ಪ್ಯಾಂಡೋರಾ ಪೇಪರ್: ಕಪ್ಪು ಹಣ ಕಾಪಿಡುವವರ ಪಟ್ಟಿಯಲ್ಲಿ ಯಾರಿದ್ದಾರೆ?
ನವದೆಹಲಿ, ಅಕ್ಟೋಬರ್ 04: ಕಪ್ಪು ಹಣ, ಗುಪ್ತನಿಧಿ ಇರಿಸಿಕೊಂಡಿರುವ ಸೆಲೆಬ್ರಿಟಿಗಳ ಪಟ್ಟಿ ಬಹಿರಂಗ ಪಡಿಸಿದ್ದ ಪನಾಮಾ ಪೇಪರ್ಸ್ ನಂತರ ಇದೀಗ ಪ್ಯಾಂಡೋರಾ ಪೇಪರ್ ಸದ್ದು ಮಾಡುತ್ತಿದೆ. ಮಾಜಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಕೂಡಾ ಪನಾಮಾ ಪೇಪರ್ ಸೋರಿಕೆ ನಂತರ ಹೊರದೇಶದಲ್ಲಿನ ಅರ್ಥಿಕ ವ್ಯವಹಾರ ಅಂತ್ಯಗೊಳಿಸಲು ಯತ್ನಿಸಿದ್ದರು ಎಂಬುದನ್ನು ತಿಳಿಸಿದೆ.
Recommended Video
ಪ್ಯಾಂಡೋರಾ ಪೇಪರ್ ಸೋರಿಕೆಯಲ್ಲಿ ಸುಮಾರು 11.9 ಮಿಲಿಯನ್ ದಾಖಲೆ ಇದೆ. ಇದು ಪನಾಮ, ದುಬೈ, ಮೊನಾಕೊ, ಸ್ವಿಟ್ಜರ್‌ಲ್ಯಾಂಡ್ ಮತ್ತು ಕೇಮನ್ ದ್ವೀಪಗಳಂತಹ ಪ್ರದೇಶದಲ್ಲಿ ಕಡಲಾಚೆಯ ವ್ಯವಹಾರ ಹಾಗೂ ಟ್ರಸ್ಟ್‌ಗಳನ್ನು ರಚಿಸಲು ಶ್ರೀಮಂತ ಗ್ರಾಹಕರಿಂದ ನೇಮಕಗೊಂಡ ಕಂಪನಿಗಳ 11.9 ಮಿಲಿಯನ್ ದಾಖಲೆ ಇದಾಗಿದೆ. ಈ ತನಿಖೆಯನ್ನು ಸುಮಾರು 600 ಪತ್ರಕರ್ತರು ಸೇರಿ ನಡೆಸಿದ್ದಾರೆ ಎಂದು ಹೇಳಲಾಗಿದೆ.
ತನಿಖಾ ಪತ್ರಕರ್ತರ ಅಂತರರಾಷ್ಟ್ರೀಯ ಒಕ್ಕೂಟ(ICIJ) ಭಾನುವಾರದಂದು ಪ್ಯಾಂಡೋರಾ ಪೇಪರ್ ತನಿಖಾ ವರದಿಯನ್ನು ಪ್ರಕಟ ಮಾಡಿದೆ. ಈ ತನಿಖೆಯಲ್ಲಿ ದಿ ಗಾರ್ಡಿಯನ್, ವಾಷಿಂಗ್ಟನ್ ಪೋಸ್ಟ್, ಲೆ ಮೋಂಡೆ, ಬಿಬಿಸಿ ಪನೋರಮಾ ಪತ್ರಕರ್ತರು ಈ ಭಾಗಿಯಾಗಿದ್ದಾರೆ.

ಪ್ಯಾಂಡೋರಾ ಪೇಪರ್ ಸೋರಿಕೆ ವಿವರ:
* ಆರ್ಥಿಕ ಅಪರಾಧ ಎಸಗಿರುವವರು, ಸಂಸದರು ಸೇರಿದಂತೆ 300 ಕ್ಕೂ ಅಧಿಕ ಭಾರತೀಯರ ವಿರುದ್ಧ ದಾಖಲೆ ಬಿಡುಗಡೆ, ಬಹುತೇಕರ ವಿರುದ್ಧ ಈಗಾಗಲೇ ತನಿಖೆ ಜಾರಿಯಲ್ಲಿದೆ
* ಇಂಡಿಯನ್ ಎಕ್ಸ್ ಪ್ರೆಸ್ ವರದಿಯಂತೆ ಉದ್ಯಮಿ ಅನಿಲ್ ಅಂಬಾನಿ ಯುಕೆ ನ್ಯಾಯಾಲಯದಲ್ಲಿ ದಿವಾಳಿ ಎಂದು ಘೋಷಿಸಿಕೊಂಡ ಬಳಿಕವೂ ವಿದೇಶದಲ್ಲಿ 18ಕ್ಕೂ ಅಧಿಕ ಆಸ್ತಿಯನ್ನು ಅಕ್ರಮವಾಗಿ ಹೊಂದಿದ್ದಾರೆ.
* ಬಯೋಕಾನ್ ಪ್ರವರ್ತಕರಾದ ಕಿರಣ್ ಮಜುಂದಾರ್ ಶಾ ಅವರ ಪತಿ ಒಡೆತನದ ಟ್ರಸ್ಟ್ ನಲ್ಲಿ ಸೆಬಿಯಿಂದ ನಿಷೇಧಕ್ಕೊಳಗಾಗಿರುವ ವ್ಯಕ್ತಿಗಳಿದ್ದಾರೆ.
* ನೀರವ್ ಮೋದಿ ದೇಶದಿಂದ ಪರಾರಿಯಾಗುವುದಕ್ಕು ತಿಂಗಳ ಮುಂಚಿತವಾಗಿ ಅವರ ಸೋದರಿ ಟ್ರಸ್ಟ್ ಸ್ಥಾಪಿಸಿದ್ದರು.
* ಪನಾಮಾ ಪೇಪರ್ ಸೋರಿಕೆ ನಂತರ ಭಾರತದ ಸೆಲೆಬ್ರಿಟಿಗಳು ಗೊಂದಲಕ್ಕೀಡಾದರು, ಸಾಗರೋತ್ತರ ವ್ಯವಹಾರ, ಆಸ್ತಿಯನ್ನು ಕಾಪಾಡಿಕೊಳ್ಳುವುದು ಹಾಗೂನಿಧಿ ಕರಗಿಸುವುದರಲ್ಲಿ ತೊಡಗಿದರು. ಈ ಪೈಕಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪ್ರಮುಖರು ಎಂದು ಸಂಸ್ಥೆ ಹೇಳಿದೆ.
* ಗಾರ್ಡಿಯನ್ ವರದಿ ಪ್ರಕಾರ, ಜೋರ್ಡನ್ ದೊರೆ 2ನೇ ಅಬ್ದುಲ್ಲಾ ರಹಯ್ಸವಾಗಿ 100 ಮಿಲಿಯನ್ ಮೌಲ್ಯದ ಆಸ್ತಿಯನ್ನು ಯುಎಸ್ ಹಾಗೂ ಯುಕೆನಲ್ಲಿ ಹೊಂದಿದ್ದು, ಮಲಿಬುನಲ್ಲಿರುವ ಬಂಗಲೆಯೂ ಸೇರಿದೆ.
* ಪಾಕ್ ಪ್ರಧಾನಿ ಇಮ್ರಾನ್ ಖಾನ್ ಆಪ್ತರು ಸೇರಿದಂತೆ 700ಕ್ಕೂ ಅಧಿಕ ಮಂದಿ ಹೆಸರು ಉಲ್ಲೇಖಿಸಲಾಗಿದೆ. ಹಣಕಾಸು ಸಚಿವ ಶೌಕತ್ ತಾರಿನ್, ಜಲಸಂಪನ್ಮೂಲ ಸಚಿವ ಮೂನಿಸ್ ಎಲಾಹಿ, ಸೆನೆಟರ್ ಫೈಸಲ್ ವಾವ್ಡಾ, ಕೈಗಾರಿಕೆ ಮತ್ತು ಉತ್ಪಾದನೆ ಸಚಿವರಾದ ಖುಸ್ರೋ ಬಕ್ತಿಯಾರ್ ಕುಟುಂಬದ ಹೆಸರು ಇದೆ ಎನ್ನಲಾಗಿದೆ
* ಉಕ್ರೇನ್ ಅಧ್ಯಕ್ಷ, ಕೀನ್ಯಾ, ಈಕ್ವೆಡಾರ್, ಜೆಕ್ ಪ್ರಧಾನಿ, ಯುಕೆ ಮಾಜಿ ಪ್ರಧಾನಿ ಟೋನಿ ಬ್ಲೇರ್ ಹೆಸರು ಸೇರಿದೆ.
* ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಆರ್ಥಿಕ ವ್ಯವಹಾರ ಬಹಿರಂಗಪಡಿಸಿದೆ. ಯುಎಸ್, ರಷ್ಯಾ, ಟರ್ಕಿ ಹಾಗೂ ಇತರೆ ದೇಶದ ಉದ್ಯಮಿಗಳ ಹೆಸರುಗಳಿವೆ.
* 2016ರಲ್ಲಿ ಹೊರ ಬಂದ ಪನಾಮಾ ಪೇಪರ್ಸ್ ಗಿಂತ ದೊಡ್ಡ ಪ್ರಮಾಣದ ಮಾಹಿತಿ ಬಹಿರಂಗ ಇದಾಗಿದೆ.
ಪನಾಮಾ ಪೇಪರ್:
ಅಮೆರಿಕದ ಪನಾಮಾದ ಸಂಸ್ಥೆಯೊಂದು ವಿಶ್ವದಲ್ಲೆಡೆ ಇರುವ ಹಲವಾರು ಕ್ಷೇತ್ರದ ಗಣ್ಯರ ಪಟ್ಟಿಯನ್ನು 2016ರಲ್ಲಿ ಹೊರ ಹಾಕಿತ್ತು. ಈ ಪಟ್ಟಿಯಲ್ಲಿ ಸಿನಿಮಾ, ಸಂಗೀತ, ರಾಜಕೀಯ ಕ್ಷೇತ್ರದ ಗಣ್ಯರನ್ನು ಒಳಗೊಂಡ 500ಕ್ಕೂ ಅಧಿಕ ಭಾರತ ಮೂಲದ ಸೆಲೆಬ್ರಿಟಿಗಳ ಹೆಸರಿತ್ತು.












Click it and Unblock the Notifications