ಮನೆಗೆ ನುಗ್ಗಿದ ಕರಡಿ ಪಿಯಾನೋ ನುಡಿಸಿದ ವಿಡಿಯೋ ನೋಡಿದ್ರಾ!

ಇದು ಅಮೆರಿಕದ ಕೊಲರಾಡೋದಲ್ಲಿ ನಡೆದ ಘಟನೆ. ಒಂಚೂರು ಹೆಚ್ಚು ಕಡಿಮೆಯಾದರೆ ತುಮಕೂರಿನ ಮಧುಗಿರಿಯಲ್ಲೋ ಪಾವಗಡದಲ್ಲೋ ಇಂಥದ್ದೇ ಅನಾಹುತ ಸಂಭವಿಸಿದರೂ ಅಚ್ಚರಿಯಿಲ್ಲ. ಮನೆಯೊಂದಕ್ಕೆ ಬಾಗಿಲು ಹಾಕಿರಲಿಲ್ಲ. ಅದೆಲ್ಲಿಂದಲೋ ಬಂದು ಮನೆಯೊಳಗೆ ಹೊಕ್ಕ ಕರಡಿ ಮನಸೋ ಇಚ್ಛೆ ಮಸ್ತ್ ಮಜಾ ಮಾಡಿದೆ.

ಅದೇನೇನು ಮಾಡಿತೋ ಎಲ್ಲವೂ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿದ್ದರಿಂದ ಅದನ್ನು ನೋಡುವ ಸೌಭಾಗ್ಯ ನಮ್ಮೆಲ್ಲರ ಪಾಲಿಗೆ ಸಿಕ್ಕಿದೆ. ಅಡುಗೆ ಮನೆಗೆ ನುಗ್ಗಿ ಬೇಕಾದ್ದನ್ನು ತಿಂದು ತೇಗಿದ ಕರಡಿ, ಬೆಡ್ ರೂಮ್ ನಲ್ಲೂ ಅಡ್ಡಾಡಿದೆ. ಆ ನಂತರ ಪಿಯಾನೋ ನುಡಿಸಿದೆ. ಆಮೇಲೆ ಅದೇನು ಹುಕಿ ಬಂತೋ ಮನೆಯಲ್ಲಾ ಸುತ್ತಾಡಿ ಸಂಭ್ರಮಿಸಿದೆ.[66 ಸಾವಿರ ರುಪಾಯಿ ತಿಂದು ತೇಗಿದ ಮೇಕೆ ಜತೆಗೆ ಊರ ಮಂದಿಯ ಸೆಲ್ಫಿ]

Piano-playing bear makes musical debut in Vail home

ಈ ಮನೆಯ ಯಜಮಾನಮ್ಮ ವಾಪಸ್ ಮನೆಗೆ ಬರುವ ವೇಳೆಗೆ ಅಂಜದ ಗಂಡು ಸಿನಿಮಾದಲ್ಲಿ ರವಿಚಂದ್ರನ್ ಅವರ ಡೈಲಾಗ್ ಥರ ಎಲ್ಲ ಪೀಸ್ ಪೀಸ್. ಯಾರೋ ಕಳ್ಳ ಹೀಗೆ ಮಾಡಿರಬೇಕು ಅಂತ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದರೆ ಕರಡಿ ಕೋಲಾಹಲದ ವಿಚಾರ ಗೊತ್ತಾಗಿದೆ. ಆ ನಂತರ ವಿಡಿಯೋ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಜನ ನೋಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+