• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇನ್ನೂ ಹೆಚ್ಚಿನ ಅಫ್ಘನ್ ನಿರಾಶ್ರಿತರಿಗೆ ಆಶ್ರಯ ನೀಡಲು ಸಾಧ್ಯವಿಲ್ಲ: ಪಾಕಿಸ್ತಾನ

|
Google Oneindia Kannada News

ಇಸ್ಲಾಮಾಬಾದ್, ಸೆಪ್ಟೆಂಬರ್ 16: ಇನ್ನೂ ಹೆಚ್ಚಿನ ಅಫ್ಘನ್ ನಿರಾಶ್ರಿತರಿಗೆ ಆಶ್ರಯ ನೀಡಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಹೇಳಿದೆ.

ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಯೂಸುಫ್ ಇನ್ನುಮುಂದೆ ಆಫ್ಘನ್ ವಲಸಿಗರಿಗೆ ತಮ್ಮ ದೇಶ ನೆಲೆ ಒದಗಿಸಲು ಆಗುವುದಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಹಲವು ಕಾರಣಗಳನ್ನು ಅವರು ನೀಡಿದ್ದಾರೆ.

ಅಫ್ಘಾನಿಸ್ತಾನ ಜೊತೆಗಿನ ವ್ಯವಹಾರಕ್ಕೆ ಪಾಕಿಸ್ತಾನದ ಹೊಸ ಕರೆನ್ಸಿ! ಅಫ್ಘಾನಿಸ್ತಾನ ಜೊತೆಗಿನ ವ್ಯವಹಾರಕ್ಕೆ ಪಾಕಿಸ್ತಾನದ ಹೊಸ ಕರೆನ್ಸಿ!

ಇದೇ ವೇಳೆ ಅವರು ಅಫ್ಘಾನಿಸ್ತಾನ ಜನತೆಯ ಸಹಾಯಕ್ಕೆ ಅಂತಾರಾಷ್ಟ್ರೀಯ ಸಮುದಾಯ ಮುಂದೆ ಬರಬೇಕು. ಆಫ್ಘನ್ ಜನರನ್ನು ವಿಶ್ವ ಕೈಬಿಡಬಾರದು. ಉಗ್ರಗಾಮಿಗಳು ಅಲ್ಲಿನ ಪರಿಸ್ಥಿತಿ ಲಾಭ ಪಡೆಯಲು ಹೊಂಚು ಹಾಕಿದ್ದಾರೆ. ಅದಕ್ಕೆ ಅಂತಾರಾಷ್ಟ್ರೀಯ ಸಮುದಾಯ ಅವಕಾಶ ಕೊಡಬಾರದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ಪಾಕ್ 30 ಲಕ್ಷ ಅಫ್ಘನ್ ವಲಸಿಗರನ್ನು ಸ್ವೀಕರಿಸಿದೆ. ಈಗಾಗಲೇ ಆರ್ಥಿಕ ಸಂಕಷ್ಟದಿಂದ ನಲುಗುತ್ತಿರುವ ಪಾಕ್ ಗೆ ಆಫ್ಘನ್ ವಲಸಿಗ ಸಮಸ್ಯೆ ತಲೆನೋವಾಗಿ ಪರಿಣಮಿಸಿದೆ. ಅವರೆಲ್ಲರನ್ನೂ ಸಲಹುವ ಸಾಮರ್ಥ್ಯ ತಮಗಿಲ್ಲ ಎಂದು ಯೂಸುಫ್ ಸೂಚ್ಯವಾಗಿ ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ಅಫ್ಘನ್ ನಿರಾಶ್ರಿತರಿಗೆ ನೂತನ ಶಿಬಿರ ಸ್ಥಾಪಿಸಿಲ್ಲ ಎಂದು ಪಾಕಿಸ್ತಾನ ಸಚಿವರೊಬ್ಬರು ಸ್ಪಷ್ಟಪಡಿಸಿದ್ದಾರೆ. ತಾಲಿಬಾನ್ ಪಾಕಿಸ್ತಾನ ತನ್ನ ಎರಡನೇ ಮನೆ ಎಂದು ಹೇಳಿತ್ತು, ಇದೀಗ ಅಫ್ಘಾನಿಸ್ತಾನದಿಂದ ಬಂದವರಿಗೆ ನೆಲೆ ನೀಡದಿರುವುದು ತಾಲಿಬಾನ್‌ಗೆ ಪಾಕಿಸ್ತಾನದ ಬೆಂಬಲ ಎಷ್ಟಿದೆ ಎಂಬುದನ್ನು ಸೂಚಿಸುತ್ತದೆ.

ಪಾಕಿಸ್ತಾನದಲ್ಲಿ 30 ಲಕ್ಷ ಅಫ್ಘನ್ ನಿರಾಶ್ರಿತರಿದ್ದಾರೆ, ಅಲ್ಲದೆ ಪಾಕಿಸ್ತಾನಕ್ಕೆ ಪ್ರವೇಶಿಸಲು ಗಡಿ ಬಳಿ ಜನರು ಗುಂಪುಗೂಡಿದ್ದಾರೆ. ಈ ನಡುವೆ ಅಫ್ಘಾನ್‌ನೊಂದಿಗಿನ ಟಾರ್ಕಮ್ ಗಡಿ ಪ್ರದೇಶಕ್ಕೆ ರಶೀದ್ ಅವರು ಭಾನುವಾರ ಭೇಟಿ ನೀಡಿದ್ದರು. ಆ ಬಳಿಕ ಮಾತನಾಡಿದ್ದ ಅವರು, ಟಾರ್ಕಮ್ ಗಡಿ ಪ್ರದೇಶದಲ್ಲಿ ಯಾವುದೇ ಅಫ್ಘನ್ ನಿರಾಶ್ರಿತರಿಲ್ಲ, ನಾವು ಇಲ್ಲಿ ಹೊಸ ಶಿಬಿರಗಳನ್ನು ಸ್ಥಾಪಿಸಿಲ್ಲ ಎಂದು ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಬಿಕ್ಕಟ್ಟು ನಿಯಂತ್ರಣಕ್ಕೆ ಬರುತ್ತಿದೆ. ಹಾಗಾಗಿ ಇನ್ನು ಮುಂದೆ ನಾವು ಅಫ್ಘನ್ ನಿರಾಶ್ರಿತರಿಗೆ ನಾವು ಅವಕಾಶ ನೀಡುವುದಿಲ್ಲ ಎಂದು ಪಾಕಿಸ್ತಾನ ಹೇಳಿತ್ತು. ಆದರೆ, ಸಚಿವರುಗಳು ಅಫ್ಘನ್ ನಿರಾಶ್ರಿತರಿಗೆ ಉಳಿಯಲು ಅವಕಾಶ ನೀಡುವುದಕ್ಕೆ ಸಂಬಂಧಿಸಿದಂತೆ ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಪಾಕಿಸ್ತಾನವನ್ನು ಪ್ರವೇಶಿಸಲು ಅಫ್ಘಾನಿಸ್ತಾನದ 4 ಸಾವಿರ ಜನರಿಗೆ ವೀಸಾ ಮತ್ತು ಪ್ರಯಾಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅಧಿಕೃತವಾಗಿ ಪಾಕಿಸ್ತಾನ ಮಂಜೂರು ಮಾಡಿದೆ.

ಪಾಕಿಸ್ತಾನದಲ್ಲಿ ಅರ್ಧದಷ್ಟು ಅಫ್ಘನ್ ನಿರಾಶ್ರಿತರು ಕಾನೂನು ಬಾಹಿರವಾಗಿ ವಾಸವಿದ್ದಾರೆ. ಅವರು ಈವರೆಗೆ ದೇಶದಲ್ಲಿ ತಮ್ಮ ಹೆಸರನ್ನುನೋಂದಾಯಿಸಿಕೊಂಡಿಲ್ಲ. ಅಧಿಕೃತವಾಗಿ ನೋಂದಾಯಿಸಿಕೊಂಡಿರುವ 15 ಲಕ್ಷ ಜನರು ಮಾತ್ರ ಇಲ್ಲಿ ಉಳಿಯಲು, ಓಡಾಡಲು ಮತ್ತು ವ್ಯವಹಾರ ನಡೆಸುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹೊಂದಿದ್ದಾರೆ ಎಂದು ಪಾಕಿಸ್ತಾನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಫ್ಘಾನಿಸ್ತಾನ ರಾಜಧಾನಿ ಕಾಬುಲ್ ನಲ್ಲಿ ಪಾಕಿಸ್ತಾನದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದ್ದು, ಈ ವೇಳೆ ಪ್ರತಿಭಟನಾಕಾರರನ್ನು ಚದುರಿಸುವ ಸಲುವಾಗಿ ತಾಲಿಬಾನ್ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.

ಕಾಬುಲ್ ನಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿ ಬಳಿ ಪ್ರತಿಭಟನೆ ನಡೆಯುತ್ತಿದ್ದು, ಪಾಕ್ ವಿರುದ್ಧ ಪ್ರತಿಭಟನಾಕಾರರು ಬ್ಯಾನರ್ ಹಾಗೂ ಘೋಷಣಾ ವಾಕ್ಯಗಳನ್ನು ಕೂಗುತ್ತಿದ್ದಾರೆಂದು ವರದಿಗಳು ತಿಳಿಸಿವೆ.

ಅಫ್ಘಾನಿಸ್ತಾನ ರಾಷ್ಟ್ರದ ಆಂತರಿಕ ವಿಚಾರದಲ್ಲಿ ಪಾಕಿಸ್ತಾನ ಮೂಗು ತೂರಿಸುತ್ತಿದ್ದು, ಇದಕ್ಕೆ ವಿರೋಧ ವ್ಯಕ್ತಪಡಿಸಿ ಕಾಬುಲ್ ನಲ್ಲಿ ಪ್ರತಿಭಟನೆ ರ್ಯಾಲಿ ನಡೆಯುತ್ತಿದೆ ಎಂದು ವರದಿಗಳು ತಿಳಿಸಿವೆ.ಅಫ್ಘಾನಿಸ್ತಾನವು 'ಕೈಗೊಂಬೆ ಸರ್ಕಾರ' ಇಟ್ಟುಕೊಂಡು ಆಡಳಿತ ನಡೆಸಲು ಸಾಧ್ಯವಿಲ್ಲ ಹಾಗೂ ನಾವು ಅವರ ಕೈಗೊಂಬೆಯಾಗುವುದೂ ಇಲ್ಲ. ತಾಲಿಬಾನ್‌ಗಳು' ಸರಿಯಾದ ದಿಕ್ಕಿನಲ್ಲಿ 'ಕೆಲಸ ಮಾಡಲು ಮಾತ್ರ ಪ್ರೋತ್ಸಾಹ ನೀಡಬಹುದು ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಬುಧವಾರ ಹೇಳಿದ್ದಾರೆ.

ತಾಲಿಬಾನ್ ಸ್ವಾಧೀನದ ನಂತರ ದೇಶದ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಲು ಪಾಕಿಸ್ತಾನವು ಪದೇ ಪದೇ ತನ್ನ ಅಸ್ತಿತ್ವದ ಬಗ್ಗೆ ಮಾತನಾಡುತ್ತಿದೆ; ಹಕ್ಕಾನಿಗಳಿಗೆ ಸರ್ಕಾರದಲ್ಲಿ ಪಾಲು ದೊರಕಿಸಿಕೊಡುವ ಮೂಲಕ ಅಥವಾ ಉಗ್ರರು ಪಂಜಶೀರ್ . ವಶಪಡಿಸಿಕೊಳ್ಳಲು ಸಹಾಯ ಮಾಡುವ ಮೂಲಕ ತನ್ನ ಬೆಂಬಲವನ್ನು ಬೇರೆಯದೆ ರೀತಿಯಲ್ಲಿ ಪಾಕಿಸ್ತಾನವು ಬೆಂಬಲ ನೀಡುತ್ತಿದೆ ಎಂಬುದು ಈ ಎಲ್ಲಾ ಘಟನೆಗಳ ಮೂಲಕ ಸಮೀಕರಿಸಬಹುದಾಗಿದೆ.

ಸಿಎನ್‌ಎನ್‌ನ ಬೆಕಿ ಆಂಡರ್‌ಸನ್‌ಗೆ ನೀಡಿದ ಸಂದರ್ಶನದಲ್ಲಿ, ಖಾನ್ ಅವರು ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಹಕ್ಕಿನ ಬಗ್ಗೆ ಮಾತನಾಡಿದ್ದಾರೆ, ಹಾಳಾದ ದೇಶಕ್ಕೆ 'ಸ್ವಾತಂತ್ರ್ಯ' ಮತ್ತು ಇನ್ನಷ್ಟು ಅವಕಾಶ ದೊರೆಯಲಿ. ಅಫ್ಘಾನಿಸ್ತಾನದ ಭವಿಷ್ಯವನ್ನು ಯಾರೂ ಊಹಿಸಲು ಸಾಧ್ಯವಿಲ್ಲ ಎಂದು ಖಾನ್ ಹೇಳಿದ್ದಾರೆ.

English summary
Pakistan's national security adviser said Wednesday that his country cannot host any more Afghan refugee for several reasons, including financial constraints.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X