ನೋಡುಗರನ್ನು ವಿಸ್ಮಯಗೊಳಿಸುವ ಕೆಂಪು ನದಿ: ವಿಡಿಯೋ ನೋಡಿ

ಪೆರು, ನವೆಂಬರ್‌ 1: ಚೀನಾದಲ್ಲಿ ಚಿನ್ನದ ಬಣ್ಣದ ಜಲಪಾತವಿರುವ ಸುದ್ದಿಯನ್ನು ನಾವು ಓದಿದ್ದೇವೆ. ಅದರ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಹಲವರು ಚೀನಾಕ್ಕೂ ಭೇಟಿ ನೀಡಿದ್ದರೂ ಆಶ್ಚರ್ಯವಿಲ್ಲ. ಆದರೀಗ ಅಂತಹದ್ದೇ ಒಂದು ನದಿ ಕಂಡು ಬಂದಿದೆ. ಅದು ಚಿನ್ನದ ಬಣ್ಣದ್ದಲ್ಲ ಬದಲಿಗೆ ಕೆಂಪು ನದಿ. ಈ ನದಿಯ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. ವಿಡಿಯೋ ಕ್ಲಿಪ್ ಪೆರುವಿನಲ್ಲಿ ಕೆಂಪು ಬಣ್ಣದ ನದಿ ಹರಿಯುವುದನ್ನು ತೋರಿಸುತ್ತದೆ. ಇದು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಆಶ್ಚರ್ಯಗೊಳಿಸಿದೆ. ಈ ವಿಡಿಯೊ ಹಳೆಯದಾಗಿದ್ದರೂ ಕಾಲಕಾಲಕ್ಕೆ ಕಾಣಿಸಿಕೊಳ್ಳುತ್ತಾ ನೋಡುಗರನ್ನು ಬೆರಗಾಗಿಸುತ್ತದೆ.

ಅಂದಹಾಗೆ ಪೆರುವಿನಲ್ಲಿ ರೈನ್ಬೋ ಮೌಂಟೇನ್‌ ವಿನಿಕುಂಕಾ ಎಂಬ ಹೆಸರಿನ ಸ್ಥಳವಿದೆ. ಈ ಸ್ಥಳದಲ್ಲಿ ಕೆಂಪು ನದಿ ಹರಿಯುತ್ತದೆ. ಅಲ್ಲದೆ ಇದು ದಕ್ಷಿಣ ಅಮೆರಿಕಾದ ಪ್ರಮುಖ ನದಿಯಾಗಿದೆ. ಈ ವಿಡಿಯೊವನ್ನು ಟ್ವಿಟರ್‌ ಬಳಕೆದಾರ ಫೆಸಿನೇಟಿಂಗ್ ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ನೋಡಿದಂತೆ ಕುಸ್ಕೊದಲ್ಲಿರುವ ಈ ನದಿಯು ಚೆರ್ರಿ ಅಥವಾ ಇಟ್ಟಿಗೆಯ ಕೆಂಪು ಬಣ್ಣದ ನೀರನ್ನು ಹೊಂದಿದೆ. ಇದನ್ನು ಸ್ಥಳೀಯವಾಗಿ 'ಪುಕಾಮಾಯು' ಎಂದು ಕರೆಯಲಾಗುತ್ತದೆ. ಕ್ವೆಚುವಾ ಭಾಷೆಯಲ್ಲಿ, 'ಪುಕಾ' ಎಂದರೆ ಕೆಂಪು, ಮತ್ತು 'ಮಯು' ಎಂದರೆ ನದಿ.

ನದಿ ನೀರು ಕೆಂಪಾಗಲು ಕಾರಣವೇನು?

ಸ್ಥಳೀಯ ವರದಿಯ ಪ್ರಕಾರ, ಮಣ್ಣಿನ ಸವೆತದಿಂದ ರೂಪುಗೊಂಡ ಜೇಡಿಮಣ್ಣಿನ ವಿವಿಧ ಖನಿಜ ನಿಕ್ಷೇಪಗಳಿರುವುದರಿಂದ ನದಿಯ ನೀರು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಇದು ಮಳೆಗಾಲದಲ್ಲಿ ಹೆಚ್ಚಾಗಿ ಸಂಭವಿಸುತ್ತದೆ. ಮಳೆನೀರಿನ ಹರಿವಿನಿಂದಾಗಿ ಕೆಂಪು ನದಿ ರೂಪಗೊಳ್ಳುತ್ತದೆ. ವರ್ಷದ ಉಳಿದ ಅವಧಿಯಲ್ಲಿ, ನೀರಿನ ಹರಿವು ನಿಧಾನವಾಗಿರುತ್ತದೆ ಮತ್ತು 'ನದಿ'ಯ ಬಣ್ಣವು ಕಂದು ಬಣ್ಣದಲ್ಲಿ ಉಳಿಯುತ್ತದೆ.

Peru Red river that amazes viewers watch the video South America

ನದಿಯ ಮೂಲವು ಪಾಲ್ಕೊಯೊ ರೇನ್ಬೋ ಪರ್ವತವಾಗಿದೆ. ಪರ್ವತಗಳ ಮೇಲೆ ಮಳೆ ನೀರು ಬಿದ್ದಾಗ ಅದು ನೈಸರ್ಗಿಕ ಮಣ್ಣು ಸವೆತ ಉಂಟಾಗುತ್ತದೆ. ಇದರಿಂದಾಗಿ ವಿವಿಧ ಬಣ್ಣಗಳ ಮಣ್ಣು ಸವೆದು ಮಳೆ ನೀರಿನಲ್ಲಿ ಮಿಶ್ರವಾಗಿ ಹರಿಯುತ್ತದೆ.

ಸೋಮವಾರ ಬೆಳಿಗ್ಗೆ ವಿಡಿಯೊವನ್ನು ಹಂಚಿಕೊಳ್ಳಲಾಗಿದ್ದು ಇದು 2.7 ಮಿಲಿಯನ್ ವೀಕ್ಷಣೆಗಳು ಮತ್ತು 51,000 ಲೈಕ್ಸ್‌ ಅನ್ನು ಸಂಗ್ರಹಿಸಿದೆ. 'ಪೆರುವಿನಲ್ಲಿರುವ ಕೆಂಪು ನದಿ' ಪೋಸ್ಟ್‌ನ ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ವಿಡಿಯೋವನ್ನು ಮೆಚ್ಚಿಕೊಂಡಿದ್ದಾರೆ ಅದರ ಸೌಂದರ್ಯವನ್ನು ಆನಂದಿಸಿದ್ದಾರೆ. ಅನೇಕ ಬಳಕೆದಾರರು ಕಾಮೆಂಟ್ ಕೂಡ ಮಾಡಿದ್ದಾರೆ.

Peru Red river that amazes viewers watch the video South America

ಕಾಮೆಂಟ್‌ಗಳು ಹೀಗಿವೆ

'ಇದು ವಿಚಿತ್ರವಾಗಿದೆ. ನಮ್ಮ ಭೂಮಿಯನ್ನು ಅದ್ಭುತವಾಗಿ ಮತ್ತು ಸಂಕೀರ್ಣವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ದೇವರಿಂದ ರಚಿಸಲಾಗಿದೆ ಎಂದು ತೋರಿಸಲು ಇದು ಸಾಕ್ಷಿಯಾಗಿದೆ'

'ನಾನು ಇದನ್ನು ವೈಯಕ್ತಿಕವಾಗಿ ನೋಡಲು ಬಯಸುತ್ತೇನೆ' ಎಂದು ಇನ್ನೊಬ್ಬ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ.

Peru Red river that amazes viewers watch the video South America

'ಚಲನಚಿತ್ರ ನಿರ್ದೇಶಕರು ಈ ಸ್ಥಳವನ್ನು ಪ್ರಮುಖ ರಕ್ತಪಾತದ ಯುದ್ಧ ನಡೆಯುವ ದೃಶ್ಯವನ್ನಾಗಿ ಬಳಸುವದನ್ನು ತಪ್ಪಿಕೊಂಡಿದ್ದಾರೆ' ಎಂದು ಮತ್ತೊಬ್ಬರು ಬರೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+