ಸೂರ್ಯನ ಸ್ಪರ್ಶಕ್ಕಾಗಿ ನಭಕ್ಕೆ ಚಿಮ್ಮಿದ ಪಾರ್ಕರ್ ನೌಕೆ!
ಫ್ಲೋರಿಡಾ, ಆಗಸ್ಟ್ 12: ನಾಸಾದ ಮಹತ್ವಾಕಾಂಕ್ಷೆಯ 'ಪಾರ್ಕರ್ ಸೋಲಾರ್ ಪ್ರೋಬ್' ನೌಕೆಯು ನಭೆಗೆ ಚಿಮ್ಮಿತ ಸಾಗಿದ್ದು ಸೂರ್ಯನ ಅಂಗಳದತ್ತ ಪ್ರಯಾಣ ಆರಂಭಿಸಿದೆ. ಇಲ್ಲಿನ ಕೇಪ್ ಕ್ಯಾನವೆರಲ್ ಏರ್ ಫೋರ್ಸಸ್ ಉಡಾವಣಾ ಕೇಂದ್ರದಿಂದ ನೌಕೆ ಭಾನುವಾರ ಬೆಳಗ್ಗೆ ಯಶಸ್ವಿಯಾಗಿ ಉಡಾವಣೆಗೊಂಡಿತು.
ನಾಸಾ ರೂಪಿಸಿರುವ 'ಪಾರ್ಕರ್ ಸೋಲಾರ್ ಪ್ರೋಬ್' ಯೋಜನೆ ತಾಂತ್ರಿಕ ಕಾರಣ ದಿಂದಾಗಿ ಕೆಲ ಗಂಟೆಗಳ ಕಾಲ ಮುಂದೂಡಲಾಗಿತ್ತು. ಶನಿವಾರ ಮುಂಜಾನೆ 3.33ಕ್ಕೆ ಉಡಾವಣೆ ನಿಗದಿಯಾಗಿತ್ತು. ಆದರೆ, ಡೆಲ್ಟಾ 4 ಹೆವಿ ರಾಕೆಟ್ ಸ್ತಬ್ಧವಾದ ಕಾರಣ, ಭಾನುವಾರ ಬೆಳಗ್ಗೆ 8.30ಕ್ಕೆ ಉಡಾವಣೆ ಮುಂದೂಡಲಾಯಿತು.
ಸುಡು ಸೂರ್ಯನ ಬಿಸಿಲಿನ ತೋಟದಲ್ಲಿ ಅಡ್ಡಾಡಲಿರುವ ಈ ನೌಕೆ ಅಲ್ಲಿಂದ ಹೊರಹೊಮ್ಮುವ ಕಿರಣಗಳು, ಅದರಲ್ಲಿನ ಶಕ್ತಿಗಳು, ಸೌರ ವಾಯುವಿನ ಹುಟ್ಟು ಮತ್ತು ಪರಿಣಾಮಗಳು, ಶಾಖದ ಚಲನೆ ಹೀಗೆ ಅನೇಕ ವಿಷಯಗಳ ಅಧ್ಯಯನಕ್ಕೆ ನೆರವಾಗಲಿದೆ ಎಂದು ನಾಸಾ ವಿಜ್ಞಾನಿ ಥಾಮಸ್ ಜುರ್ಬಚೆನ್ ತಿಳಿಸಿದ್ದಾರೆ.

ನಾವು ಸಮೀಪದಿಂದ ಅಧ್ಯಯನ ಮಾಡಲು ಸಾಧ್ಯವಿರುವ ನಕ್ಷತ್ರವೆಂದರೆ ಸೂರ್ಯ ಮಾತ್ರ. ನಾವು ವಾಸಿಸುವ ನಕ್ಷತ್ರವನ್ನು ಅಧ್ಯಯನ ಮಾಡುವುದರಿಂದ ಬಾಹ್ಯಾಕಾಶದಲ್ಲಿನ ಉಳಿದ ನಕ್ಷತ್ರಗಳ ಕುರಿತು ಸಹ ಹೆಚ್ಚು ಅರಿತುಕೊಳ್ಳಬಹುದು. ಭೂಮಿಯ ಬೆಳಕು ಮತ್ತು ಶಾಖದ ಮೂಲವೇ ಸೂರ್ಯ. ಅದರ ಬಗ್ಗೆ ನಾವು ಹೆಚ್ಚು ತಿಳಿದಷ್ಟೂ ಭೂಮಿಯಲ್ಲಿ ಜೀವಿಗಳು ಹೇಗೆ ಸೃಷ್ಟಿಯಾದವು ಎಂಬುದನ್ನು ಅರಿತುಕೊಳ್ಳಲು ಸಾಧ್ಯ.
ಸುಡು ಸೂರ್ಯನ ಬಿಸಿಲಿನ ತೋಟದಲ್ಲಿ ಅಡ್ಡಾಡಲಿರುವ ಈ ನೌಕೆ ಅಲ್ಲಿಂದ ಹೊರಹೊಮ್ಮುವ ಕಿರಣಗಳು, ಅದರಲ್ಲಿನ ಶಕ್ತಿಗಳು, ಸೌರ ವಾಯುವಿನ ಹುಟ್ಟು ಮತ್ತು ಪರಿಣಾಮಗಳು, ಶಾಖದ ಚಲನೆ ಹೀಗೆ ಅನೇಕ ವಿಷಯಗಳ ಅಧ್ಯಯನಕ್ಕೆ ನೆರವಾಗಲಿದೆ.

ಅಮೆರಿಕದ ಭೌತಶಾಸ್ತ್ರಜ್ಞ ಯೂಜಿನ್ ಪಾರ್ಕರ್ ಅವರ ಗೌರವಾರ್ಥ ಈ ಯೋಜನೆಗೆ ಅವರ ಹೆಸರು ಇರಿಸಲಾಗಿದೆ. 1958ರಲ್ಲಿ ಸೌರ ವಾಯುವಿನ ಗುಣದ ಬಗ್ಗೆ ಮೊಟ್ಟ ಮೊದಲ ಬಾರಿಗೆ ಊಹೆ ಮಾಡಿದವರು ಪಾರ್ಕರ್. ಇದೇ ಮೊದಲ ಬಾರಿಗೆ ನಾಸಾ ಬದುಕಿರುವ ವ್ಯಕ್ತಿಯ ಹೆಸರನ್ನು ತನ್ನ ಯೋಜನೆಯೊಂದಕ್ಕೆ ಇರಿಸಿದೆ.












Click it and Unblock the Notifications