇ ಗುರಿಯಾಗಿಸಿಕೊಂಡು ಫೆಬ್ರವರಿ 26 ರ ಬೆಳಿಗ್ಗೆ 3:30 ಕ್ಕೆ ಭಾರತ ವಾಯುಸೇನೆ ದಾಳಿ ನಡೆಸಿತ್ತು. ಜೈಷ್ ಉಗ್ರರ ಅಡಗುದಾಣದ ಮೇಲೆ ಭಾರತ ಬಾಂಬ್ ಸುರಿಮಳೆ ಸುರಿಸಿದ ಪರಿಣಾಮ ಸುಮಾರು 300 ಕ್ಕೂ ಹೆಚ್ಚು ಉಗ್ರರ ಹತ್ಯೆಯಾಗಿರಬಹುದು ಎಂದು ಅಂದಾಜಿಸಲಾಗಿದ್ದು, ಈ ಕುರಿತ ನಿಖರ ಮಾಹಿತಿ ಲಭ್ಯವಾಗಿಲ್ಲ.

      Picture of JeM facility destroyed by IAF strikes in Pakistans Balakot goes viral

      ನಿನ್ನೆಯೆಲ್ಲಾ ಘಟನೆ ನಡೆದಿದ್ದೇ ಸುಳ್ಳು ಎನ್ನುತ್ತಿದ್ದ ಪಾಕಿಸ್ತಾನ, ಭಾರತ ದಾಳಿ ನಡೆಸಿದಾಗ ಕತ್ತಲಾಗಿದ್ದರಿಂದ ನಮ್ಮ ವಾಯುಸೇನೆಗೆ ಪ್ರತಿದಾಳಿ ನಡೆಸಲು ಕಷ್ಟವಾಯಿತು ಎಂದಿದೆ. ಆ ಮೂಲಕ ದಾಳಿ ನಡೆದಿದ್ದು ಸತ್ಯ ಎಂಬುದನ್ನು ಒಪ್ಪಿಕೊಂಡಿದೆ.

      Picture of JeM facility destroyed by IAF strikes in Pakistans Balakot goes viral

      ಫೆಬ್ರವರಿ 14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಯೋಧರಿದ್ದ ವಾಹನದ ಮೇಲೆ ಜೈಷ್ ಉಗ್ರ ಆದಿಲ್ ದಾರ್ ನಡೆಸಿದ ಆತ್ಮಾಹುತಿ ಕಾರ್ ಬಾಂಬ್ ದಾಳಿಯಲ್ಲಿ ಭಾರತೀಯ ಸೇನೆಯ 44 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು. ಈ ಘಟನೆ ನಡೆದ 12 ನೇ ದಿನಕ್ಕೆ ಭಾರತ ಪ್ರತೀಕಾರ ತೀರಿಸಿಕೊಂಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+