ಭಾರತದ ವಿರುದ್ದ ವಿಕೃತ ಪಾಕ್ ಮಾಧ್ಯಮಗಳು: ಚೀನಾ ಫುಲ್ ಗರಂ

ಚೀನಾದ ರಾಕೆಟ್ ದಾಳಿಗೆ 150ಕ್ಕೂ ಹೆಚ್ಚು ಭಾರತದ ಯೋಧರು ಸಾವನ್ನಪ್ಪಿದ್ದಾರೆನ್ನುವ ಪಾಕ್ ಮಾಧ್ಯಮಗಳ ವರದಿ ಆಧಾರರಹಿತ, ನಾವು ಭಾರತದ ವಿರುದ್ದ ದಾಳಿ ನಡೆಸಿಲ್ಲ ಎಂದು ಚೀನಾದ ಸರಕಾರೀ ಸುದ್ದಿಸಂಸ್ಥೆಗಳು ಸ್ಪಷ್ಟ ಪಡಿಸಿವೆ.

ಬೀಜಿಂಗ್, ಜುಲೈ 19 (ಪಿಟಿಐ): ಚೀನಾ ದಾಳಿಯಲ್ಲಿ ಭಾರತದ ಯೋಧರು ಸಾವನ್ನಪ್ಪಿದರು ಎಂದು ಸುಳ್ಳುಸುದ್ದಿ ಹಬ್ಬಿಸಿ ವಿಕೃತ ಸಂತೋಷ ಅನುಭವಿಸುತ್ತಿರುವ ಪಾಕಿಸ್ತಾನದ ಮಾಧ್ಯಮಗಳಿಗೆ ಚೀನಾ ಸರಿಯಾಗಿ ಬಿಸಿಮುಟ್ಟಿಸಿದೆ.

ದೋಕ್ಲಾಂ ವಿಚಾರದಲ್ಲಿ ಭಾರತ ಮತ್ತು ಚೀನಾ ನಡುವೆ ಯುದ್ದದ ಸ್ಥಿತಿ ನಿರ್ಮಾಣವಾಗಿರುವ ಈ ಸಮಯದಲ್ಲಿ, ಚೀನಾದ ರಾಕೆಟ್ ದಾಳಿಗೆ ನೂರೈವತ್ತಕ್ಕೂ ಹೆಚ್ಚು ಭಾರತದ ಯೋಧರು ಸಾವನ್ನಪ್ಪಿದ್ದಾರೆಂದು ಪಾಕ್ ಮಾಧ್ಯಮಗಳು ಸುಳ್ಳುಸುದ್ದಿ ಪ್ರಸಾರ ಮಾಡಿದ್ದವು. (ಭಾರತ, ಚೀನಾ ವಿರಸದ ವೇಳೆಯಲ್ಲಿ ಪಾಕ್ ಶಕುನಿ ವೇಷ)

Pakistani News Report Of China's 'Attack' On India 'Fake': Chinese Media

ಪಾಕಿಸ್ತಾನದ ಮಾಧ್ಯಮಗಳ ವರದಿ ಆಧಾರರಹಿತ, ನಾವು ಭಾರತದ ವಿರುದ್ದ ದಾಳಿ ನಡೆಸಿಲ್ಲ ಎಂದು ಚೀನಾದ ಸರಕಾರೀ ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ಸೋಮವಾರ (ಜುಲೈ 17) ಗಡಿಯಲ್ಲಿ ಚೀನಾ ನಡೆಸಿದ ರಾಕೆಟ್ ದಾಳಿಯಲ್ಲಿ ಭಾರತದ 158 ಯೋಧರು ಸಾವನ್ನಪ್ಪಿದರು ಎಂದು ಪಾಕ್ ಮಾಧ್ಯಮಗಳು ಪ್ರಸಾರ ಮಾಡಿದ್ದವು.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಚೀನಾ, ಪಾಕ್ ಮಾಧ್ಯಮಗಳ ಸುದ್ದಿ ನಂಬಿಕೆಗೆ ಅರ್ಹವಾದದಲ್ಲ, ಇಂತಹ ಸುಳ್ಳುಸುದ್ದಿಗೆ ಯಾರೂ ಬೆಲೆಕೊಡಬೇಕಾಗಿಲ್ಲ ಎಂದು ಚೀನಾ ಸ್ಪಷ್ಟ ಪಡಿಸಿದೆ.

ಪಾಕಿಸ್ತಾನ ಮಾಧ್ಯಮಗಳ ವರದಿಯನ್ನು ಭಾರತ ತಿರಸ್ಕರಿಸಿತ್ತು, ಜೊತೆಗೆ, ಭಾರತದಲ್ಲಿರುವ ಚೀನಾ ರಾಯಭಾರಿ ಕಚೇರಿ ಕೂಡಾ ಪಾಕ್ ವರದಿಯನ್ನು ಸುಳ್ಳಿನ ಪರಮಾವಧಿ ಎಂದು ಹೇಳಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+