Pakistan Airbase Attacked: ಪಂಜಾಬ್ ವಾಯುನೆಲೆ ಮೇಲೆ ಭಯೋತ್ಪಾದಕರ ಭೀಕರ ದಾಳಿ: 9 ಉಗ್ರರ ಹತ್ಯೆ, ವಿವರ

ನವದೆಹಲಿ, ನವೆಂಬರ್‌ 04: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಮಿಯಾನ್‌ವಾಲಿ ತರಬೇತಿ ವಾಯುನೆಲೆಯಲ್ಲಿ ಶನಿವಾರ ಮುಂಜಾನೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಭಯೋತ್ಪಾದಕ ದಾಳಿಯನ್ನು ವಿಫಲಗೊಳಿಸಿರುವುದಾಗಿ ಪಾಕಿಸ್ತಾನದ ಸೇನೆ ಶನಿವಾರ ತಿಳಿಸಿದೆ.

ವಾಯುನೆಲೆಯನ್ನು ಪ್ರವೇಶಿಸುವ ಮೊದಲು ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಉಳಿದವರನ್ನು ಮೇಲೆ ಪರಿಣಾಮಕಾರಿಯಾಗಿ ಪ್ರತಿದಾಳಿ ಮಾಡಲಾಯಿತು. ಪಾಕಿಸ್ತಾನ ಸೇನೆಯ ಗುಂಡಿಗೆ ಭಯೋತ್ಪಾದಕರು ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.

Pakistans Mianwali Air Base Terror Attack: 9 Militants Killed in Swift Response

'ಪಡೆಗಳ ತ್ವರಿತ ಮತ್ತು ಪರಿಣಾಮಕಾರಿ ಪ್ರತಿಕ್ರಿಯೆಯಿಂದಾಗಿ ದಾಳಿಯನ್ನು ವಿಫಲಗೊಳಿಸಲಾಗಿದೆ. ಸಿಬ್ಬಂದಿ, ಆಸ್ತಿಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸಲಾಗಿದೆ' ಎಂದು ಪಾಕ್ ಸೇನೆಯ ಅಧಿಕೃತ ಪ್ರಕಟಣೆ ತಿಳಿಸಿದೆ.

ದಾಳಿಯಲ್ಲಿ ಮೂರು ವಿಮಾನಗಳು ಮತ್ತು ಇಂಧನ ಟ್ಯಾಂಕರ್ ಹಾನಿಗೊಳಗಾಗಿವೆ ಎಂದು ಪಾಕಿಸ್ತಾನ ಸೇನೆಯು ಮಾಹಿತಿ ನೀಡಿದೆ.

ಇಸ್ಲಾಮಿಕ್ ಭಯೋತ್ಪಾದಕ ಗುಂಪು ತೆಹ್ರೀಕ್-ಎ-ಜಿಹಾದ್ ವಾಯುನೆಲೆಯಲ್ಲಿ ನಡೆದ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.

ಜುಲೈನಲ್ಲಿ ಬಲೂಚಿಸ್ತಾನದ ನೈಋತ್ಯ ಪ್ರಾಂತ್ಯದ ಪಾಕಿಸ್ತಾನಿ ಸೇನಾ ನೆಲೆಯಲ್ಲಿ 12 ಸೈನಿಕರನ್ನು ಕೊಂದಿದ್ದು ಸೇರಿದಂತೆ ಪಾಕಿಸ್ತಾನದಲ್ಲಿ ಈ ಗುಂಪು ಹೈ-ಪ್ರೊಫೈಲ್ ದಾಳಿಗಳ ಸರಣಿಯನ್ನೇ ನಡೆಸಿದೆ.

ದಾಳಿ ನಡೆದ ಪ್ರದೇಶವನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ. ಸಮಗ್ರ ಜಂಟಿ ತೆರವು ಮತ್ತು ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸೇನೆಯ ಅಧಿಕೃತ ಹೇಳಿಕೆ ತಿಳಿಸಿದೆ. ಭದ್ರತಾ ಸಿಬ್ಬಂದಿಗಳಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿಲ್ಲವೆಂಬ ಮಾಹಿತಿ ಲಭ್ಯವಾಗಿದೆ.

ದಾಳಿಯ ಸಮಯದಲ್ಲಿ ಮೂರು ವಿಮಾನಗಳು ಮತ್ತು ಇಂಧನ ಬೌಸರ್‌ಗೆ ಸ್ವಲ್ಪ ಹಾನಿ ಸಂಭವಿಸಿದೆ ಎಂದು ಪಾಕ್‌ ಸೇನೆ ಮತ್ತೊಂದು ಹೇಳಿಕೆ ಬಿಡುಗಡೆ ಮಾಡಿದೆ.

ಪ್ರದೇಶವನ್ನು ಸಂಪೂರ್ಣವಾಗಿ ತೆರವುಗೊಳಿಸಲು ಸಮಗ್ರ ಜಂಟಿ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಇದು ಅಂತಿಮ ಹಂತದಲ್ಲಿದೆ ಎಂದು ಸೇನೆ ಹೇಳಿದೆ.

'ದೇಶದಿಂದ ಭಯೋತ್ಪಾದನೆಯ ಬೆದರಿಕೆಯನ್ನು ತೊಡೆದುಹಾಕಲು ಪಾಕಿಸ್ತಾನದ ಸಶಸ್ತ್ರ ಪಡೆಗಳು ಬದ್ಧವಾಗಿರುತ್ತವೆ' ಎಂದು ಸೇನೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+