ನಗ್ನ ಚಿತ್ರ ಸೋರಿಕೆ: ಮೋದಿಗೆ ಬೆದರಿಕೆ ಹಾಕಿದ್ದ ಪಾಕ್ ಗಾಯಕಿ ಮನರಂಜನಾ ಕ್ಷೇತ್ರಕ್ಕೆ ಗುಡ್‌ಬೈ

ಇಸ್ಲಾಮಾಬಾದ್, ನವೆಂಬರ್ 5: ಹಾವು, ಮೊಸಳೆಗಳನ್ನು ತೋರಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆದರಿಕೆ ಒಡ್ಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿಗೆ ಬಂದಿದ್ದ ಪಾಕಿಸ್ತಾನದ ಗಾಯಕಿ ರಬಿ ಪಿರ್ಜಾದಾ ಮನರಂಜನಾ ಕ್ಷೇತ್ರ ತೊರೆಯಲು ನಿರ್ಧರಿಸಿದ್ದಾರೆ.

ರಬಿ ಪಿರ್ಜಾದಾ ಅವರ ಖಾಸಗಿ ಚಿತ್ರಗಳು ಮತ್ತು ವಿಡಿಯೋಗಳು ಕಳೆದ ವಾರ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿ ವೈರಲ್ ಆಗಿತ್ತು. ರಬಿ ಅವರ ನಗ್ನ ಮತ್ತು ಅರೆನಗ್ನ ಚಿತ್ರಗಳು ಎಲ್ಲೆಡೆ ಹರಿದಾಡುತ್ತಿದ್ದಂತೆ ರಬಿ, ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಗೆ (ಎಫ್‌ಐಎ) ದೂರು ನೀಡಿದ್ದರು.

ಸೋಮವಾರ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ರಬಿ, 'ನಾನು ಶೋಬಿಜ್‌ನಿಂದ ಹೊರಬರುತ್ತಿದ್ದೇನೆ. ಅಲ್ಲಾಹು ನನ್ನ ತಪ್ಪುಗಳನ್ನು ಕ್ಷಮಿಸಲಿ ಮತ್ತು ನನ್ನ ಪರವಾಗಿರುವ ಜನರ ಹೃದಯಗಳನ್ನು ಮೃದುವಾಗಿರಿಸಲಿ' ಎಂದು ಹೇಳಿದ್ದಾರೆ.

 Pakistani Singer Rabi Pirzada Threatend Modi Quits Showbiz

ಸರೀಸೃಪಗಳನ್ನು ಜತೆಯಲ್ಲಿ ಇರಿಸಿಕೊಂಡು ಕಾರ್ಯಕ್ರಮಗಳನ್ನು ನೀಡುವ ಮೂಲಕ ಜನಪ್ರಿಯರಾಗಿದ್ದ ರಬಿ ಪಿರ್ಜಾದಾ, ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಮೋದಿ ವಿರುದ್ಧ ಸತತ ವಾಗ್ದಾಳಿ ನಡೆಸಿದ್ದರು. 'ಮೋದಿ ಅವರಿಗೆ ವಿಶೇಷ ಉಡುಗೊರೆ ಸಿದ್ಧಪಡಿಸಿದ್ದೇನೆ. ನೀವು ನರಕದಲ್ಲಿ ಸಾಯಲು ಸಿದ್ಧರಾಗಿ. ನನ್ನ ಸ್ನೇಹಿತರು ನರಕದಲ್ಲಿ ನಿಮ್ಮ ಜತೆ ಹಬ್ಬ ಮಾಡುತ್ತಾರೆ' ಎಂದು ಹಾವು ಮತ್ತು ಮೊಸಳೆಗಳೊಂದಿಗೆ ಆಟವಾಡುತ್ತಾ ಹೇಳುವ ವಿಡಿಯೋ ವೈರಲ್ ಆಗಿತ್ತು.

 Pakistani Singer Rabi Pirzada Threatend Modi Quits Showbiz

ಅಷ್ಟೇ ಅಲ್ಲದೆ, ಆತ್ಮಾಹುತಿ ಬಾಂಬರ್‌ನಂತೆ ಉಡುಪು ತೊಟ್ಟ ಫೋಟೊ ಹಂಚಿಕೊಂಡು ಮೋದಿಯನ್ನು ಸಾಯಿಸುವುದಾಗಿ ಹೇಳಿದ್ದರು. ಮೋದಿ ಒಬ್ಬ ಹಿಟ್ಲರ್, ತಾನು ಕಾಶ್ಮೀರದ ಮಗಳು ಎಂದು ಹೇಳಿಕೊಂಡಿದ್ದರು. ಅಕ್ರಮವಾಗಿ ಪ್ರಾಣಿಗಳನ್ನು ಹಿಡಿದಿಟ್ಟುಕೊಂಡಿದ್ದಕ್ಕೆ ರಬಿ ವಿರುದ್ಧ ವನ್ಯಜೀವಿ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು. ಕೆಲವರು ಆಕೆಯನ್ನು ಧೈರ್ಯಶಾಲಿ ಎಂದು ಹೊಗಳಿದ್ದರೆ, ಪಾಕಿಸ್ತಾನೀಯರೇ ಆಕೆಯನ್ನು ಟೀಕಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+