Bed Bugs: ಜಗತ್ತಿನ ಶ್ರೀಮಂತ ದೇಶ ‘ತಿಗಣೆ’ ಕಾಟಕ್ಕೆ ತತ್ತರ!
ತಿಗಣೆ ಅಂದ್ರೆ ಅದು ಬಡವರ ಮನೆಗಳಲ್ಲಿ ಮಾತ್ರ ಅನ್ನೋ ಮಾತಿದೆ. ಅದರಲ್ಲೂ ದೇಶದ ಹಲವು ನಗರಗಳಲ್ಲಿ ತಿಗಣೆ ಕಾಟಕ್ಕೆ ಜನ ತತ್ತರಿಸಿ ಹೋಗಿದ್ದು, ತಿಗಣೆ ಕಾಟಕ್ಕೆ ಹಲವಾರು ಕಾರಣಗಳು ಇವೆ. ಆದರೆ ಇಲ್ಲೊಂದು ಶ್ರೀಮಂತ ದೇಶದಲ್ಲೇ ತಿಗಣೆ ಹಾವಳಿ ಜೋರಾಗಿದೆ. ಎಷ್ಟರಮಟ್ಟಿಗೆ ಅಂದರೆ ಹಗಲು ಹೊತ್ತಲ್ಲೇ ರಸ್ತೆಗಳಲ್ಲಿ 'ತಿಗಣೆ' ಸೇನೆ ಭಯ ಹುಟ್ಟಿಸಿದೆ. ಹಾಗಾದರೆ ಯಾವುದು ಆ 'ತಿಗಣೆ' ಕಾಟದ ಶ್ರೀಮಂತ ದೇಶ?
(Même dans le TGV y’a des punaises purée 😪 @OUIGO pensez a désinfecter vos trains, merci pic.twitter.com/PG72erKWLV
— NaNa Afi (@_LaTogolaise) September 22, 2023
ಸಾಮಾನ್ಯವಾಗಿ ಯುರೋಪ್ ಅಂದರೆ ಶ್ರೀಮಂತ ದೇಶ ಅನ್ನೋ ಮಾತಿದೆ. ಅದರಲ್ಲೂ ಈ ಪೈಕಿ ಫ್ರಾನ್ಸ್ ಸಾಕಷ್ಟು ಮುಂದೆ ಇದ್ದು ಜಗತ್ತಿನ ಟಾಪ್ ಆರ್ಥಿಕತೆಯ ದೇಶಗಳಲ್ಲಿ ಇದೂ ಒಂದಾಗಿದೆ. ಆದ್ರೆ ಈಗ ಫ್ರಾನ್ಸ್‌ಗೆ ಹೊಸ ಕಂಟಕ ಎದುರಾಗಿದೆ. ಅದು ಬೇರೆ ದೇಶಗಳಿಂದ ಅಲ್ಲ, ಬದಲಾಗಿ ಕೈಯಲ್ಲಿ ಹೊಸಕಿದರೆ ಸತ್ತು ಹೋಗುವ 'ತಿಗಣೆ' ಸೇನೆಯಿಂದ! ಹೌದು ಮುಂದಿನ ವರ್ಷ 'ಒಲಿಂಪಿಕ್ಸ್' ಕ್ರೀಡಾಕೂಟಕ್ಕೆ ಸಜ್ಜಾಗುತ್ತಿರುವ ಫ್ರಾನ್ಸ್‌ಗೆ ಈಗ ತಿಗಣೆಗಳ ಕಾಟ ತಲೆನೋವು ತಂದಿದೆ. ಅದರಲ್ಲೂ ಜನ ತಿಗಣೆ ಕಾಟಕ್ಕೆ ಬೆಚ್ಚಿಬಿದ್ದಿದ್ದಾರೆ.

ಫ್ರಾನ್ಸ್‌ನಲ್ಲಿ ಹೇಗಿದೆ ಗೊತ್ತಾ ತಿಗಣೆ ಕಾಟ?
1950ರಲ್ಲಿ ಫ್ರಾನ್ಸ್ ದೇಶ ಸಂಪೂರ್ಣ ತಿಗಣೆ ಮುಕ್ತವಾಗಿತ್ತು. ಆದ್ರೆ ಈಗ ಫ್ರಾನ್ಸ್ ದೇಶದಲ್ಲಿ ಜನಸಂಖ್ಯೆ ಪ್ರಮಾಣ ಭಾರಿ ಏರಿಕೆ ಕಾಣುತ್ತಿದ್ದು, ಬಡರಾಷ್ಟ್ರವಾಗುತ್ತಿದೆ. ಫ್ರಾನ್ಸ್ ಜನರಿಗೆ ಸೂಕ್ತ ಉದ್ಯೋಗ ಒದಗಿಸಲು ಕೂಡ ಸಾಧ್ಯವಾಗುತ್ತಿಲ್ಲ. ಈ ಸಮಯದಲ್ಲೇ ಪ್ರವಾಸಿಗರನ್ನ ನಂಬಿ ಬದುಕುವ ದೇಶಗದಲ್ಲಿ ತಿಗಣೆ ಕಾಟ ಭಯ ಹುಟ್ಟಿಸಿದೆ. ಜಗತ್ತಿನ ಶ್ರೀಮಂತ ರಾಷ್ಟ್ರ ಫ್ರಾನ್ಸ್ ಈಗ ತಿಗಣೆ ಸಾಮ್ರಾಜ್ಯವಾಗಿದೆ. ಹೀಗಾಗಿ ಮುಂದಿನ ವರ್ಷ ಇವರು 'ಒಲಿಂಪಿಕ್ಸ್' ಕ್ರೀಡಾಕೂಟ ಹೇಗೆ ಆಯೋಜನೆ ಮಾಡ್ತಾರಪ್ಪಾ? ಅಂತಾ ಜನ ಕೂಡ ಪ್ರಶ್ನೆ ಕೇಳುತ್ತಿದ್ದಾರೆ.
Dans les bus @RATPgroup aussi il y a des punaises 🤣 pic.twitter.com/DbnmgMwEQY
— Ssiguss (@Ssiguss) September 27, 2023
ಇನ್ನು 2024ರ 'ಸಮ್ಮರ್ ಒಲಿಂಪಿಕ್ಸ್' ಫ್ರಾನ್ಸ್ ಪಾಲಾಗಿರುವ ಹಿನ್ನೆಲೆ ವಿವಿಧ ರಾಷ್ಟ್ರಗಳ ಆಟಗಾರರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗುತ್ತಿದೆ. ಆದರೆ ಫ್ರಾನ್ಸ್ ರಾಜಧಾನಿಯ ಗಲ್ಲಿ ಗಲ್ಲಿಗಳಲ್ಲೂ ತಿಗಣೆಗಳು ಓಡಾಡುತ್ತಿವೆ. ಅಲ್ಲಿನ ಬಸ್‌ಗಳು, ಎಸಿ ಟ್ರೈನ್ ಹೀಗೆ ಎಲ್ಲಿ ನೋಡಿದರೂ ಬರೀ ತಿಗಣೆಗಳೇ ಕಾಣುತ್ತಿವೆ. ಹೀಗಾಗಿ ಜನ ಕೂಡ, ಸರ್ಕಾರದ ವಿರುದ್ಧವೇ ರೊಚ್ಚಿಗೆದ್ದಿದ್ದಾರೆ. ಹೇಗಾದ್ರೂ ಮಾಡಿ ಈ ತಿಗಣೆ ಕಾಟದಿಂದ ಮುಕ್ತಿ ಕೊಡಿಸಿ ಅಂತಿದ್ದಾರೆ.

ಫ್ರಾನ್ಸ್ ತಿಗಣೆ ವಿಡಿಯೋ ವೈರಲ್!
ಇನ್ನು ಸೋಷಿಯಲ್ ಮೀಡಿಯಾದಲ್ಲಿ ಕೂಡ ಫ್ರಾನ್ಸ್ ಪರಿಸ್ಥಿತಿ ಬಿಂಬಿಸುವ ವಿಡಿಯೋಸ್ ವೈರಲ್ ಆಗುತ್ತಿವೆ. ಅದರಲ್ಲೂ ಪ್ಯಾರಿಸ್‌ನ ಅಪಾರ್ಟ್‌ಮೆಂಟ್, ಹೋಟೆಲ್, ಚಿತ್ರಮಂದಿರ ಸೇರಿದಂತೆ ಸಾರ್ವಜನಿಕ ಸ್ಥಳದಲ್ಲಿ ಭಯದ ವಾತಾವರಣ ಉಂಟಾಗಿದೆ. ಏಕೆಂದರೆ ಇಂಥ ತಿಗಣೆ ಕಾಟದಿಂದ ನಾನಾ ಭಯಾನಕ ರೋಗಗಳು ಜನರನ್ನು ಕಾಡುತ್ತವೆ. ಅದರಲ್ಲೂ ಈ ಸಮಯದಲ್ಲೇ, ವಿದೇಶಿ ಕ್ರೀಡಾಪಟುಗಳು ಮುಂದಿನ ವರ್ಷ ಒಲಿಂಪಿಕ್ಸ್ ಕ್ರೀಡಾಕೂಟಕ್ಕಾಗಿ ಫ್ರಾನ್‌ಗೆ ಬಂದಾಗ ಈ ತಿಗಣೆ ಕಾಟವನ್ನು ಹೇಗೆ ಎದುರಿಸುತ್ತಾರೋ ಗೊತ್ತಿಲ್ಲ!
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications